ದಾಖಲೆ ವೀರ ಪೃಥ್ವಿ ವಿಶ್ವಕಪ್ ತಂಡಕ್ಕೆ ನಾಯಕ

Posted By:

ಬೆಂಗಳೂರು, ಡಿಸೆಂಬರ್ 03: ಹತ್ತು ಹಲವು ದಾಖಲೆಗಳನ್ನು ಬರೆದಿರುವ ಯುವ ಆಟಗಾರ ಪೃಥ್ವಿ ಶಾ ಅವರು ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಮೆಂಟ್ ಆಡಲಿರುವ ತಂಡ ಭಾರತ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಮತ್ತೆ ದಾಖಲೆ ಬರೆದ ದ್ರಾವಿಡ್ ಗರಡಿಯ ಹುಡುಗ ಪೃಥ್ವಿ

ಅಂಡರ್ 19 ಐಸಿಸಿ ವಿಶ್ವಕಪ್ ಪಂದ್ಯಾವಳಿಯು ಜನವರಿ 13 ರಿಂದ ಫೆಬ್ರವರಿ 3, 2018ರ ತನಕ ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 08ರಿಂದ ತರಬೇತಿ ಶಿಬಿರ ಆರಂಭವಾಗಲಿದೆ.

Prithvi Shaw to lead India in the U19 World Cup

ಮುಂಬೈನ ಪೃಥ್ವಿ ಹಾಗೂ ಬೆಂಗಾಲದ ಇಶಾನ್ ಪೊರೆಲ್ ಅವರು ಸದ್ಯ ರಣಜಿ ಕ್ವಾರ್ಟರ್ ಫೈನಲ್ ಆಡುತ್ತಿದ್ದು, ಡಿಸೆಂಬರ್ 12ರ ನಂತರ ಬೆಂಗಳೂರಿಗೆ ಬರಲಿದ್ದಾರೆ.

ಕಳೆದ ಬಾರಿ ಬಾಂಗ್ಲಾದೇಶದಲ್ಲಿ ನಡೆದ ಅಂಡರ್ 19 ಟೂರ್ನಮೆಂಟ್ ನ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲು ಕಂಡಿತ್ತು. ಆಸ್ಟ್ರೇಲಿಯಾ ಹಾಗೂ ಭಾರತ ಮೂರು ಬಾರಿ ಪ್ರಶಸ್ತಿ ಗೆದ್ದಿವೆ.

ಭಾರತ ಅಂಡರ್ 19 ತಂಡ : ಪೃಥ್ವಿ ಶಾ (ನಾಯಕ), ಶುಭಂ ಗಿಲ್ (ಉಪ ನಾಯಕ), ಮನೋಜ್ ಕಾಲ್ರ, ಹಿಮಾಂಶು ರಾಣಾ, ಅಭಿಶೇಕ್ ಶರ್ಮ, ರಿಯಾನ್ ಪರಾಗ್, ಅರ್ಯನ್ ಜುಯಾಲ್ (ವಿಕೆಟ್ ಕೀಪರ್), ಹರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಶಿವಮ್ ಮಾವಿ, ಕಮಲೇಶ್ ನಗರ್ ಕೋಟಿ, ಇಶಾನ್ ಪೊರೆಲ್, ಅರ್ಷ್ ದೀಪ್ ಸಿಂಗ್, ಅನುಕುಲ್ ರಾಯ್, ಶಿವಸಿಂಗ್, ಪಂಕಜ್ ಯಾದವ್

ಸ್ಟ್ಯಾಂಡ್ ಬೈ: ಓಂ ಭೋಂಸ್ಲೆ, ರಾಹುಲ್ ಚಾಹರ್, ನಿನಾದ್ ರಾಥ್ವ, ಊರ್ವಿಲ್ ಪಟೇಲ್, ಅದಿತ್ಯ ಠಾಕ್ರೆ

Story first published: Sunday, December 3, 2017, 16:24 [IST]
Other articles published on Dec 3, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ