ಎಂಎಸ್ ಧೋನಿ ಕಮ್‌ಬ್ಯಾಕ್‌ ಬಗ್ಗೆ ಆಪ್ತ ಗೆಳಯ ರೈನಾ ಬಿಚ್ಚಿಟ್ಟ ಗುಟ್ಟು

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕಮ್‌ಬ್ಯಾಕ್ ವಿಚಾರ ಭಾರಿ ದೊಡ್ಡ ಚರ್ಚೆಯ ವಿಷಯವಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವ ಮಾಜಿ ಹಾಲಿ ಕ್ರಿಕೆಟಿಗರು ಮತ್ತು ವಿಶ್ಲೇಷಕರಿಗೆ ಈ ಪ್ರಶ್ನೆ ಪ್ರತೀಬಾರಿಯೂ ಎದುರಾಗುತ್ತಿದೆ.

ಇದೇ ವಿಚಾರವಾಗಿ ಧೋನಿ ಆಪ್ತ ಗೆಳೆಯ ಸುರೇಶ್ ರೈನಾಗೂ ಪ್ರಶ್ನೆ ಎದುರಾಗಿತ್ತು. ಈ ವೇಳೆ ಸುರೇಶ್ ರೈನಾ ಕೆಲ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಧೋನಿ ಕಮ್‌ಬ್ಯಾಕ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇದು ಕುತೂಹಲವನ್ನು ಮೂಡಿಸಿದೆ.

ಧೋನಿ ಕಮ್‌ಬ್ಯಾಕ್ ಬಗ್ಗೆ ರೈನಾ ಹೇಳಿದ್ದೇನು ಮುಂದೆ ಓದಿ..

ಧೋನಿ ಜೊತೆ ಕ್ಯಾಂಪ್‌ನಲ್ಲಿ ರೈನಾ ಭಾಗಿ

ಧೋನಿ ಜೊತೆ ಕ್ಯಾಂಪ್‌ನಲ್ಲಿ ರೈನಾ ಭಾಗಿ

ಸುರೇಶ್ ರೈನಾ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ. ಈ ಬಾರಿಯ ಐಪಿಎಲ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶಿಬಿರದಲ್ಲಿ ಧೋನಿಯ ಜೊತೆಗೆ ರೈನಾ ಕೂಡ ಪಾಲ್ಗೊಂಡಿದ್ದರು. ಸುಧೀರ್ಘವಾಗಿ ಇಬ್ಬರೂ ಅಭ್ಯಾಸವನ್ನು ನಡೆಸಿದ್ದರು. ಹೀಗಾಗಿ ಸುರೇಶ್ ರೈನಾ ಮಾತು ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ

ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ

ಸುರೇಶ್ ರೈನಾ ಧೋನಿಯ ಬಗ್ಗೆ ಕೇಳಿದ ಪ್ರಶ್ನೆಗೆ ಧೋನಿ ಅಭ್ಯಾಸ ಶಿಬಿರದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವ್ರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಹೊಸತನವನ್ನು ಅಳವಡಿಸಿಕೊಳ್ಳು ಧೋನಿ ಪ್ರಯತ್ನಿಸುತ್ತಿದ್ದಾರೆ, ಚೆನ್ನೈನ ಆ ಸುಡು ಬಿಸಿಲಿನಲ್ಲೂ ಅದ್ಭುತವಾಗಿ ಆಡಿ ದೊಡ್ಡ ದೊಡ್ಡ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ವಯಸ್ಸಿನ ಸೂಚನೆ ನೀಡುತ್ತಿಲ್ಲ

ವಯಸ್ಸಿನ ಸೂಚನೆ ನೀಡುತ್ತಿಲ್ಲ

ಧೋನಿಯ ದೇಹ ವಯಸ್ಸಿನ ಸೂಚನೆಯನ್ನು ನೀಡುತ್ತಿಲ್ಲ ಎಂದಿರುವ ರೈನಾ ಅವರು ಬೇರೆಯದೇ ರೀತಿಯಲ್ಲಿ ಕಾಣುತ್ತಿದ್ದಾರೆ, ವಿಶೇಷವಾದದ್ದನ್ನು ಮಾಡುವ ಪ್ರಯತ್ನದಲ್ಲಿ ಧೋನಿ ಇದ್ದಾರೆ ಎಂದು ಹೇಳಿದರು. ಜನರು ಧೋನಿಯನ್ನು ಯಾವಾಗ ಅಂಗಳದಲ್ಲಿ ಮತ್ತೆ ನೋಡಲಿದ್ದಾರೆ ಎಂದು ಮುಂದೆ ತಿಳಿದುಕೊಳ್ಳಲಿದ್ದಾರೆ ಎಂದು ಹೇಳಿದರು.

ತನ್ನ ಕಮ್‌ಬ್ಯಾಕ್ ಬಗ್ಗೆಯೂ ರೈನಾ ಹೇಳಿಕೆ

ತನ್ನ ಕಮ್‌ಬ್ಯಾಕ್ ಬಗ್ಗೆಯೂ ರೈನಾ ಹೇಳಿಕೆ

ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದ ಸುರೇಶ್ ರೈನಾ ತನ್ನ ಕಮ್‌ಬ್ಯಾಕ್ ಬಗ್ಗೆಯೂ ಮಾತನಾಡಿದ್ದಾರೆ. ಮುಂದಿನ ವಿಶ್ವಕಪ್‌ಗೆ ತಾನು ಕೂಡ ಕಮ್‌ಬ್ಯಾಕ್ ಮಾಡುವ ವಿಶ್ವಾಸವನ್ನು ರೈನಾ ಈ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ತಂಡದಿಂದ ಕೈಬಿಟ್ಟದ್ದಕ್ಕೆ ಸೂಕ್ತ ಕಾರಣವೇ ಇಲ್ಲ

ತಂಡದಿಂದ ಕೈಬಿಟ್ಟದ್ದಕ್ಕೆ ಸೂಕ್ತ ಕಾರಣವೇ ಇಲ್ಲ

ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದ ಸುರೇಶ್ ರೈನಾ 2018ರ ಇಂಗ್ಲೆಂಡ್ ಪ್ರವಾಸದ ನಂತರ ಹೊರಬಿದ್ದರು. ಇದಕ್ಕೆ ರೈನಾ ಯಾವ ಕಾರಣಕ್ಕೆ ತಂಡದಿಂದ ಕೈಬಿಡಲಾಯಿತು ಎಂದು ನನಗೆ ಸರಿಯಾಗಿ ತಿಳಿದಿಲ್ಲ, ಆಯ್ಕೆಗಾರರು ಈ ಬಗ್ಗೆ ಇದುವರೆಗೂ ಸೂಕ್ತಕಾರಣವನ್ನು ನೀಡಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, April 15, 2020, 10:04 [IST]
Other articles published on Apr 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X