ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಐಪಿಎಲ್‌ನಲ್ಲಿ ಮಂಕಡಿಂಗ್ ಮೂಲಕ ಯಾರನ್ನಾದರೂ ಔಟ್ ಮಾಡುತ್ತೇನೆ ಎಂದ ರಾಜಸ್ಥಾನ ರಾಯಲ್ಸ್ ಆಟಗಾರ

Rajasthan Royals All-Rounder Riyan Parag Said That He Going To Someone Out At The Non-Strikers End

ಲಾರ್ಡ್ಸ್‌ ಅಂಗಳದಲ್ಲಿ ನಡೆದ ಮಹಿಳಾ ಏಕದಿನ ಪಂದ್ಯದ ವೇಳೆ ಭಾರತದ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್ ಅವರನ್ನು ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಮಾಡಿದ್ದರು. ಅಂದಿನಿಂದ, ಅವರನ್ನು ರನ್‌ಔಟ್ ಮಾಡಿದ ವಿಧಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಶುಕ್ರವಾರ, ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕ್ಯಾನ್‌ಬೆರಾದಲ್ಲಿ ನಡೆದ ಮೂರನೇ ಟಿ20 ಪಂದ್ಯದ ಸಮಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್‌ಗೆ ತುಂಬಾ ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿ ಬೇಗ ಕ್ರೀಸ್ ಬಿಟ್ಟಿದ್ದಕ್ಕೆ ಎಚ್ಚರಿಕೆ ನೀಡಿದರು. ಇದು ಕೂಡ ಸಾಕಷ್ಟು ಸುದ್ದಿಯಾಗಿತ್ತು.

ರಾಜಸ್ಥಾನ್ ರಾಯಲ್ಸ್ ಆಲ್‌ರೌಂಡರ್ ರಿಯಾನ್ ಪರಾಗ್ ಕೂಡ ನಾನ್‌ ಸ್ಟ್ರೈಕರ್ ರನ್ ಔಟ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ನಾನ್-ಸ್ಟ್ರೈಕರ್ ನ ಕೊನೆಯಲ್ಲಿ ಯಾರನ್ನಾದರೂ ರನ್ ಔಟ್ ಮಾಡಲಿದ್ದೇನೆ ಎಂದು ಹೇಳಿದರು. ಇದು ಈಗ ಸಾಕಷ್ಟು ವೈರಲ್ ಆಗಿದೆ.

Rajasthan Royals All-Rounder Riyan Parag Said That He Going To Someone Out At The Non-Strikers End

ನಾನು ಯಾರನ್ನಾದರೂ ರನ್‌ ಔಟ್ ಮಾಡುತ್ತೇನೆ

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಆಗಿರುವ ಪರಾಗ್, ಮುಂದಿನ ಐಪಿಎಲ್‌ನಲ್ಲಿ ನಾನು ಯಾರನ್ನಾದರೂ ನಾನ್‌ ಸ್ಟ್ರೈಕರ್ಸ್ ಎಂಡ್‌ನಲ್ಲಿ ರನ್‌ ಔಟ್ ಮಾಡುತ್ತೇನೆ. ಆಗ ನನ್ನ ಬಗ್ಗೆಯೂ ಹೆಚ್ಚಿನ ಚರ್ಚೆಯಾಗುತ್ತದೆ ಎಂದು ಹೇಳಿದ್ದಾರೆ.

"ನಾನು ಮುಂದಿನ ವರ್ಷ ಯಾರನ್ನಾದರೂ (ನಾನ್-ಸ್ಟ್ರೈಕರ್ಸ್‌ನಲ್ಲಿ) ರನ್ ಔಟ್ ಮಾಡಲಿದ್ದೇನೆ ಮತ್ತು ಇದು ಟ್ವಿಟರ್ ಚರ್ಚೆಯನ್ನು ಸೃಷ್ಟಿಸಲಿದೆ" ಎಂದು ಪರಾಗ್ ಟ್ವೀಟ್ ಮಾಡಿದ್ದಾರೆ.

Rajasthan Royals All-Rounder Riyan Parag Said That He Going To Someone Out At The Non-Strikers End

ಮಂಕಡಿಂಗ್ ಅಧಿಕೃತ ರನ್‌ಔಟ್ ಎಂದು ಪರಿಗಣನೆ

ಮರ್ರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಂಕಡಿಂಗ್ ಮಾಡುವುದನ್ನು ಅಧಿಕೃತ ರನೌಟ್ ಎಂದು ಘೋಷಿಸಿದೆ. ಹೊಸ ನಿಯಮಗಳ ಪ್ರಕಾರ ಅದು ಅನಧಿಕೃತ ಅಥವಾ ಅನೈತಿಕ ಅಲ್ಲ ಬದಲಾಗಿ ನಿಯಮಗಳ ಪ್ರಕಾರವೇ ಅದನ್ನು ಔಟ್ ಎಂದು ಪರಿಗಣಿಸಲಾಗಿದೆ.

ಟಿ20 ವಿಶ್ವಕಪ್ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, ಭಾಗವಹಿಸುವ 16 ತಂಡಗಳ ನಾಯಕರು ತಮ್ಮ ಬೌಲರ್‌ಗಳು ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಿದರೆ ಅದಕ್ಕೆ ಉತ್ತೇಜನ ನೀಡುತ್ತೀರಾ ಎಂದು ಕೇಳಿದಾಗ ಯಾವ ನಾಯಕನೂ ಕೂಡ ಅದಕ್ಕೆ ಸಹಮತ ಸೂಚಿಸಲಿಲ್ಲ.

ರಾಜಸ್ಥಾನ್ ರಾಯಲ್ಸ್‌ನಲ್ಲಿ ಪರಾಗ್ ಅವರ ಸಹ ಆಟಗಾರರಾಗಿರುವ ಬಟ್ಲರ್ ತಮ್ಮ ವೃತ್ತಿಜೀವನದಲ್ಲಿ ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ಎರಡು ಬಾರಿ ಔಟಾಗಿದ್ದಾರೆ.

Story first published: Saturday, October 15, 2022, 16:56 [IST]
Other articles published on Oct 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X