ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ ದಾಖಲೆ ಸರಿಗಟ್ಟಿ, ಲಕ್ಷ್ಮಣ್ ದಾಖಲೆ ಸರಿದೂಗಿಸಿದ ಚೇತೇಶ್ವರ

Ind v/s Aus 3rd Test : ಸೌರವ್ ಗಂಗೂಲಿ ದಾಖಲೆ ಮುರಿದು ಲಕ್ಷ್ಮಣ್ ದಾಖಲೆ ಸರಿದೂಗಿಸಿದ ಚೇತೇಶ್ವರ್ ಪೂಜಾರ
Pujara goes past Ganguly, equals Laxman with 17th Test century

ಮೆಲ್ಬರ್ನ್, ಡಿಸೆಂಬರ್ 27: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಭಾರತದ ಟೆಸ್ಟ್ ಸ್ಟಾರ್ ಚೇತೇಶ್ವರ ಪೂಜಾರ ಅವರು 17ನೇ ಶತಕ ಪೂರೈಸಿದ್ದಾರೆ. ಇದರೊಂದಿಗೆ ಪೂಜಾರ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಟೆಸ್ಟ್ ದಾಖಲೆಯನ್ನು ಸರಿಗಟ್ಟಿದರಲ್ಲದೆ, ವಿವಿಎಸ್ ಲಕ್ಷ್ಮಣ್ ದಾಖಲೆ ಸರಿದೂಗಿಸಿಕೊಂಡಿದ್ದಾರೆ (ಚಿತ್ರ ಕೃಪೆ: ಬಿಸಿಸಿಐ).

ಎಂಸಿಜಿಯಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿಎಂಸಿಜಿಯಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಗುರುವಾರ (ಡಿಸೆಂಬರ್ 27) ನಡೆದ ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಪೂಜಾರ ಆಕರ್ಷಕ 106 ರನ್ ಗಳಿಸಿದರು. ವಿರಾಟ್ ಕೊಹ್ಲಿ 82, ಮಯಾಂಕ್ ಅಗರ್ವಾಲ್ 76, ರೋಹಿತ್ ಶರ್ಮಾ 63 ರನ್ ಕೊಡುಗೆಯಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 443 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು.

188 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಗಂಗೂಲಿ ಒಟ್ಟು 16 ಶತಕಗಳನ್ನು ಬಾರಿಸಿದ್ದಾರೆ. ವೆರಿವೆರಿ ಸ್ಪೆಷಲ್ ಖ್ಯಾತಿಯ ಲಕ್ಷ್ಮಣ್ 17 ಟೆಸ್ಟ್ ಶತಕಗಳನ್ನು ಬಾರಿಸಲು 225 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಗಂಗೂಲಿ ದಾಖಲೆ ಸರಿಗಟ್ಟಲು, ಲಕ್ಷ್ಮಣ್ ಸಾಧನೆ ಸರಿದೂಗಿಸಲು ಪೂಜಾರ 112 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್: ದಾಖಲೆಯಲ್ಲಿ ರಾಹುಲ್ ದ್ರಾವಿಡ್ ಬೆನ್ನು ಹಿಡಿದ ಪೂಜಾರಬಾಕ್ಸಿಂಗ್‌ ಡೇ ಟೆಸ್ಟ್: ದಾಖಲೆಯಲ್ಲಿ ರಾಹುಲ್ ದ್ರಾವಿಡ್ ಬೆನ್ನು ಹಿಡಿದ ಪೂಜಾರ

ಇದಲ್ಲದೆ ಬಾಕ್ಸಿಂಗ್‌ ಡೇ ಟೆಸ್ಟ್ ನಲ್ಲಿ ಶತಕ ಬಾರಿಸಿದ ಭಾರತೀಯ ಸಾಧಕರಲ್ಲಿ ಪೂಜಾರ ಐದನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ (1999-116 ರನ್), ವೀರೇಂದ್ರ ಸೆಹ್ವಾಗ್ (2003-195 ರನ್), ವಿರಾಟ್ ಕೊಹ್ಲಿ (2014-169 ರನ್), ಅಜಿಂಕ್ಯಾ ರಹಾನೆ (2014-147 ರನ್), ಪೂಜಾರ (2018-106 ರನ್) ಈ ಯಾದಿಯಲ್ಲಿ ಮೊದಲ 5 ಸ್ಥಾನಗಳಲ್ಲಿದ್ದಾರೆ.

Story first published: Friday, December 28, 2018, 20:33 [IST]
Other articles published on Dec 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X