ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ 2 ಟಿ20 ವಿಶ್ವಕಪ್‌ಗಳಿಗೂ ರೋಹಿತ್ ಶರ್ಮಾನೆ ನಾಯಕನಾಗಲಿ: ಸುನಿಲ್ ಗವಾಸ್ಕರ್

Rohit Sharma should lead Team Tndia for Upcoming two T20 World Cups said Sunil Gavaskar

ಮುಂಬೈ, ಸೆಪ್ಟೆಂಬರ್ 29: ಈ ಬಾರಿಯ ಟಿ20 ವಿಶ್ವಕಪ್‌ನ ಬಳಿಕ ಚುಟುಕು ಮಾದರಿಯ ನಾಯಕತ್ವದಿಂದ ತಾನು ಕೆಳಗಿಳಿಯುವುದಾಗಿ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದರು. ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ತಂಡದ ಘೋಷಣೆಯಾದ ನಂತರ ಕೊಹ್ಲಿ ಈ ಘೋಷಣೆಯನ್ನು ಮಾಡಿದ್ದರು. ಹೀಗಾಗಿ ಟಿ20 ಕ್ರಿಕೆಟ್‌ಗೆ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ. ಅನುಭವಿ ರೋಹಿತ್ ಶರ್ಮಾ ಈ ರೇಸ್‌ನಲ್ಲಿ ಮುಂದಿದ್ದು ಅವರನ್ನೇ ನಾಯಕನನ್ನಾಗಿ ಘೋಷಿಸುವ ಸಾಧ್ಯತೆಯಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಶರ್ಮಾ ಮುಂದಿನ ಎರಡು ಟಿ20 ವಿಶ್ವಕಪ್‌ಗಳಿಗೆ ನಾಯಕನಾಗಿ ಮುಂದುವರಿಯಬೇಕು ಎಂದಿದ್ದಾರೆ.

 ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ

ಮುಂದಿನ ಎರಡು ವರ್ಷಗಳಲ್ಲಿ ಸತತವಾಗಿ ಎರಡು ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಇಂತಾ ಸಂದರ್ಭದಲ್ಲಿ ನಾಯಕತ್ವವನ್ನು ಗೆಚ್ಚು ಬಾರಿ ಬದಲಾವಣೆ ಮಾಡಲು ಮುಂದಾಗಬಾರದು ಎಂದಿದ್ದಾರೆ ಸುನಿಲ್ ಗವಾಸ್ಕರ್. ಈ ಸಂದರ್ಭದಲ್ಲಿ ಅವರು ಮುಂಬರುವ ಎರಡು ವಿಶ್ವಕಪ್‌ಗಳಿಗೆ ಖಂಡಿತವಾಗಿಯೂ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

"ನನ್ನ ಪ್ರಕಾರ ಮುಂದಿನ ಎರಡು ಟಿ20 ವಿಶ್ವಕಪ್‌ಗಳಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕ. ಒಂದು ವಿಶ್ವಕಪ್ ಇನ್ನು ಒಂದೇ ತಿಂಗಳಿನಲ್ಲಿ ಆರಂಭವಾಗಲಿದೆ. ಅದಾದ ಒಂದು ವರ್ಷದ ನಂತರ ಮತ್ತೊಂದು ವಿಶ್ವಕಪ್ ನಾವು ಎದುರಿಸಲಿದ್ದೇವೆ. ಇಂತಾ ಸಂದರ್ಭದಲ್ಲಿ ನಾವು ಹೆಚ್ಚಿನ ನಾಯಕತ್ವ ಬದಲಾವಣೆಗೆ ಗಮನ ನೀಡಬಾರದು. ಹೀಗಾಗಿ ಈ ಎರಡು ವಿಶ್ವಕಪ್‌ಗಳಿಗೂ ರೋಹಿತ್ ಶರ್ಮಾನೇ ನಾಯಕನಾಗಿ ಮುಂದುವರಿಯಬೇಕು. ಎಂದು ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

ನಾಯಕನಾಗಿ ಅದ್ಭುತ ದಾಖಲೆ ಹೊಂದಿರುವ ಶರ್ಮಾ: ಇನ್ನು ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಈವರೆಗೆ ಐದು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ರೋಗಿತ್ ಶರ್ಮಾ. ಪ್ರತಿಷ್ಠಿತ ಲೀಗ್‌ನಲ್ಲಿ ಇದು ಎಲ್ಲಾ ನಾಯಕರಿಗಿಂತ ಅತಿ ಹೆಚ್ಚಿನ ಸಾಧನೆಯಾಗಿದೆ. ಮತ್ತೊಂದೆಡೆ ಟೀಮ್ ಇಂಡಿಯಾ ನಾಯಕನಾಗಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ನಾಯಕನಾಗಿ ಈವರೆಗೆ ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ. ಈವರೆಗೆ ಒಂದೂ ಟ್ರೋಫಿ ಗೆಲ್ಲಲು ಕೊಹ್ಲಿಗೆ ಸಾಧ್ಯವಾಗಿಲ್ಲ. ಇದು ಕೂಡ ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ.

ಇನ್ನು ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಮಾತ್ರವಲ್ಲ. ಬ್ಯಾಟ್ಸ್‌ಮನ್ ಆಗಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

Story first published: Wednesday, September 29, 2021, 16:04 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X