14 ಇನ್ನಿಂಗ್ಸ್‌ನಲ್ಲಿ 9 ಅರ್ಧ ಶತಕ ದಾಖಲಿಸಿದರೆ ಕಳಪೆ ಫಾರ್ಮ್ ಅಂತೀರಾ?: ಕೊಹ್ಲಿ ಬೆಂಬಲಕ್ಕೆ ನಿಂತ ಪಾಕ್ ಕ್ರಿಕೆಟಿಗ

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕಗಳಿಸದೆ ಎರಡು ವರ್ಷಗಳು ಕಳೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರೂ ಶತಕ ಬಾರಿಸಲು ಕೊಹ್ಲಿ ವಿಫಲವಾಗಿದ್ದಾರೆ. ಏಕದಿನ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಟೀಕೆಯನ್ನು ಮಾಡುವರ ಮೇಲೆ ಕಿಡಿ ಕಾರಿದ್ದಾರೆ. ಭಾರತದ ಮೂರನೇ ಕ್ರಮಾಂಕದ ಬ್ಯಾಟರ್ ಕಳೆದ 14 ಏಕದಿನ ಇನ್ನಿಂಗ್ಸ್‌ಗಳಲ್ಲಿ 9 ಬಾರಿ ಅರ್ಧ ಶತಕದ ಗಡಿ ದಾಟಿದ್ದಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಎರಡನೇ ಹೈಯೆಸ್ಟ್ ಸ್ಕೋರರ್ ಆಗಿದ್ದರು. 63 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ 51 ರನ್ ಗಳಿಸಿದ್ದರು. ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ಅದ್ಭುತ ಬೆಂಬಲ ನೀಡಿದ್ದ ಶಿಖರ್ ಧವನ್ 79 ರನ್‌ಗಳಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 92 ರನ್‌ಗಳ ಕೊಡುಗೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮಾನ್ ಬಟ್ ವಿರಾಟ್ ಕೊಹ್ಲಿಯ ಫಾರ್ಮ್ ಕಳಪೆ ಎಂದವರಿಗೆ ತಿರುಗೇಟು ನೀಡಿದ್ದಾರೆ. "ಕಳೆದ 14 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 9 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಈ ಅವಧಿಯಲ್ಲಿ ಉಳಿದ ಭಾರತದ ಯಾವ ಆಟಗಾರ ಕೂಡ ಈ ಅವಧಿಯಲ್ಲಿ ಇಷ್ಟು ಅರ್ಧ ಶತಕಗಳಿಸಿದ್ದಾರೆ ಎಂದು ಅನಿಸುತ್ತಿಲ್ಲ. ಇದನ್ನು ನೀವು ಕಳಪೆ ಫಾರ್ಮ್ ಎನ್ನುತ್ತೀರಾದರೆ ಯಾರು ಅತ್ಯುತ್ತಮ ಫಾರ್ಮ್ ಹೊಂದಿದ್ದಾರೆ ಹೇಳಿ. ಆತ ಫಾರ್ಮ್‌ನಲ್ಲಿ ಇಲ್ಲದಿದ್ದರೂ ಅದ್ಭುತವಾಗಿ ಆಡುತ್ತಾರೆ. ಉಳಿದ ಯಾರು ಕೂಡ ಅವರಷ್ಟು ಉತ್ತಮವಾಗಿಲ್ಲ. ಅವರ ಹತ್ತಿರದಲ್ಲಿಯೂ ಯಾರೂ ಇಲ್ಲ" ಎಂದು ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

"ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಉಳಿದ ಕೆಲ ಆಟಗಾರರು ತಂಡದಲ್ಲಿ ಇಲ್ಲದಿದ್ದರೆ ಭಾರತೀಯ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಪರದಾಡಿದಂತೆ ಭಾಸವಾಗುತ್ತದೆ. ತಂಡದ ಉಳಿದ ಆಟಗಾರರು ಇನ್ನೂ ಯುವಕರು. ಹಾಗಾಗಿ ತಂಡದಲ್ಲಿ ಅನುಭವಿಗಳು ಇರುವುದು ಅಗತ್ಯವಾಗಿದೆ. ಹಾಗಾಗಿ ಆ ಆಟಗಾರರನ್ನು ನೋಡಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ" ಎಂದು ಸಲ್ಮಾಬ್ ಬಟ್ ಹೇಳಿಕೆ ನೀಡಿದ್ದಾರೆ.

ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!

ಕೊಹ್ಲಿಯಿಂದ ಜನರು ಏನನ್ನು ನಿರೀಕ್ಷಿಸುತ್ತಾರೆ ಗೊತ್ತಿಲ್ಲ: ಇನ್ನು ವಿರಾಟ್ ಕೊಹ್ಲಿ ಬಗ್ಗೆ ಟೀಕಿಸುವ ಜನರ ಬಗ್ಗೆ ಸಲ್ಮಾನಗ ಬಟ್ ತಮ್ಮ ಅಸಾಧಾನವನ್ನು ಮುಂದುವರಿಸಿದರು. "ಜನರು ವಿರಾಟ್ ಕೊಹ್ಲಿಯಿಂದ ಇನ್ನೂ ಏನನ್ನು ನಿರೀಕ್ಷಿಸುತ್ತಾರೆ ಎಂದು ತಿಳಿದಿಲ್ಲ. ಅವರಿಗಿಂತ ಉತ್ತಮ ಆಯ್ಕೆಯಿದ್ದರೆ ಅವರನ್ನು ಆಡಿಸಿ. ಉತ್ತಮವಾಗಿರುವ ಆಟಗಾರರು ತಂಡದಲ್ಲಿದ್ದಾರೆ ಎಂದು ಹೇಳುತ್ತಿದ್ದೀರಿ. ಆದರೆ ಇದಕ್ಕಿಂತ ಉತ್ತಮವಾಗಿ ಯಾರೂ ಆಡುತ್ತಿಲ್ಲ ಯಾಕೆ? ಅಂದರೆ ನಿಮ್ಮ ಮಾತಿನ ಅರ್ಥ ಶತಕ ಬಾರಿಸುವುದು ಮಾತ್ರ ನಿನ್ನ ಕೆಲಸ ಬೇರೆ ಏನೂ ಅಲ್ಲ ಎಂದು ಹೇಳಿದಂತೆ" ಎಂದು ಸಲ್ಮಾನ್ ಬಟ್ ಹೇಳಿಕೆ ನೀಡಿದ್ದಾರೆ.

South Africa ನೆಲದಲ್ಲಿ ಭಾರತಕ್ಕೆ ಮುಖಭಂಗ,ಇದಕ್ಕೆ ಕಾರಣ Virat!! | Oneindia

ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ. ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅಮೋಘ ಆಟವನ್ನು ಪ್ರದರ್ಶಿಸಿದರು.

For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 18:04 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X