ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಅನುಭವಿ ಸ್ಪಿನ್ನರ್ ಬೆಂಬಲಕ್ಕೆ ನಿಂತ ಮಾಜಿ ನಂಬರ್1 ಬೌಲರ್

Much Better Than People Give Him Credit For: Graeme Swann On R Ashwin

ಇಂಗ್ಲೆಂಡ್ ಕ್ರಿಕೆಟ್ ಕಂಡ ಅದ್ಭುತ ಸ್ಪಿನ್ನರ್ ಅಂದ್ರೆ ಅದು ಗ್ರೇಮ್ ಸ್ವಾನ್. ಏಕದಿನ ಕ್ರಿಕೆಟ್‌ನಲ್ಲಿ ಗ್ರೇಮ್ ಸ್ವಾನ್ ನಂಬರ್ 1 ಬೌಲರ್ ಆಗಿ ಮಿಂಚಿದ್ದವರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ನಂಬರ್ 1 ಎನಿಸಲು ಗ್ರೇಮ್ ಸ್ವಾನ್ ನೀಡಿದ್ದ ಪ್ರದರ್ಶನವೂ ಪ್ರಮುಖ ಕಾರಣವಾಗಿತ್ತು. ಈಗ ಟೀಮ್ ಇಂಡಿಯಾದ ಅನುಭವಿ ಬೌಲರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಭಾರತೀಯ ಪಿಚ್‌ನಲ್ಲಿ ಯಶಸ್ಸು ಕಾಣುತ್ತಿರುವ ಈ ಟೀಮ್ ಇಂಡಿಯಾದ ಬೌಲರ್ ವಿದೇಶದಲ್ಲಿ ಅದರಲ್ಲೂ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಂತ ಪಿಚ್‌ಗಳಲ್ಲಿ ಯಶಸ್ಸು ಸಾಧಿಸಲು ವಿಫರಾಗಿದ್ದಾರೆ. ಆದರೆ ಟೀಮ್ ಇಂಡಿಯಾದ ಈ ಬೌಲರ್‌ಅನ್ನು ಭಾರತೀಯ ಕ್ರಿಕೆಟ್ ಸೂಕ್ತವಾಗಿ ಬಳಸಿಕೊಂಡಿಲ್ಲ ಎಂದು ಸ್ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡುಬಡತನವನ್ನು ಹಿಮ್ಮೆಟ್ಟಿಸಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ 6 ಟೀಮ್ ಇಂಡಿಯಾ ಆಟಗಾರರುಕಡುಬಡತನವನ್ನು ಹಿಮ್ಮೆಟ್ಟಿಸಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ 6 ಟೀಮ್ ಇಂಡಿಯಾ ಆಟಗಾರರು

ಇಂಗ್ಲೆಂಡ್‌ನ ಮಾಜಿ ಸ್ಪಿನ್ ಬೌಲರ್ ಗ್ರೇಮ್ ಸ್ವಾನ್ ಬೆಂಬಲಿಸಿ ಮಾತನಾಡಿದ ಆ ಬೌಲರ್ ಯಾರು ಮುಂದೆ ಓದಿ..

ಗ್ರೇಮ್ ಸ್ವಾನ್ ಮಾತನಾಡಿದ್ದು ಅಶ್ವಿನ್ ಬಗ್ಗೆ

ಗ್ರೇಮ್ ಸ್ವಾನ್ ಮಾತನಾಡಿದ್ದು ಅಶ್ವಿನ್ ಬಗ್ಗೆ

ಕೇರಮ್ ಬೌಲರ್ ಎಂದೇ ಖ್ಯಾತರಾದ ಆರ್ ಅಶ್ವಿನ್‌ ಬೌಲಿಂಗ್ ಬಗ್ಗೆ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಅಶ್ವಿನ್‌ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಗ್ರೇಮ್ ಸ್ವಾನ್ ಅಭಿಪ್ರಾಯ ಹೊರಹಾಕಿದ್ದಾರೆ. ಹೀಗಾಗಿ ಅಲ್ಲಿ ಅಶ್ವಿನ್‌ ವಿಕೆಟ್‌ ಪಡೆಯಲು ಕಷ್ಟಪಟ್ಟಿದ್ದಾರೆ," ಎಂದಿದ್ದಾರೆ ಸ್ವಾನ್.

ವಿದೇಶಿ ಪಿಚ್‌ಗಳಲ್ಲಿ ಅಶ್ವಿನ್ ವೈಫಲ್ಯ

ವಿದೇಶಿ ಪಿಚ್‌ಗಳಲ್ಲಿ ಅಶ್ವಿನ್ ವೈಫಲ್ಯ

'ಭಾರತೀಯ ಪಿಚ್‌ಗಳಲ್ಲಿ ಬೌನ್ಸ್‌ ಇರುವುದಿಲ್ಲ ಆದರೆ ಚೆಂಡು ಹೆಚ್ಚು ತಿರುವು ಪಡೆಯುತ್ತದೆ. ಹೀಗಾಗಿ ಅಶ್ವಿನ್‌ಗೆ ಅಲ್ಲಿ ಹೆಚ್ಚು ಯಶಸ್ಸು ಸಿಕ್ಕಿದೆ. ಆದರೆ ಇಂಗ್ಲೆಂಡ್‌ನಲ್ಲಿ ಸ್ಪಿನ್ನರ್‌ಗಳಿಗೆ ಬ್ಯಾಟಿಂಗ್ ಮಾಡುವುದು ಸುಲಭ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಪಿಚ್ ಸಂಪೂರ್ಣ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ

ಅಶ್ವಿನ್ ಸಾಮರ್ಥ್ಯಕ್ಕೆ ತಕ್ಕ ಸಿಕ್ಕಿಲ್ಲ

ಅಶ್ವಿನ್ ಸಾಮರ್ಥ್ಯಕ್ಕೆ ತಕ್ಕ ಸಿಕ್ಕಿಲ್ಲ

'2018ರಲ್ಲಿ ಅವರು ಇಂಗ್ಲೆಂಡ್‌ಗೆ ಬಂದಾಗ ಮೊದಲ ಟೆಸ್ಟ್‌ನಲ್ಲಿ ಅದ್ಭುತವಾಗಿ ಬೌಲಿಂಗ್‌ ಮಾಡಿದ್ದರು. ಆದರೆ, ಸೌತಾಂಪ್ಟನ್‌ ಟೆಸ್ಟ್‌ಗೂ ಮುನ್ನ ಅವರು ಗಾಯದ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ನಿಜ ಹೇಳುವುದಾದರೆ ಅಶ್ವಿನ್‌ ಅವರ ಸಾಮರ್ಥ್ಯಕ್ಕೆ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ವಿಕೆಟ್‌ ಪಡೆಯಲು ಅವರು ಹೆಚ್ಚೇನೂ ಮಾಡುವ ಅಗತ್ಯವಿಲ್ಲ. ತಮ್ಮಲ್ಲಿನ ನೈಜ ಸಾಮರ್ಥ್ಯವನ್ನು ಬೆಂಬಲಿಸಿದರೆ ಸಾಕು ಎಂದಿದ್ದಾರೆ.

ಕಾಮೆಂಟೇಟರ್ ಆಗಿರುವ ಸ್ವಾನ್

ಕಾಮೆಂಟೇಟರ್ ಆಗಿರುವ ಸ್ವಾನ್

ಏಕದಿನ ಕ್ರಿಕೆಟ್‌ನ ವಿಶ್ವದ ಮಾಜಿ ನಂ.1 ಬೌಲರ್‌ ಗ್ರೇಮ್‌ ಸ್ವಾನ್‌ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್‌ ಸ್ಪಿನ್ನರ್‌ ಆಗಿದ್ದಾರೆ. 2013-14ರಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ ಸ್ವಾನ್ ಈಗ ಕ್ರಿಕೆಟ್‌ ಕಾಮೆಂಟೇಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Story first published: Saturday, July 18, 2020, 9:43 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X