ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಬರೆದ ಟಿ20 ವಿಶ್ವದಾಖಲೆ ಮುರಿಯಲಿದ್ದಾರೆ ರೋಹಿತ್ ಶರ್ಮಾ!

Rohit Sharma to surpass Virat Kohli’s massive T20I record

ನವದೆಹಲಿ, ನವೆಂಬರ್ 2: ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಎಂದಿನ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಅಂತಾರಾಷ್ಟ್ರೀಯ ಟಿ20 ದಾಖಲೆ ಮೀರಿಸಲಿದ್ದಾರೆ. ಭಾನುವಾರ (ನವೆಂಬರ್ 3) ನಡೆಯುವ ಬಾಂಗ್ಲಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ರೋಹಿತ್‌ಗೆ ದಾಖಲೆ ನಿರ್ಮಿಸಲು ಅವಕಾಶವಿದೆ.

ಮೈದಾನದ ಸುತ್ತಲಿನ ಮಸುಕು ಸರಿಸಲು ಉಪಾಯ ಕಂಡುಕೊಂಡ ಡಿಡಿಸಿಎ!ಮೈದಾನದ ಸುತ್ತಲಿನ ಮಸುಕು ಸರಿಸಲು ಉಪಾಯ ಕಂಡುಕೊಂಡ ಡಿಡಿಸಿಎ!

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾ ಆರಂಭಿಕ ಟಿ20 ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಕೇವಲ 8 ರನ್ ಗಳಿಸಿದರೂ ಸಾಕು, ಕೊಹ್ಲಿ ಹೆಸರಿನಲ್ಲಿರುವ ಟಿ20ಐ ದಾಖಲೆಯೊಂದು ಬದಿಗೆ ಸರಿಯಲಿದೆ.

ಭಾರತ vs ಬಾಂಗ್ಲಾ, 1ನೇ ಟಿ20ಐ ಪಂದ್ಯ, Live ಸ್ಕೋರ್‌ಕಾರ್ಡ್

1
46116

ಪ್ರವಾಸಿ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ಅತ್ಯಧಿಕ ರನ್ ದಾಖಲೆ

ಅತ್ಯಧಿಕ ರನ್ ದಾಖಲೆ

ದೆಹಲಿ ಟಿ20 ಪಂದ್ಯದಲ್ಲಿ ರೋಹಿತ್ 8 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ಹೊಂದಿರುವ ಕೊಹ್ಲಿ ದಾಖಲೆ ಮುರಿದುಹೋಗಲಿದೆ. ಕೊಹ್ಲಿ 67 ಟಿ20 ಪಂದ್ಯಗಳಲ್ಲಿ 2450 ರನ್ ಬಾರಿಸಿದ್ದಾರೆ. ರೋಹಿತ್, 90 ಇನ್ನಿಂಗ್ಸ್‌ಗಳಲ್ಲಿ 2443 ರನ್ ದಾಖಲೆ ಹೊಂದಿದ್ದಾರೆ.

ತೃತೀಯ ಸ್ಥಾನದಲ್ಲಿ ಗಪ್ಟಿಲ್

ತೃತೀಯ ಸ್ಥಾನದಲ್ಲಿ ಗಪ್ಟಿಲ್

ಟಿ20ಐ ಅತ್ಯಧಿಕ ರನ್ ದಾಖಲೆಯಲ್ಲಿ ತೃತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ 76 ಇನ್ನಿಂಗ್ಸ್‌ಗಳಲ್ಲಿ 2285 ರನ್ ಬಾರಿಸಿದ್ದಾರೆ. 4ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ 104 ಇನ್ನಿಂಗ್ಸ್‌ಗಳಲ್ಲಿ 2263 ರನ್, 5ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 70 ಇನ್ನಿಂಗ್ಸ್‌ಗಳಲ್ಲಿ 2140 ರನ್ ಬಾರಿಸಿದ್ದಾರೆ.

ಅತ್ಯಧಿಕ ಅಂತಾರಾಷ್ಟ್ರೀಯ ಶತಕ

ಅತ್ಯಧಿಕ ಅಂತಾರಾಷ್ಟ್ರೀಯ ಶತಕ

2019ರ ಸಾಲಿನಲ್ಲಿ ಇಲ್ಲೀವರೆಗೆ ಅಂತಾರಾಷ್ಟ್ರೀಯ ಶತಕ ಬಾರಿಸಿದ ದೇಶಗಳನ್ನು ಪರಿಗಣಿಸಿದರೆ, ಪಾಕಿಸ್ಥಾನ 12, ವೆಸ್ಟ್ ಇಂಡೀಸ್ 12, ಶ್ರೀಲಂಕಾ 9 ಶತಕಗಳನ್ನು ಬಾರಿಸಿದೆ. ಭಾರತ ಪರ ರೋಹಿತ್ ಶರ್ಮಾ ಒಬ್ಬರೇ ಈ ವರ್ಷ 9 ಶತಕಗಳ ದಾಖಲೆ ನಿರ್ಮಿಸಿದ್ದಾರೆ.

ಚೊಚ್ಚಲ ಏಕದಿನ ದ್ವಿಶತಕ

ಚೊಚ್ಚಲ ಏಕದಿನ ದ್ವಿಶತಕ

ಇದೇ ದಿನ ಅಂದರೆ, 2013ರ ನವೆಂಬರ್ 2ರಂದು ರೋಹಿತ್ ಶರ್ಮಾ ಏಕದಿನ ಚೊಚ್ಚಲ ದ್ವಿಶತಕ ಬಾರಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್, 158 ಎಸೆತಗಳಿಗೆ 209 ರನ್ ಸಿಡಿಸಿದ್ದರು. ಇದರಲ್ಲಿ 16 ಸಿಕ್ಸ್ ಮತ್ತು 12 ಬೌಂಡರಿಗಳು ಸೇರಿದ್ದವು.

Story first published: Saturday, November 2, 2019, 17:34 [IST]
Other articles published on Nov 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X