ಯುವ ಕ್ರಿಕೆಟರ್ ರಿಷಬ್ ಗೆ ಒಲಿದ ಬಹುಕೋಟಿ ಡೀಲ್

Posted By:

ನವದೆಹಲಿ, ಡಿಸೆಂಬರ್ 07: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷತ್ ಪಂತ್ ಅವರು ಬಹುಕೋಟಿ ಡೀಲ್ ಗೆ ಸಹಿ ಹಾಕಿದ್ದಾರೆ. ಸಾನ್ಸ್ ಪರೆಲ್ಸ್ ಗ್ರೀನ್ ಲ್ಯಾಂಡ್ಸ್ (ಎಸ್ ಜಿ) ಕಂಪನಿ ಜತೆ ಮೂರು ವರ್ಷಗಳ ಅವಧಿಗೆ ಈ ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಒಪ್ಪಂದದ ಮೊತ್ತ ಇನ್ನೂ ತಿಳಿದು ಬಂದಿಲ್ಲ. ಆದರೆ, ಮುಂದಿನ ಮೂರು ವರ್ಷಗಳ ಕಾಲ ಎಸ್ ಜಿ ಕ್ರಿಕೆಟ್ ಉತ್ಪನ್ನಗಳ ಪರ ರಿಷಬ್ ಪಂತ್ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ (ಪಿಎಂಜಿ) ಅಧಿಕೃತ ಪ್ರಕಟಣೆ ಹೊರಡಿಸಿದೆ.

Rishabh Pant signs mutli-crore deal with cricket equipment manufacturers SG

ಅಂಡರ್ 19 ಕ್ರಿಕೆಟ್ ತಂಡದ ಸ್ಟಾರ್ ಆಟಗಾರ,ದೆಹಲಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ ರಿಷಬ್ ಅವರು ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ 48 ಎಸೆತಗಳಲ್ಲೇ 100ರನ್ ಚೆಚ್ಚಿ ದಾಖಲೆ ಬರೆದಿದ್ದರು. ಇದಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ತ್ರಿಶತಕ ಬಾರಿಸಿದ್ದಾರೆ. ಭವಿಷ್ಯದ ತಾರೆ ರಿಷಬ್ ಪಂತ್ ಅವರನ್ನು ಬೆಳೆಸುವ ನಿಟ್ಟಿ
ಲ್ಲಿ ಎಸ್ ಜಿ ಕಂಪನಿ ಈ ಒಪ್ಪಂದ ಮಾಡಿಕೊಂಡಿದೆ. (ಪಿಟಿಐ)

Story first published: Wednesday, December 7, 2016, 15:15 [IST]
Other articles published on Dec 7, 2016
Read in English: English

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ