ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿ ತಂಡದ 'ಆಸ್ತಿ'ಯ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದಿಷ್ಟು!

RCB skipper Virat Kohli praises AB de Villiers After Beat Delhi Capitals

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ. ಒಂದು ರನ್‌ಗಳ ಅಂತರದಿಂದ ರಿಷಭ್ ಪಂತ್ ಪಡೆಯನ್ನು ಮಣಿಸಿದ ಕಾರಣ ಮತ್ತೆ ಅಂಕಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಬಳಗ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಓರ್ವ ಆಟಗಾರನನ್ನು ಆರ್‌ಸಿಬಿ ತಂಡದ ಆಸ್ತಿ ಎಂದು ಬಣ್ಣಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನೀಡಿದ ಎಬಿ ಡಿವಿಲಿಯರ್ಸ್ ಸ್ಪೋಟಕ ಅರ್ಧ ಶತಕ ಬಾರಿಸಿದರು. ಈ ಪ್ರದರ್ಶನದಿಂದಾಗಿ ಆರ್‌ಸಿಬಿ 172 ರನ್‌ಗಳ ಸವಾಲಿನ ಗುರಿಯನ್ನು ಡೆಲ್ಲಿ ಪಡೆಗೆ ನೀಡಲು ಸಾಧ್ಯವಾಗಿತ್ತು. ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ 170 ರನ್‌ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೊಹ್ಲಿ ಬಳಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

ಐಪಿಎಲ್ 2021: ಬೆಂಗಳೂರು vs ಡೆಲ್ಲಿ, ರೋಚಕ ಪಂದ್ಯದ ಹೈಲೈಟ್ಸ್‌ಐಪಿಎಲ್ 2021: ಬೆಂಗಳೂರು vs ಡೆಲ್ಲಿ, ರೋಚಕ ಪಂದ್ಯದ ಹೈಲೈಟ್ಸ್‌

ಈತನೇ ತಂಡದ ಆಸ್ತಿ

ಈತನೇ ತಂಡದ ಆಸ್ತಿ

ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮಾತನಾಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಎಬಿ ಡಿವಿಲಿಯರ್ಸ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಆಸ್ತಿ ಎಬಿ ಡಿವಿಲಿಯರ್ಸ್ ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಸ್ಪರ್ಧಾತಕ ಕ್ರಿಕೆಟ್ ಆಡದೆ 5 ತಿಂಗಳು

ಸ್ಪರ್ಧಾತಕ ಕ್ರಿಕೆಟ್ ಆಡದೆ 5 ತಿಂಗಳು

"ಆತ ಸ್ಪರ್ಧಾತ್ಮಕ ಕ್ರಿಕೆಟ್ ಆಡದೆ 5 ತಿಂಗಳಾಯಿತು. ಆದರೆ ಆತನನ್ನು ನೀವು ನೋಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಅನ್ನಿಸಲು ಸಾಧ್ಯವೇ ಇಲ್ಲ. ಆತನಿಗೆ ಹ್ಯಾಟ್ಸ್‌ಆಫ್." ಎಂದು ಕೊಹ್ಲಿ ಹೇಳಿದ್ದಾರೆ.

ನಮಗಾಗಿ ಇಂತಾ ಆಟವನ್ನು ಮುಂದುವರಿಸಿ

ನಮಗಾಗಿ ಇಂತಾ ಆಟವನ್ನು ಮುಂದುವರಿಸಿ

"ನಮಗಾಗಿ ಇಂತಾ ಆಟವನ್ನು ನೀಡುವುದನ್ನು ಮುಂದುವರಿಸಿ, ನನ್ನ ನಿಜವಾದ ಆಸ್ತಿ ಎಬಿ ಡಿವಿಲಿಯರ್ಸ್. ನಾನು ಇದನ್ನು ಮತ್ತೊಮ್ಮೆ ಹೇಳಬಲ್ಲೆ. ಆತ ಕ್ರಿಕೆಟ್ ಆಡದೆ ಐದು ತಿಂಗಳಾಯಿತು. ಆದರೆ ಇವತ್ತಿನ ಪಂದ್ಯವನ್ನೊಮ್ಮೆ ನೋಡಿ!" ಎಂದು ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಇನ್ನಿಂಗ್ಸ್ ಬಗ್ಗೆ ಕೊಹ್ಲಿ ವಿಶೇಷ ಮಾತುಗಳನ್ನು ಆಡಿದ್ದಾರೆ.

75 ರನ್ ಸಿಡಿಸಿದ ಎಬಿಡಿ

75 ರನ್ ಸಿಡಿಸಿದ ಎಬಿಡಿ

ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 42 ಎಸೆತಗಳಲ್ಲಿ 75 ರನ್‌ಗಳನ್ನು ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಇದ್ದವು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 5000 ರನ್‌ಗಳ ಮೈಲಿಗಲ್ಲನ್ನು ಕೂಡ ದಾಟಿದ್ದಾರೆ ಡಿವಿಲಿಯರ್ಸ್.

Story first published: Wednesday, April 28, 2021, 10:28 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X