ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದೊಡ್ಡ ಪಾಠವನ್ನು ಕಲಿಸಿದೆ : ಎಬಿ ಡಿ ವಿಲಿಯರ್ಸ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ ಕ್ಷಮಿಸಿ ಎಂದು ಕೊಹ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಸ್ಟಾರ್ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ಟ್ವೀಟ್ ಮಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

By Mahesh

ಬೆಂಗಳೂರು, ಮೇ 09: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ ಕ್ಷಮಿಸಿ ಎಂದು ಕೊಹ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಸ್ಟಾರ್ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡು, ಈ ಬಾರಿ ಐಪಿಎಲ್ ದೊಡ್ಡ ಪಾಠ ಕಲಿಸಿದೆ ಎಂದಿದ್ದಾರೆ.

ಪ್ಲೇ ಆಫ್ ಹಂತ ತಲುಪಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಮೇ 14ರಂದು ಐಪಿಎಲ್ 10ರ ಕೊನೆ ಪಂದ್ಯವಾಡಲಿದೆ. ಆದರೆ, ಎಬಿ ಡಿ ವಿಲಿಯರ್ಸ್ ಅವರು ಈ ಪಂದ್ಯವನ್ನಾಡುತ್ತಿಲ್ಲ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತರಬೇತಿ ಪಡೆಯಲು ದಕ್ಷಿಣ ಆಫ್ರಿಕಾಕ್ಕೆ ಮರಳುತ್ತಿದ್ದಾರೆ.

RCB's AB de Villiers returns home after learning 'tough lessons' in IPL 2017

ಈ ಬಾರಿ ಐಪಿಎಲ್ ನಲ್ಲಿ 360 ಡಿಗ್ರಿ ಆಟಗಾರ ಎಬಿಡಿ ಅವರು 9 ಪಂದ್ಯಗಳಿಂದ 216ರನ್ ಗಳಿಸಿದ್ದು, 89 ಅಜೇಯ ಅವರ ಗರಿಷ್ಠ ಮೊತ್ತವಾಗಿದೆ. ಸದ್ಯ ಆರ್ ಸಿಬಿ 13 ಪಂದ್ಯಗಳಲ್ಲಿ 2 ಪಂದ್ಯ ಮಾತ್ರ ಗೆದ್ದಿದೆ. ಬೆನ್ನು ನೋವಿನ ಸಮಸ್ಯೆಯಿಂದ ಪೂರ್ಣ ಗುಣಮುಖರಾಗದ ಎಬಿಡಿ ಅವರು ಈ ಟೂರ್ನಿಯಲ್ಲಿ ಆಡಿದ್ದೇ ಸಾಧನೆ ಎನ್ನಬಹುದು.

ಚಾಂಪಿಯನ್ಸ್ ಟ್ರೋಫಿಯಲ್ಲಿ 33 ವರ್ಷ ವಯಸ್ಸಿನ ಎಬಿ ಡಿ ವಿಲಿಯರ್ಸ್ ಅವರು ದಕ್ಷಿಣ ಆಫ್ರಿಕಾ ತಂಡವನ್ನು ಇಂಗ್ಲೆಂಡಿನಲ್ಲಿ ಮುನ್ನಡೆಸಲಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಒಂದೇ ಗುಂಪಿನಲ್ಲಿದ್ದು, ಜೂನ್ 11ರಂದು ಪರಸ್ಪರ ಎದುರಾಗಲಿವೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X