ರೋಹಿತ್ ದಾಖಲೆ: ಏಕದಿನ ಕ್ರಿಕೆಟ್ ನಲ್ಲಿ 150 ಸಿಕ್ಸರ್

Posted By:

ಕಾನ್ಪುರ್, ಅಕ್ಟೋಬರ್ 30: ಟೀ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್ಲಿ 150 ಸಿಕ್ಸರ್ ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಅವರು ಈ ಸಾಧನೆಯನ್ನು ಮಾಡಿದ್ದಾರೆ.

Rohit Sharma becomes the second quickest to 150 sixes in ODIs

171ಪಂದ್ಯ ಹಾಗೂ 165ನೇ ಇನ್ನಿಂಗ್ಸ್ ನಲ್ಲಿ 150 ಸಿಕ್ಸರ್ ಗಳಿಸಿದ್ದಾರೆ. ಆದರೆ, ಅತ್ಯಂತ ವೇಗವಾಗಿ 150ಸಿಕ್ಸ್ ಸಿಡಿಸಿದ ದಾಖಲೆ ಪಾಕಿಸ್ತಾನದ ಶಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ ಅವರು 160 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ ಕೂಡಾ ಇದ್ದು ಈ ಮೂವರು 200 ಸಿಕ್ಸರ್ ಗಡಿ ದಾಟುವ ನಿರೀಕ್ಷೆಯಿದೆ. ಮಿಕ್ಕಂತೆ ಮಾಜಿ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಬ್ರೆಂಡನ್ ಮೆಕಲಮ್, ಸನತ್ ಜಯಸೂರ್ಯ ಹೆಸರುಗಳಿವೆ.

ತ್ವರಿತವಾಗಿ 150 ಸಿಕ್ಸರ್ ಗಳಿಸಿದವರು:
* ಶಾಹೀದ್ ಅಫ್ರಿದಿ 164 ಪಂದ್ಯ, 160 ಇನ್ನಿಂಗ್ಸ್
* ರೋಹಿತ್ ಶರ್ಮ 171 ಪಂದ್ಯ, 165 ಇನ್ನಿಂಗ್ಸ್
* ಎಬಿ ಡಿವಿಲಿಯರ್ಸ್ 183 ಪಂದ್ಯ, 176 ಇನ್ನಿಂಗ್ಸ್
* ಕ್ರಿಸ್ ಕ್ರೈನ್ಸ್ 210 ಪಂದ್ಯ, 189 ಇನ್ನಿಂಗ್ಸ್
* ಎಂಎಸ್ ಧೋನಿ 215 ಪಂದ್ಯ, 192 ಇನ್ನಿಂಗ್ಸ್


ಒಟ್ಟಾರೆ ಅತ್ಯಧಿಕ ಸಿಕ್ಸರ್ ಗಳಿಕೆ
351 ಸಿಕ್ಸರ್ : ಶಾಹೀದ್ ಅಫ್ರಿದಿ 398 ಪಂದ್ಯ, 369 ಇನ್ನಿಂಗ್ಸ್
270: ಸನತ್ ಜಯಸೂರ್ಯ, 445 ಪಂದ್ಯ, 433 ಇನ್ನಿಂಗ್ಸ್
252: ಕ್ರಿಸ್ ಗೇಲ್, 273 ಪಂದ್ಯ, 268 ಇನ್ನಿಂಗ್ಸ್
213 : ಎಂಎಸ್ ಧೋನಿ, 309 ಪಂದ್ಯ, 265 ಇನ್ನಿಂಗ್ಸ್
202 : ಎಬಿ ಡಿವಿಲಿಯರ್ಸ್, 225 ಪಂದ್ಯ, 215 ಇನ್ನಿಂಗ್ಸ್

Story first published: Monday, October 30, 2017, 6:10 [IST]
Other articles published on Oct 30, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ