ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಲಂಕಾ: ಬಹಳ ದಿನಗಳ ನಂತರ ತಂಡ ಸೇರಿದ ಸಂಜು ಸ್ಯಾಮ್ಸನ್‌ಗೆ ವಾರ್ನಿಂಗ್ ಕೊಟ್ಟ ರೋಹಿತ್!

Rohit Sharma sends warning to Sanju Samson ahead of t20 series against Sri Lanka

ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಗೊಂಡ ರೋಹಿತ್ ಶರ್ಮಾ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಮತ್ತು ಇತ್ತೀಚಿಗಷ್ಟೆ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಕೂಡ ನೇಮಕಗೊಂಡಿದ್ದಾರೆ. ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್ ತಂಡಗಳಿಗೂ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ತಾವು ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ನಡೆದಿರುವ ಟೀಮ್ ಇಂಡಿಯಾದ ಎಲ್ಲಾ ಸೀಮಿತ ಓವರ್ ಸರಣಿಗಳಲ್ಲಿಯೂ ವೈಟ್ ವಾಷ್ ಸಾಧನೆ ಮಾಡಿದ್ದಾರೆ.

ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!ಪಾಕಿಸ್ತಾನ ಪ್ರವಾಸಕ್ಕೆ 16 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡದ ಮೇಲಿದೆ ಐಪಿಎಲ್ ಎಫೆಕ್ಟ್!

ಇನ್ನು ಇತ್ತೀಚಿಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಿದ್ದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಎರಡೂ ಸರಣಿಗಳಲ್ಲಿಯೂ ಕೂಡ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿತ್ತು. ಹೀಗೆ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ, ಹಾಗೂ ವೆಸ್ಟ್ ಇಂಡೀಸ್‌ ವಿರುದ್ಧದ ಈ ಎರಡೂ ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿರುವ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ವೈಟ್ ವಾಷ್ ಸಾಧನೆ ಮಾಡುವ ತವಕದಲ್ಲಿದೆ. ಇನ್ನು ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಮೊದಲಿಗೆ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಫೆಬ್ರವರಿ 24ರಿಂದ ಫೆಬ್ರವರಿ 27ರವರೆಗೆ ನಡೆಯಲಿದೆ.

PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?

ಇನ್ನು ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಹಾಗೂ ಟೆಸ್ಟ್ ಎರಡೂ ಸರಣಿಗಳಿಗೂ ಕೂಡ ಬಿಸಿಸಿಐ ಈಗಾಗಲೇ 2 ಪ್ರತ್ಯೇಕ ಭಾರತ ತಂಡವನ್ನು ಪ್ರಕಟಿಸಿದ್ದು 18 ಆಟಗಾರರ ಟಿ ಟ್ವೆಂಟಿ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶವನ್ನು ನೀಡಿದೆ. ಶ್ರೀಲಂಕಾ ವಿರುದ್ಧದ ಈ ಟಿ ಟ್ವೆಂಟಿ ಸರಣಿಯಿಂದ ವಿಕೆಟ್ ಕೀಪರ್ ರಿಷಭ್ ಪಂತ್ ವಿಶ್ರಾಂತಿಗೆಂದು ಹೊರಗುಳಿದಿದ್ದು, ಸಂಜು ಸ್ಯಾಮ್ಸನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗೆ ಹಲವಾರು ತಿಂಗಳುಗಳ ನಂತರ ಟೀಮ್ ಇಂಡಿಯಾ ಪರ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿರುವ ಸಂಜು ಸ್ಯಾಮ್ಸನ್ ಅವರಿಗೆ ರೋಹಿತ್ ಶರ್ಮಾ ಸರಣಿ ಆರಂಭಕ್ಕೂ ಮುನ್ನವೇ ಈ ಕೆಳಕಂಡಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ರೋಹಿತ್

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ರೋಹಿತ್

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಂಜು ಸ್ಯಾಮ್ಸನ್ ಕುರಿತಾಗಿ ಮಾತನಾಡಿರುವ ರೋಹಿತ್ ಶರ್ಮಾ ಐಪಿಎಲ್ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಎಲ್ಲರ ಗಮನವನ್ನು ಸೆಳೆಯುವಂಥ ಅತ್ಯುತ್ತಮ ಪ್ರದರ್ಶನವನ್ನು ನೀಡಬಲ್ಲ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ. ಇಂತಹ ಪ್ರತಿಭೆಯನ್ನು ಹಲವಾರು ಕ್ರಿಕೆಟಿಗರು ಹೊಂದಿದ್ದು, ಅದನ್ನು ಯಾವ ರೀತಿ ಬಳಸಬೇಕು ಎನ್ನುವುದು ಕಠಿಣ ಭಾಗವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಮಿಕ್ಕಿದ್ದು ಸಂಜು ಸ್ಯಾಮ್ಸನ್ ಅವರಿಗೆ ಬಿಟ್ಟದ್ದು ಎಂದ ಶರ್ಮಾ

ಮಿಕ್ಕಿದ್ದು ಸಂಜು ಸ್ಯಾಮ್ಸನ್ ಅವರಿಗೆ ಬಿಟ್ಟದ್ದು ಎಂದ ಶರ್ಮಾ

ಹೀಗೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು ಎಂದಿರುವ ರೋಹಿತ್ ಶರ್ಮಾ ಇದೀಗ ಎಲ್ಲಾ ಸಂಜು ಸ್ಯಾಮ್ಸನ್ ಅವರಿಗೆ ಬಿಟ್ಟದ್ದು ಎಂದಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಅವರನ್ನು ಓರ್ವ ಆಟಗಾರನಾಗಿ ಪರಿಗಣಿಸಿದ್ದು ಆತನಲ್ಲಿರುವ ವಿಶೇಷ ಪ್ರತಿಭೆಯಿಂದಲೇ ಅವಕಾಶವನ್ನು ನೀಡಿದೆ, ಹೀಗಾಗಿ ಸಂಜು ಸ್ಯಾಮ್ಸನ್ ಅದನ್ನು ಅರಿಯಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಬ್ಯಾಕ್‌ಫುಟ್ ಹೊಡೆತ ಬಾರಿಸಬಲ್ಲ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ ರೀತಿಯ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ತಂಡದಲ್ಲಿರಬೇಕು ಎಂದಿರುವ ರೋಹಿತ್ ಶರ್ಮಾ ಮುಂದೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ. ಹಾಗೂ ಇನ್ನೂ ಮುಂದುವರಿದು ಮಾತನಾಡಿರುವ ರೋಹಿತ್ ಶರ್ಮಾ ಸಂಜು ಸ್ಯಾಮ್ಸನ್ ಈ ಅಂಶಗಳನ್ನೆಲ್ಲಾ ಗಮನಿಸಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಭಾವಿಸುತ್ತೇನೆ ಎಂದು ಹೇಳಿಕೆ ನೀಡುವುದರ ಮೂಲಕ ಪರೋಕ್ಷವಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್ ಟಿ ಟ್ವೆಂಟಿ ಅಂಕಿ ಅಂಶ

ಸಂಜು ಸ್ಯಾಮ್ಸನ್ ಟಿ ಟ್ವೆಂಟಿ ಅಂಕಿ ಅಂಶ

ಇದುವರೆಗೂ ಒಟ್ಟು 10 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿರುವ ಸಂಜು ಸ್ಯಾಮ್ಸನ್ ಕೇವಲ 117 ರನ್ ಬಾರಿಸಲಷ್ಟೇ ಶಕ್ತರಾಗಿದ್ದು, ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಹೀಗೆ ಸಿಕ್ಕ ಅವಕಾಶವನ್ನು ಇದುವರೆಗೂ ಸರಿಯಾಗಿ ಬಳಸಿಕೊಳ್ಳಲಾಗದ ಸಂಜು ಸ್ಯಾಮ್ಸನ್ ಸದ್ಯ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಸಿಕ್ಕಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್‌ಗೆ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಯುವಿ ಬರೆದ ಪತ್ರದಲ್ಲಿ ಏನಿದೆ ಗೊತ್ತಾ! | Oneindia Kannada

Story first published: Wednesday, February 23, 2022, 17:28 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X