ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಭಾರತದ ಭವಿಷ್ಯದ ತಾರೆ :ರಾಹುಲ್ ದ್ರಾವಿಡ್

By Mahesh
ದ್ರಾವಿಡ್ ಪ್ರಕಾರ ಈ ಆಟಗಾರ ಭಾರತದ ಭವಿಷ್ಯವಂತೆ | Oneindia kannada
Rishabh has temperament and skills to bat differently: Dravid

ನವದೆಹಲಿ, ಜುಲೈ 22: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಬಗ್ಗೆ ಇಂಡಿಯಾ 'ಎ' ಕೋಚ್ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಯುಕೆ ಪ್ರವಾಸ ಕೈಗೊಂಡಿದ್ದ ಇಂಡಿಯಾ 'ಎ' ತಂಡದಲ್ಲಿದ್ದ ರಿಷಬ್ ಪಂತ್ ಅವರು ಉತ್ತಮ ಪ್ರದರ್ಶನ ನೀಡಿದ್ದರು. ವೆಸ್ಟ್ ಇಂಡೀಸ್ ಎ ಹಾಗೂ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂತ್ ಅರ್ಧಶತಕ ಬಾರಿಸಿದ್ದರು.

ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಿಗಾಗಿ ಭಾರತದ ತಂಡ ಪ್ರಕಟಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಿಗಾಗಿ ಭಾರತದ ತಂಡ ಪ್ರಕಟ

ಕ್ರಿಕೆಟ್ ನ ಮೂರು ಮಾದರಿಗೂ ರಿಷಬ್ ಪಂತ್ ಅವರು ಒಗ್ಗಿಕೊಂಡು ಆಡುವ ಪ್ರತಿಭೆ ಹೊಂದಿದ್ದಾರೆ. ತ್ವರಿತಗತಿಯಲ್ಲಿ ರನ್ ಗಳಿಕೆ, ಆಕ್ರಮಣಕಾರಿ ಆಟವೊಂದೇ ರಿಷಬ್ ಪಂತ್ ಅವರ ಹೆಗ್ಗುರುತಲ್ಲ, ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುವ ಛಾತಿಯನ್ನು ಹೊಂದಿದ್ದಾರೆ ಎಂದು ಬಿಸಿಸಿಐ.ಟಿವಿ ಜತೆ ಮಾತನಾಡುತ್ತಾ ದ್ರಾವಿಡ್ ಹೇಳಿದರು.

2016-17ರ ರಣಜಿ ಸೀಸನ್ ನಲ್ಲಿ 900 ಪ್ಲಸ್ ರನ್ ಗಳಿಸಿ, 100ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದ ಪಂತ್ ಅವರು ಐಪಿಎಲ್ ನಲ್ಲೂ ತಮ್ಮ ಫಾರ್ಮ್ ಮುಂದುವರೆಸಿದರು.

ಐಪಿಎಲ್ ಯಶಸ್ಸಿನಿಂದ ನೆಚ್ಚಿನ ಮರ್ಸಿಡಿಸ್ ಖರೀದಿಸಿದ ರಿಷಬ್ಐಪಿಎಲ್ ಯಶಸ್ಸಿನಿಂದ ನೆಚ್ಚಿನ ಮರ್ಸಿಡಿಸ್ ಖರೀದಿಸಿದ ರಿಷಬ್

ಇಂಡಿಯಾ ಎ ಪರ ಆಡುತ್ತಾ ಇಂಗ್ಲೆಂಡ್ ಲಯನ್ಸ್ ವಿರುದ್ಧ ತ್ರಿಕೋನ ಸರಣಿಯಲ್ಲಿ 64ರನ್ ಹಾಗೂ ವೆಸ್ಟ್ ಇಂಡೀಸ್ ಎ ವಿರುದ್ಧ ಜಯಂತ್ ಯಾದವ್ ಜತೆ 100ರನ್ ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಇಂಡಿಯಾ ಎ ತಂಡದ ಯುಕೆ ಪ್ರವಾಸದಿಂದ ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕೃನಾಲ್ ಪಾಂಡ್ಯ, ಕರುಣ್ ನಾಯರ್ ಅವರು ಟೀಂ ಇಂಡಿಯಾಕ್ಕೆ ಮರಳಳು ಈ ರೀತಿ 'ಶ್ಯಾಡೋ ಪ್ರವಾಸ' ಅನುಕೂಲಕರ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

Story first published: Sunday, July 22, 2018, 17:41 [IST]
Other articles published on Jul 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X