ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಡೇಜಾಗೆ ಧೋನಿ ನೀಡಿದ ಸಲಹೆಯಿಂದ ಸಿಡಿದಿತ್ತು ಅಂತಿಮ ಓವರ್‌ನಲ್ಲಿ 37 ರನ್ !

Ravindra Jadeja reveals MS Dhonis advice that helped him hit 37 in last over

ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿತ್ತು. ಬೌಲಿಂಗ್ ಸಂದರ್ಭದಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದ್ದ ಆರ್‌ಸಿಬಿ ಅಂತಿಮ ಓವರ್‌ನಲ್ಲಿ ಎಡವಿತ್ತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ ಜಡೇಜಾ ಐದು ಸಿಕ್ಸರ್ ಸಹಿತ 37 ರನ್ ಸಿಡಿಸಿದರು. ಇದು ಚೆನ್ನೈ ಬೃಹತ್ ಮೊತ್ತ ಪೇರಿಸಲು ಕಾರಣವಾಗಿತ್ತು.

ಈ ಪಂದ್ಯದ ಮುಕ್ತಾಯದ ಬಳಿಕ ಆಲ್‌ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ ಎಸೆತವನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟುವಲ್ಲಿ ನಾನ್ ಸ್ಟ್ರೈಕ್‌ನಲ್ಲಿದ್ದ ನಾಯಕ ಎಂಎಸ್ ಧೋನಿ ನೀಡಿದ ಒಂದು ಸಲಹೆ ಉಪಯುಕ್ತವಾಯಿತು ಎಂದಿದ್ದಾರೆ.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಇದಕ್ಕಿಂತ ಅದ್ಭುತ ದಿನ ಇರಲಾರದು

ಇದಕ್ಕಿಂತ ಅದ್ಭುತ ದಿನ ಇರಲಾರದು

ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದ ಮುಕ್ತಾಯದ ನಂತರ ಜಡೇಜಾ ಅವರಲ್ಲಿ ಇದಕ್ಕಿಂತ ಉತ್ತಮವಾದ ದಿನ ಇದೆ ಎನಿಸುತ್ತದೆಯಾ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಜಡೇಜಾ "ಇಲ್ಲ, ನನಗೆ ಅನಿಸುತ್ತಿಲ್ಲ. ನಾನು ಸಾಕಷ್ಟು ಆನಂದಿಸಿದ್ದೇನೆ. ನಿಮ್ಮ ತಂಡ ಗೆಲ್ಲುವಲ್ಲಿ ನಿಮ್ಮ ಪಾತ್ರ ದೊಡ್ಡದಿದ್ದರೆ ಆಗ ಅದು ತುಂಬಾ ತೃಪ್ತಿಕರವಾಗಿರುತ್ತದೆ. ನನ್ನ ಫಿಟ್‌ನೆಸ್, ಕೌಶಲ್ಯ ಎಲ್ಲದರ ಮೇಲೆಯೂ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ಅದಕ್ಕೆ ಇಮದು ಫ್ರತಿಫಲ ದೊರೆತಿದೆ" ಎಂದು ಜಡೇಜಾ ಪ್ರತಿಕ್ರಿಯಿಸಿದರು

ಮಾಹಿ ಭಾಯ್ ನೀಡಿದ ಸಲಹೆ

ಮಾಹಿ ಭಾಯ್ ನೀಡಿದ ಸಲಹೆ

"ಅಂತಿಮ ಓವರ್‌ನಲ್ಲಿ ನಾನು ದೊಡ್ಡ ಹೊಡೆತವನ್ನು ಬಾರಿಸಲು ಎದುರು ನೋಡುತ್ತಿದ್ದೆ. ಆಗ ಮಾಹಿ ಭಾಯ್ ನನಗೆ ಸಲಹೆಯೊಂದನ್ನು ನೀಡಿದರು. ಹರ್ಷಲ್ ಪಟೇಲ್ ಆಫ್‌ಸ್ಟಂಪ್‌ನ ಆಚೆಗೆ ಚೆಂಡೆಸುತ್ತಾನೆ ಎಂದಿದ್ದರು. ನಾನು ಅದಕ್ಕಾಗಿ ಸಿದ್ಧನಾಗಿ ನಿಂತಿದ್ದೆ. ಅದೃಷ್ಟವಶಾತ್ ನನಗೆ ಉತ್ತಮವಾಗಿ ಚೆಂಡು ಬಂದಿತ್ತು. ಹಾಗಾಗಿ 191 ರನ್‌ಗಳಿಸಲು ಸಾಧ್ಯವಾಗಿದೆ" ಎಂದು ಜಡೇಜಾ ಪ್ರತಿಕ್ರಿಯಿಸಿದರು.

ಶೂನ್ಯಕ್ಕೆ ಜೀವದಾನ ಪಡೆದಿದ್ದ ಜಡ್ಡು

ಶೂನ್ಯಕ್ಕೆ ಜೀವದಾನ ಪಡೆದಿದ್ದ ಜಡ್ಡು

ಆರ್‌ಸಿಬಿ ಚೆನ್ನೈ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತ್ತು. ಅದರಲ್ಲೂ ರವೀಂದ್ರ ಜಡೇಜಾ ಒಂದು ರನ್ ಗಳಿಸುವ ಮುನ್ನವೇ ಜೀವದಾನವೊಂದನ್ನು ಪಡೆದುಕೊಂಡಿದ್ದರು. ವಾಶಿಂಗ್ಟನ್ ಸುಂದರ್ ಎಸೆದ ಎಸೆತವನ್ನು ಬಾರಿಸಿದ ಜಡ್ಡು ನೇರವಾಗಿ ಡೇನಿಯಲ್ ಕ್ರಿಶ್ಚಿಯನ್ ಕೈಗೆ ನೀಡಿದ್ದರು. ಆದರೆ ಅದನ್ನು ಅವರು ಕೈಚೆಲ್ಲಿ ತಂಡಕ್ಕೆ ದೊಡ್ಡ ಹಾನಿಯುಂಟಾಗಲು ಕಾರಣರಾದರು. ಇದರ ಲಾಭವನ್ನು ಜಡೇಜಾ ಅದ್ಭುತವಾಗಿ ಬಳಸಿಕೊಂಡರು.

ಅಂಕಪಟ್ಟಿಯಲ್ಲಿ ಚೆನ್ನೈ ಟಾಪ್

ಅಂಕಪಟ್ಟಿಯಲ್ಲಿ ಚೆನ್ನೈ ಟಾಪ್

ಆರ್‌ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವು ಅಂಕಪಟ್ಟಿಯಲ್ಲಿ ಧೋನಿ ಬಳಗ ಮತ್ತೆ ನಂಬರ್ 1 ಸ್ಥಾನ ಅಲಂಕರಿಸಲು ಕಾರಣವಾಗಿದೆ. ಗೆಲುವಿನ ಅಜೇಯ ಓಟವನ್ನು ಮುಂದುವರಿಸಿದ್ದ ಆರ್‌ಸಿಬಿಗೆ ಸಿಎಸ್‌ಗೆ ತಡೆಯೊಡ್ಡಿದೆ. ಹೀಗಾಗಿ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಇಳಿದಿದೆ.

Story first published: Monday, April 26, 2021, 14:35 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X