ಬ್ರಾಡ್ಮನ್, ವಿ ರಿಚರ್ಡ್ಸ್ ದಾಖಲೆ ಮುರಿಯಲು ಕೊಹ್ಲಿ ಸಜ್ಜು

Posted By:
'Run Machine' Virat Kohli on the verge of surpassing Don Bradman, Viv Richards' unique record

ಸೆಂಚೂರಿಯನ್, ಫೆಬ್ರವರಿ 20: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಹೊಸ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು ವಿಶಿಷ್ಟ ದಾಖಲೆ ಬರೆಯಲು ಸಜ್ಜಾಗುತ್ತಿದ್ದಾರೆ.

ಕ್ರಿಕೆಟ್ ದಿಗ್ಗಜ ಆಸ್ಟ್ರೇಲಿಯಾದ ಮಾಜಿ ನಾಯಕ ಸರ್ ಡಾನ್ ಬ್ರಾಡ್ಮನ್ ಹಾಗೂ ವೆಸ್ಟ್‌ಇಂಡೀಸ್‌ ನ ಮಾಜಿ ಬ್ಯಾಟಿಂಗ್ ದೈತ್ಯ ಸರ್ ವಿವಿಯನ್ ರಿಚರ್ಡ್ಸ್ ದಾಖಲೆ ಮುರಿಯುವ ಅವಕಾಶ ಭಾರತದ 'ರನ್ ಮಷಿನ್' ಕೊಹ್ಲಿಗೆ ಸಿಕ್ಕಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ಕೊಹ್ಲಿ, ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿಗಳಲ್ಲಿ ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 870 ರನ್ ಪೇರಿಸಿದ್ದಾರೆ. ಈ ಸಾಧನೆ ಬೇರೆ ಯಾವ ಭಾರತೀಯ ಆಟಗಾರನಿಂದ ಇದುವರೆಗೆ ಸಾಧ್ಯವಾಗಿಲ್ಲ.

ಬ್ರಾಡ್ಮನ್ ದಾಖಲೆ ಮುರಿಯಲು 104ರನ್ ಬೇಕು: ಉಳಿದಿರುವ ಎರಡು ಟಿ20ಐ ಪಂದ್ಯಗಳಿಂದ ಕೊಹ್ಲಿ ಅವರು 104 ರನ್ ಕಲೆ ಹಾಕಿದರೆ, ಬ್ರಾಡ್ಮನ್ ಅವರ ದಾಖಲೆ ಮುರಿಯಬಹುದು. ಬ್ರಾಡ್ಮನ್ ಅವರು 1930ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 974 ರನ್ ಕಲೆ ಹಾಕಿದ್ದರು.

ಸರ್ ವಿವಿಯನ್ ರಿಚರ್ಡ್ಸ್ ದಾಖಲೆ: ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಸರ್ ವಿವ್ ರಿಚರ್ಡ್ಸ್ ಅಗ್ರಸ್ಥಾನದಲ್ಲಿದ್ದಾರೆ. 1976ರಲ್ಲಿ ಇಂಗ್ಲೆಂಡ್ ವಿರುದ್ಧ 1045 ರನ್ ಪೇರಿಸಿದ್ದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 829 ರನ್ ಹಾಗೂ ಮೂರು ಏಕದಿನಗಳಲ್ಲಿ 216 ರನ್ ಪೇರಿಸಿದ್ದರು. ರಿಚರ್ಡ್ಸ್ ದಾಖಲೆ ಮುರಿಯಲು ಕೊಹ್ಲಿಗೆ 130 ರನ್ ಅಗತ್ಯವಿದೆ.

Story first published: Tuesday, February 20, 2018, 19:21 [IST]
Other articles published on Feb 20, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ