ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Rishabh Pant: ಶೀಘ್ರ ಗುಣಮುಖರಾಗಿ ಎಂದು ರಿಷಬ್‌ ಪಂತ್‌ಗೆ ಹಾರೈಸಿದ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ

Rishabh Pant Health: Team India Players And Coach Wish Rishabh Pant A Speedy Rocovery

ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಬ್‌ ಪಂತ್‌ಗೆ ಶೀಘ್ರದಲ್ಲೇ ಗುಣಮುಖರಾಗಿ ಎಂದು ಭಾರತ ತಂಡದ ಸದಸ್ಯರು, ಕೋಚ್ ರಾಹುಲ್ ದ್ರಾವಿಡ್ ಹಾರೈಸಿದ್ದಾರೆ.

ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರಿಷಬ್‌ ಪಂತ್‌ರ ಅತ್ಯುತ್ತಮ ಟೆಸ್ಟ್‌ ಇನ್ನಿಂಗ್ಸ್‌ಗಳನ್ನು ನೆನಪಿಸಿಕೊಂಡಿದ್ದು, ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದರು.

Ranji Trophy: ಮೊದಲ ಓವರ್​ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆ ನಿರ್ಮಿಸಿದ ಜಯದೇವ್ ಉನದ್ಕತ್Ranji Trophy: ಮೊದಲ ಓವರ್​ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆ ನಿರ್ಮಿಸಿದ ಜಯದೇವ್ ಉನದ್ಕತ್

ಬಿಸಿಸಿಐ ಟ್ವಿಟರ್ ನಲ್ಲಿ ರಾಹುಲ್ ದ್ರಾವಿಡ್ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. "ರಿಷಬ್, ನೀವು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೀರಾ ಎಂದು ಭಾವಿಸುತ್ತೇವೆ. ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಾ ಎನ್ನುವ ಭರವಸೆ ಹೊಂದಿದ್ದೇವೆ. 2022ರಲ್ಲಿ ನೀವು ಟೆಸ್ಟ್ ಇತಿಹಾಸದಲ್ಲಿ ಕೆಲವು ಶ್ರೇಷ್ಠ ಇನ್ನಿಂಗ್ಸ್‌ಗಳನ್ನು ಆಡುವುದನ್ನು ನೋಡುವ ಅದೃಷ್ಟ ನನಗೆ ಸಿಕ್ಕಿದೆ. ತಂಡ ಕಷ್ಟದಲ್ಲಿದ್ದಾಗ ನೀವು ಆಸರೆಯಾದಿರಿ, ಹಲವು ಬಾರಿ ಮಾಡಿರುವಂತೆ ಈ ಬಾರಿ ಕೂಡ ನೀವು ಪುಟಿದೇಳುವಿರಿ ಎಂದು ನನಗೆ ತಿಳಿದಿದೆ" ಎಂದು ರಾಹುಲ್ ದ್ರಾವಿಡ್‌ ಪಂತ್‌ಗೆ ಹಾರೈಸಿದ್ದಾರೆ.

ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಪಂತ್‌ಗೆ ಹಾರೈಸಿದ್ದು, ರಿಷಬ್ ಪಂತ್‌ರನ್ನು ಫೈಟರ್ ಎಂದು ಕರೆದಿದ್ದಾರೆ.

ಭಾರತ ತಂಡ ಮತ್ತು ದೇಶದ ಜನ ನಿಮ್ಮೊಂದಿಗಿದ್ದೇವೆ

ರಿಷಬ್ ಪಂತ್‌ಗೆ ಹಾರೈಸಿರುವ ಹಾರ್ದಿಕ್ ಪಾಂಡ್ಯ, "ಹಾಯ್ ರಿಷಬ್ ಪಂತ್, ನೀವು ಬೇಗನೆ ಚೇತರಿಸಿಕೊಳ್ಳಬೇಕು ಎಂದು ಬಯಸುತ್ತೇನೆ. ನೀವು ಎಂತಹ ಹೋರಾಟಗಾರ ಎನ್ನುವುದು ನನಗೆ ತಿಳಿದಿದೆ. ಈಗ ಸಂದರ್ಭ ನೀವು ಇಷ್ಟಪಡುವ ರೀತಿಯಲ್ಲಿ ಇಲ್ಲ, ಇದು ಜೀವನದ ಭಾಗ. ಎಲ್ಲಾ ಅಡೆತಡೆಗಳನ್ನು ಮೀರಿ ನೀವು ಮತ್ತೆ ಹಿಂದಿರುಗುತ್ತೀರಿ ಎಂದು ನನಗೆ ಗೊತ್ತು. ನನ್ನ ಪ್ರೀತಿ ಮತ್ತು ಹಾರೈಕೆ ಸದಾ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಜೊತೆ ಇಡೀ ತಂಡ ಮತ್ತು ದೇಶದ ಜನ ಇದ್ದಾರೆ ಎಂದು ಹೇಳಿದ್ದಾರೆ.

IND vs SL 1st T20: ಮೊದಲ ಟಿ20 ಪಂದ್ಯಕ್ಕೆ ಆಡುವ 11ರ ಬಳಗ ಆಯ್ಕೆ ಮಾಡಿದ ವಾಸಿಂ ಜಾಫರ್

ಸೂರ್ಯಕುಮಾರ್ ಯಾದವ್ ಹಾರೈಕೆ

ಸೂರ್ಯಕುಮಾರ್ ಯಾದವ್ ಹಾರೈಕೆ

ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತನ್ನ ಸಹಪಾಠಿ ರಿಷಬ್ ಪಂತ್ ಬೇಗನೆ ಗುಣಮುಖರಾಗಬೇಕು ಎಂದು ಹಾರೈಸಿದ್ದಾರೆ. "ನೀವು ಬೇಗನೆ ಗುಣಮುಖರಾಗಬೇಕು ಎಂದು ನಾವೆಲ್ಲ ಬಯಸುತ್ತೇವೆ. ಇದೀಗ ನಿಮ್ಮ ಪರಿಸ್ಥಿತಿ ಏನೆಂದು ತಿಳಿದಿದೆ. ನಿಮ್ಮನ್ನು ಇಡೀ ತಂಡ ಮಿಸ್ ಮಾಡಿಕೊಳ್ಳುತ್ತಿದೆ. ನೀವು ಮರಳಿ ಬರುವವರೆ ಕಾಯಲು ಸಾಧ್ಯವಿಲ್ಲ. ಮೈದಾನದಲ್ಲಿ ನೀವು ಯಾವಾಗಲೂ ಉತ್ತಮ ಹೋರಾಟಗಾರರಾಗಿದ್ದೀರಿ, ನೀವು ಶೀಘ್ರದಲ್ಲೇ ಮತ್ತೆ ಮೈದಾನಕ್ಕೆ ಬರುತ್ತೀರಿ ಎಂದು ನನಗೆ ತಿಳಿದಿದೆ" ಎಂದು ಹೇಳಿದ್ದಾರೆ.

ಇತರ ಆಟಗಾರರಿಂದ ಕೂಡ ಹಾರೈಕೆ

ಇತರ ಆಟಗಾರರಿಂದ ಕೂಡ ಹಾರೈಕೆ

ಸ್ಪಿನ್ನರ್ ಯುಜುವೇಂದ್ರ ಚಹಾಲ್ ಕೂಡ ರಿಷಬ್ ಪಂತ್ ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ. "ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗಿ, ನಾವು ಒಟ್ಟಿಗೆ ಬೌಂಡರಿ ಮತ್ತು ಸಿಕ್ಸರ್ ಬಾರಿಸುತ್ತೇವೆ" ಎಂದು ಹೇಳಿದರು.

ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಕೂಡ ಪಂತ್‌ ಗುಣಮುಖರಾಗುವಂತೆ ಹಾರೈಸಿದ್ದಾರೆ. " ನೀವು ಬೇಗನೆ ಗುಣಮುಖರಾಗಬೇಕೆಂದು ಟೀಂ ಇಂಡಿಯಾ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ, ಶೀಘ್ರದಲ್ಲೇ ನಿಮ್ಮನ್ನು ನೋಡುವ ವಿಶ್ವಾಸವಿದೆ" ಎಂದು ಶುಭಮನ್ ಗಿಲ್ ಗೇಳಿದರು.

ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರ

ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರ

ರಿಷಬ್ ಪಂತ್ ಆರೋಗ್ಯ ಉತ್ತಮವಾಗಿದೆ, ಸೋಂಕಿನ ಭಯದಿಂದಾಗಿ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

ರಿಷಬ್ ಪಂತ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಸೋಂಕಿನ ಭಯದಿಂದಾಗಿ ನಾವು ಅವರನ್ನು ವಿಶೇಷ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲು ಸೂಚನೆ ನೀಡಿದೆವು, ಈಗ ಅವರು ಖಾಸಗಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ನೋಡಲು ಯಾರಿಗೂ ಅವಕಾಶ ನೀಡಲ್ಲ ಎಂದು ಶರ್ಮಾ ಹೇಳಿದ್ದಾರೆ. ಅಲ್ಲದೆ, ಆಸ್ಪತ್ರೆ ಬಳಿ ಅಭಿಮಾನಿಗಳು ಬರಬಾರದು ಎಂದು ಮನವಿ ಮಾಡಿದ್ದಾರೆ.

Story first published: Tuesday, January 3, 2023, 12:55 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X