ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ: ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!

Rohit Sharma surpassed Virat Kohli's record | Oneindia Kannada
Rohit Sharma goes past Virat Kohli to reclaim World T20I record

ನವದೆಹಲಿ, ನವೆಂಬರ್ 3: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಎಂದಿನ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ಸರದಾರರ ಪಟ್ಟಿಯಲ್ಲಿ ರೋಹಿತ್ ಮತ್ತೆ ವಿಶ್ವ ನಂ.1 ಸ್ಥಾನಕ್ಕೇರಿದ್ದಾರೆ.

ಟೀಮ್ ಇಂಡಿಯಾ ವಿರುದ್ಧ ಟಿ20 ಚೊಚ್ಚಲ ಜಯದ ಇತಿಹಾಸ ಬರೆದ ಬಾಂಗ್ಲಾ!ಟೀಮ್ ಇಂಡಿಯಾ ವಿರುದ್ಧ ಟಿ20 ಚೊಚ್ಚಲ ಜಯದ ಇತಿಹಾಸ ಬರೆದ ಬಾಂಗ್ಲಾ!

ನವದೆಹಲಿಯಲ್ಲಿರುವ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 3) ನಡೆದ ಭಾರತ vs ಬಾಂಗ್ಲಾದೇಶ ನಡುವಣ 1ನೇ ಟಿ20 ಪಂದ್ಯದಲ್ಲಿ ರೋಹಿತ್, ಹೆಚ್ಚು ರನ್‌ ಬಾರಿಸಿಲ್ಲವಾದರೂ ಅನಾಯಾಸವಾಗಿ ದಾಖಲೆ ನಿರ್ಮಾಣವಾಯಿತು.

ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್

ದೆಹಲಿ ಪಂದ್ಯ ರೋಚಕ ಅನ್ನಿಸಿತ್ತಾದರೂ ಅಂತಿಮವಾಗಿ ಬಾಂಗ್ಲಾದೇಶ ಪಂದ್ಯ ಗೆದ್ದು ಇತಿಹಾಸ ಬರೆಯಿತು.

ಟಿ20ಐ ಅತ್ಯಧಿಕ ರನ್

ಟಿ20ಐ ಅತ್ಯಧಿಕ ರನ್

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 67 ಪಂದ್ಯಗಳಲ್ಲಿ 2,450 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಈಗ ಟಿ20ಐ 2,452 ರನ್ ಬಾರಿಸಿರುವ ರೋಹಿತ್ ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿಸದ್ದಾರೆ. ಕೊಹ್ಲಿ ವಿಶ್ರಾಂತಿಯಲ್ಲಿರುವುದು ಒಂದರ್ಥದಲ್ಲಿ ರೋಹಿತ್‌ಗೆ ದಾಖಲೆಯ ಅನುಕೂಲ ನೀಡಿತು.

ಗಳಿಸಿದ್ದು ಬರೀ 9 ರನ್

ಗಳಿಸಿದ್ದು ಬರೀ 9 ರನ್

ದೆಹಲಿ ಪಂದ್ಯದಲ್ಲಿ ಆರಂಭಿರಾಗಿ ಬ್ಯಾಟಿಂಗ್‌ಗೆ ಇಳಿಸಿದ್ದ ನಾಯಕ ರೋಹಿತ್ ಶರ್ಮಾ ಗಳಿಸಿದ್ದು ಬರೀ 9 ರನ್. ಶಫೀಉಲ್ಲ ಇಸ್ಲಾಮ್ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ರೋಹಿತ್ ನಿರಾಸೆ ಅನುಭವಿಸಿದರಾದರೂ ವಿಶ್ವದಾಖಲೆಗೆ ಬೇಕಾದ ರನ್ ಅದಾಗಲೇ ಬಂದಾಗಿತ್ತು. ಆ ಪಂದ್ಯದಲ್ಲಿ ವಿಶ್ವದಾಖಲೆಗಾಗಿ ರೋಹಿತ್‌ಗೆ ಕೇವಲ 8 ರನ್‌ಗಳ ಅಗತ್ಯವಿತ್ತು.

ಇತಿಹಾಸ ನಿರ್ಮಿಸಿದ ಬಾಂಗ್ಲಾ

ಇತಿಹಾಸ ನಿರ್ಮಿಸಿದ ಬಾಂಗ್ಲಾ

ಭಾನುವಾರ ನಡೆದ ಪಂದ್ಯದಲ್ಲಿ ಮುಷ್ಫಿಕರ್ ರಹೀಮ್ ಅಬ್ಬರದ ಅರ್ಧಶತಕದೊಂದಿಗೆ (60 ರನ್) ಬಾಂಗ್ಲಾದೇಶ 7 ವಿಕೆಟ್ ಗೆಲುವನ್ನಾಚರಿಸಿತು. ಇದು ಪ್ರವಾಸಿ ಬಾಂಗ್ಲಾಕ್ಕೆ ಭಾರತದ ವಿರುದ್ಧ ಲಭಿಸಿದ ಚೊಚ್ಚಲ ಟಿ20ಐ ಗೆಲುವು. ಇದಕ್ಕೂ ಹಿಂದೆ 8 ಮುಖಾಮುಖಿಗಳಲ್ಲಿ 8ರಲ್ಲೂ ಬಾಂಗ್ಲಾ ಸೋಲಿನ ಮುಖಭಂಗ ಅನುಭವಿಸಿತ್ತು.

3ನೇ ಸ್ಥಾನದಲ್ಲಿ ಗಪ್ಟಿಲ್

3ನೇ ಸ್ಥಾನದಲ್ಲಿ ಗಪ್ಟಿಲ್

ಟಿ20ಐ ಅತ್ಯಧಿಕ ರನ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, 77 ಇನ್ನಿಂಗ್ಸ್‌ಗಳಲ್ಲಿ 2326 ರನ್ ಗಳಿಸಿದ್ದಾರೆ. 4ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ 104 ಇನ್ನಿಂಗ್ಸ್‌ಗಳಲ್ಲಿ 2263 ರನ್, 5ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 70 ಇನ್ನಿಂಗ್ಸ್‌ಗಳಲ್ಲಿ 2140 ರನ್ ಬಾರಿಸಿದ್ದಾರೆ.

Story first published: Sunday, November 3, 2019, 23:42 [IST]
Other articles published on Nov 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X