'ಮೈ ಖೇಲ್ ಫ್ಯಾಂಟಸಿ ಲೀಗ್‌' ಸಲಹೆ: ಮುಂಬೈ-ಚೆನ್ನೈ

Posted By:
mykhel fantasy tips mumbai vs chennai on april 7

ಐಪಿಎಲ್‌ 11 ಸೀಸನ್‌ನ ಮೊದಲ ಪಂದ್ಯವೇ ಮದಗಳ ನಡುವಿನ ಕಾದಾಟದಂತಿರುತ್ತದೆ ಎಂಬದುರಲ್ಲಿ ಅನುಮಾನವೇ ಬೇಡ. ಕಳೆದ ಬಾರಿಯ ಚಾಂಪಿಯನ್ ಮುಂಬೈ ಒಂದು ಕಡೆ ಆದರೆ ಐಪಿಎಲ್‌ನ ಸೀಸನ್‌ನಲ್ಲಿ ಅತಿ ಹೆಚ್ಚು ವಿಜಯ ಸಾಧಿಸಿರುವ ಚೆನ್ನೈ ಮತ್ತೊಂದು ಕಡೆ.

ತವರು ನೆಲದಲ್ಲಿ ನಡೆಯುತ್ತಿರುವ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ಸರಣಿಯಲ್ಲಿ ಶುಭಾರಂಭ ಮಾಡಬೇಕೆನ್ನುವ ಗುರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಇದ್ದರೆ. ಎರಡು ವರ್ಷಗಳ ಬಳಿಕ ಅಂಗಳಕ್ಕೆ ಇಳಿದಿರುವ ಚೆನ್ನೈ ಗೆಲುವಿನ ಮೂಲಕ ಅಭಿಮಾನಿಗಳಲ್ಲಿ ಮತ್ತೆ ಭರವಸೆ ಚಿಗುರಿಸಬೇಕು ಎನ್ನುವ ಛಲದೊಂದಿಗೆ ಆಡಲಿದೆ.

ಪಾರ್ವತಿ ನಾಯರ್ XI ಗೆ ಸವಾಲು ಹಾಕಿ, ಬಹುಮಾನ ಗೆಲ್ಲಿ

'ಮೈ ಖೇಲ್‌, ಫ್ಯಾಂಟಸಿ ಲೀಗ್‌' ಆಟಗಾರರಿಗೆ ಯಾವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದೇ ಗೊಂದಲ. ಆದರೆ ಇಲ್ಲಿದೆ ಕೆಲವು ಉಪಯುಕ್ತ ಸಲಹೆ.

ಕಡಿಮೆ ಹಣಕ್ಕೆ ಉತ್ತಮ ಆಯ್ಕೆ
ಸ್ಪೋಟಕ ವಿಕೆಟ್ ಕೀಪರ್‌, ಬ್ಯಾಟ್ಸ್‌ಮನ್‌ ಇಶಾನ್ ಕಿಶಾನ್ ಉತ್ತಮ ಆರ್ಥಿಕ ಆಯ್ಕೆ ಆಗಬಲ್ಲದು. ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಕಿಶನ್‌ಗಿರುವುದರಿಂದ ಬೋನಸ್‌ ಪಾಯಿಂಟ್‌ ಗಳಿಕೆ ಹೆಚ್ಚಾಗಬಹುದು. ಜೊತೆಗೆ ಇಶಾನ್ ಶಿಶನ್ ಕಡಿಮೆ ಮೊತ್ತಕ್ಕೆ ದೊರಕುವ ಆಟಗಾರ.

ನಾಯಕ ಮತ್ತು ಉಪನಾಯಕ
ಐಪಿಎಲ್‌ನ ಅತ್ಯುತ್ತಮ ಆಟಗಾರರಲ್ಲಿ ಮೊದಲಿಗರು ಸುರೇಶ್ ರೈನಾ, ಈ ವರೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಖ್ಯಾತಿ ಅವರ ಹೆಸರಲ್ಲೇ ಇದೆ. ಐಪಿಎಲ್‌ನಲ್ಲಿ ರೈನಾ ಸರಾಸರಿ 40.18 ಅವರ ಸ್ಟ್ರೈಕ್ ರೇಟ್ 144. ಇವರು ನಾಯಕ ಸ್ಥಾನಕ್ಕೆ ಸೂಕ್ತವಾಗಬಹದು. ಉಪನಾಯಕ ಸ್ಥಾನಕ್ಕೆ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸ್‌ನ್ ಉತ್ತಮ ಆಯ್ಕೆ ಆಗಬಲ್ಲರು. ಎರಡು ಬಾರಿ ಸರಣಿ ಸರ್ವೋತ್ತಮ ಗೌರವಕ್ಕೆ ಭಾಜನರಾದ ಏಕೈಕ ಆಟಗಾರ ಶೇನ್ ವ್ಯಾಟ್ಸನ್‌. ಇವರು ಉತ್ತಮ ಓಪನರ್‌ ಕೂಡಾ ಹೌದು, ಜೊತೆಗೆ ಉಪನಾಯಕ ಸ್ಥಾನಕ್ಕೂ ಸೂಕ್ತ.

ಚತುರ ಆಯ್ಕೆ ಇದಾಗಬಹುದೆ
ತಡವಾಗಿ ಐಪಿಎಲ್‌ ಆಡಲು ಪ್ರಾರಂಭಿಸಿದರೂ ಕೇವಲ 32 ಪಂದ್ಯಗಳಲ್ಲಿ 47 ವಿಕೆಟ್ ಗಳಿಸಿರುವ ಇಮ್ರಾನ್ ತಾಹಿರ್ ಉತ್ತಮ ಬೌಲಿಂಗ್ ಆಯ್ಕೆ ಆಗಬಲ್ಲರು. ಶೇನ್ ವಾಟ್ಸನ್‌ ಜೊತೆಗೆ ಮುರಳಿ ವಿಜಯ್ ಇನ್ನಿಂಗ್ಸ್‌ ಓಪನ್‌ ಮಾಡಿದರೆ ಹೇಗೆ?.

ಎಚ್ಚರಿಕೆಯ ಆಯ್ಕೆ
ಶಾರ್ದೂಲ್ ಠಾಕೂರ್ ಕಳೆದ ನಿಧಹಾಸ್ ಟ್ರೋಫಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಅವರ ಬೌಲಿಂಗ್ ಮೊನಚಿನಿಂದ ಕೂಡಿದೆ ಆದರೆ ಕೆಲವು ಸಣ್ಣ ತಪ್ಪುಗಳು ಹೆಚ್ಚು ರನ್ ಬಿಟ್ಟುಕೊಡುವಂತೆಯೂ ಮಾಡಬಲ್ಲವು. ನಿಮ್ಮ ವೈಯಕ್ತಿಕ ನಂಬಿಕೆ ಮೇಲೆ ಶಾರ್ದೂಲ್‌ ಠಾಕೂರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ನನ್ನ ಆಯ್ಕೆಯ ತಂಡ ಇಂತಿದೆ
ಸುರೇಶ್ ರೈನಾ (ನಾಯಕ), ಶೇನ್ ವ್ಯಾಟ್ಸನ್‌ (ಉಪನಾಯಕ), ಇಶಾನ್‌ ಕಿಶನ್ (ಕೀಪರ್‌), ಇಮ್ರಾನ್ ತಾಹಿರ್, ರೋಹಿತ್ ಶರ್ಮಾ, ಇವಿನ್ ಲೂಯಿಸ್, ಜಸ್ಪ್ರೀತ್ ಬುಮ್ರಾ, ಕೆ.ಎಂ.ಆಸೀಫ್, ಪ್ಯಾಟ್ರಿಕ್ ಕುಮ್ಮಿನ್ಸ್‌, ಕ್ರುನಾಲ್ ಪಾಂಡ್ಯಾ, ಕೇಧಾರ್ ಜಾದವ್‌.

(ಸಂಗ್ರಹ: ಕ್ರಿಕ್ ಬ್ಯಾಟಲ್‌)

ಫ್ಯಾಂಟಸಿ ಲೀಗ್ ಪುಟಕ್ಕೆ ಇಲ್ಲಿದೆ ದಾರಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, April 5, 2018, 19:18 [IST]
Other articles published on Apr 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ