ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್

Rohit Sharma on the cusp of overtaking Yuvraj Singh in elite list

ಪೋರ್ಟ್ ಆಫ್‌ ಸ್ಪೇನ್, ಆಗಸ್ಟ್ 14: ಐಸಿಸಿ ವಿಶ್ವಕಪ್ 2019ರಲ್ಲಿ ಐದು ಶತಕಗಳ ವಿಶ್ವ ದಾಖಲೆ ಬರೆದಿದ್ದ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ವಿಶ್ವ ಶ್ರೇಷ್ಠ ಕ್ರಿಕೆಟಿಗ ಅನ್ನೋದನ್ನು ಅದಾಗಲೇ ಮತ್ತೊಮ್ಮೆ ಸಾರಿದ್ದರು. ಭಾರತ vs ವೆಸ್ಟ್ ಏಕದಿನ ಸರಣಿಯಲ್ಲಿ ರೋಹಿತ್ ಇನ್ನೊಂದು ದಾಖಲೆ ಬರೆಯಲಿದ್ದಾರೆ.

ವೇಗಿ ಮೊಹಮ್ಮದ್ ಶಮಿ ದಾಖಲೆ ಮುರಿಯಲಿದ್ದಾರೆ ಕುಲದೀಪ್ ಯಾದವ್ವೇಗಿ ಮೊಹಮ್ಮದ್ ಶಮಿ ದಾಖಲೆ ಮುರಿಯಲಿದ್ದಾರೆ ಕುಲದೀಪ್ ಯಾದವ್

ವೆಸ್ಟ್ ಇಂಡೀಸ್ ಪ್ರವಾಸದಲ್ಲರುವ ವಿರಾಟ್ ಕೊಹ್ಲಿ ಪಡೆ, ಏಕದಿನ ಸರಣಿಯನ್ನಾಡುತ್ತಿದೆ. ದ್ವಿತೀಯ ಏಕದಿನ ಪಂದ್ಯದಲ್ಲಿ 18 ರನ್‌ಗೆ ವಿಕೆಟ್ ಒಪ್ಪಿಸಿದ್ದರಾದರೂ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಮತ್ತೆ ಕ್ರೀಸಿಗಂಟಿ ನಿಲ್ಲೋದನ್ನು ನಿರೀಕ್ಷಿಸಲಾಗಿದೆ.

ಭಾರತ vs ವೆಸ್ಟ್ ಇಂಡೀಸ್, 3ನೇ ಏಕದಿನ, Live ಸ್ಕೋರ್‌ಕಾರ್ಡ್

1
46249

ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ಬುಧವಾರ (ಆಗಸ್ಟ್ 14) ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಯುವ ರಾಜ್ ಸಿಂಗ್ ದಾಖಲೆ ಸರಿಗಟ್ಟಲು ಅವಕಾಶವಿದೆ.

ಆಟ ನಿಲ್ಲಿಸಿದ ಯುವಿ

ಆಟ ನಿಲ್ಲಿಸಿದ ಯುವಿ

ಬಹುಶಃ ಯುವರಾಜ್ ಈಚಿನ ದಿನಗಳಲ್ಲಿ ಏಕದಿನ ತಂಡದಲ್ಲಿ ಇರುತ್ತಿದ್ದರೆ, ರೋಹಿತ್‌ಗೆ ಯುವಿ ದಾಖಲೆ ಸರಿಗಟ್ಟೋದು ಸುಲಭವಿರಲಿಲ್ಲ. ಕ್ಯಾನ್ಸರ್ ಖಾಯಿಲೆಯ ಬಳಿಕ ಭಾರತದ ಆಯ್ಕೆ ಸಮಿತಿಯಿಂದ ಕಡೆಗಣಿಸಲ್ಪಟ್ಟ ಯುವಿ ಅನಂತರ ಭಾರತದ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಸಿಕ್ಸರ್ ಕಿಂಗ್‌ನ ಏಕದಿನ ಒಟ್ಟು ರನ್ ಏರಿಕೆ ಕಾಣದೆ ನಿಂತಿಲ್ಲೇಯಿದೆ.

26 ರನ್ ಬೇಕು

26 ರನ್ ಬೇಕು

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 'ಕೆಚ್ಚೆದೆಯ ಮಹಾರಾಜ' ಯುವಿ ಒಟ್ಟು 304 ಏಕದಿನ ಪಂದ್ಯಗಳಲ್ಲಿ 8701 ರನ್ ಬಾರಿಸಿದ್ದರು. ರೋಹಿತ್ ಶರ್ಮಾ ಒಟ್ಟು 217 ಏಕದಿನ ಪಂದ್ಯಗಳಲ್ಲಿ 8676 ರನ್ ಗಳಿಸಿದ್ದಾರೆ. ಇನ್ನು ರೋಹಿತ್ 26 ರನ್ ಗಳಿಸಿದರೆ ಯುವರಾಜ್ ಏಕದಿನ ಒಟ್ಟು ರನ್ ದಾಖಲೆ ಬದಿಗೆ ಸರಿಯಲಿದೆ.

ಸಚಿನ್‌ಗೆ ಅಗ್ರ ಸ್ಥಾನ

ಸಚಿನ್‌ಗೆ ಅಗ್ರ ಸ್ಥಾನ

ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಧಿಕ ರನ್ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ತೆಂಡೂಲ್ಕರ್ ಒಟ್ಟು 18426 ರನ್ ಗಳಿಸಿದ್ದಾರೆ. ಅನಂತರದ ಸ್ಥಾನಗಳಲ್ಲಿ ವಿರಾಟ್ ಕೊಹ್ಲಿ (11406 ರನ್), ಸೌರವ್ ಗಂಗೂಲಿ (11363 ರನ್), ರಾಹುಲ್ ದ್ರಾವಿಡ್ (10889 ರನ್), ಎಂ.ಎಸ್. ಧೋನಿ (10773 ರನ್ ), ಮೊಹಮ್ಮದ್ ಅಝರುದ್ದೀನ್ (9378 ರನ್), ಯುವರಾಜ್ ಸಿಂಗ್ (8701 ರನ್) ಇದ್ದಾರೆ.

ಸರಣಿಯಲ್ಲಿ ಭಾರತ ಮುನ್ನಡೆ

ಸರಣಿಯಲ್ಲಿ ಭಾರತ ಮುನ್ನಡೆ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಆರಂಭಿಕ ಪಂದ್ಯ ಮಳೆಯ ಕಾರಣ ರದ್ದಾಯಿತಾದರೂ ದ್ವಿತೀಯ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ 59 ರನ್ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ನಾಯಕ ಕೊಹ್ಲಿ 120 ರನ್ (125 ಎಸೆತ) ಸೇರಿಸಿದ್ದರು.

Story first published: Wednesday, August 14, 2019, 12:40 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X