ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ರವಿ ಶಾಸ್ತ್ರಿಯೇ ಮುಂದುವರಿಕೆ!?

Ravi Shastri to continue as Indias head coach?

ನವದೆಹಲಿ, ಜುಲೈ 27: ಟೀಮ್ ಇಂಡಿಯಾಕ್ಕೆ ಮುಖ್ಯ ಕೋಚ್ ಮತ್ತು ಬೆಂಬಲ ಸಿಬ್ಬಂದಿಗಳನ್ನು ನೇಮಿಸುವುದಕ್ಕಾಗಿ ಇರುವ ಮೂರು ಜನರಿರುವ ಸಮಿತಿಯಲ್ಲಿರುವ ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಮಂಡಳಿಯಿಂದ (ಸಿಒಎ) ನೇಮಿತ ಅಂಶುಮಾನ್ ಗಾಯಕ್ವಾಡ್ ಅವರು ಮುಖ್ಯ ಕೋಚ್‌ಆಗಿ ರವಿಶಾಸ್ತ್ರಿ ಅವರೇ ಮುಂದುವರೆಯಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!

ಶುಕ್ರವಾರ (ಜುಲೈ 26) ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯಕ್ವಾಡ್, ರವಿ ಶಾಸ್ತ್ರಿ ಅವರ ಸ್ಥಾನದಲ್ಲಿ ಬದಲಾವಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಚ್ ಮತ್ತು ಸಿಬ್ಬಂದಿಗಳನ್ನು ಆರಿಸುವ ಸಮಿತಿಯಲ್ಲಿ ಗಾಯಕ್ವಾಡ್, ಭಾರತ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಮತ್ತು ಮಹಿಳಾ ಕ್ರಿಕೆಟ್ ತಂಡ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಇದ್ದಾರೆ.

ಶಹಬಾಝ್‌ಗೆ 10 ವಿಕೆಟ್, ವೆಸ್ಟ್ ಇಂಡೀಸ್ 'ಎ' ವಿರುದ್ಧ ಗೆಲುವಿನತ್ತ ಭಾರತ 'ಎ'ಶಹಬಾಝ್‌ಗೆ 10 ವಿಕೆಟ್, ವೆಸ್ಟ್ ಇಂಡೀಸ್ 'ಎ' ವಿರುದ್ಧ ಗೆಲುವಿನತ್ತ ಭಾರತ 'ಎ'

'ಬೇರೆ ಬೇರೆ ಫಲಿತಾಂಶಗಳನ್ನು ಆಧರಿಸಿ ನ್ಯಾಯವಾಗಿ ಹೇಳೋದಾದ್ರೆ, ರವಿ ಶಾಸ್ತ್ರಿ ತಮ್ಮ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಹೀಗಾಗಿ ರವಿ ಶಾಸ್ತ್ರಿ ಅವರ ಸ್ಥಾನವನ್ನು ಹೊರತುಪಡಿಸಿ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್, ಫಿಸಿಯೋ ಥೆರಪಿಸ್ಟ್ ಮತ್ತು ಕಂಡೀಷನಿಂಗ್ ಇತ್ಯಾದಿ ಸ್ಥಾನಗಳು ಆಯ್ಕೆಗೆ ತೆರೆದಿವೆ,' ಎಂದಿದ್ದಾರೆ.

ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಯುಎಸ್, ನೆರವಿಗೆ ಬಂದ ಬಿಸಿಸಿಐಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಯುಎಸ್, ನೆರವಿಗೆ ಬಂದ ಬಿಸಿಸಿಐ

'ನನ್ನ ಅನಿಸಿಕೆಯ ಪ್ರಕಾರ ಬೇರೆ ಬೇರೆ ಸ್ಥಾನಗಳಿಗಾಗಿ ಅರ್ಜಿ ಸಲ್ಲಿಸಿದವರು ಬಿಸಿಸಿಐ ಮಾನದಂಡಗಳಿಗೆ ಎಷ್ಟರ ಮಟ್ಟಿಗೆ ಹತ್ತಿರವಾಗುತ್ತಾರೋ ಅದರ ಮೇಲೆ ಆಯ್ಕೆ ಅವಲಂಬಿತವಾಗಲಿದೆ,' ಎಂದು ಗಾಯಕ್ವಾಡ್ ಹೇಳಿದ್ದಾರೆ. ಅಂಶುಮಾನ್ ಈ ಹಿಂದೆ 1997/98ರಿಂದ 1999ರ ವರೆಗೆ ಟೀಮ್ ಇಂಡಿಯಾದ ಕೋಚ್ ಆಗಿದ್ದವರು.

Story first published: Saturday, July 27, 2019, 15:42 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X