ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಇಬ್ಬರು ಕ್ರಿಕೆಟಿಗರ ಪಾತ್ರ ಐಪಿಎಲ್‌ನಲ್ಲಿ ಮಹತ್ವವಾಗಿದೆ: ಸಂಜಯ್ ಮಂಜ್ರೇಕರ್

Sanjay Manjrekar Names Two Players For Whom Ipl 2020 Is Going To Be Big

ಈ ಬಾರಿಯ ಐಪಿಎಲ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿ ಆಟ ಹೇಗಿರಲಿದೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಇಬ್ಬರು ಯುವ ಕ್ರಿಕೆಟಿಗರಿಗೆ ಈ ಬಾರಿಯ ಐಪಿಎಲ್ ಆವೃತ್ತಿ ಬಹಳ ಮಹತ್ವದ್ದು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಕಳೆದ ವರ್ಷದಿಂದ ಮಹೇಂದ್ರ ಸಿಂಗ್ ಧೋನಿ ದೂರ ಉಳಿದ ಬಳಿಕ ವಿಕೆಟ್ ಕೀಪಿಂಗ್‌ಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ರಿಷಭ್ ಪಂತ್‌ಗೆ ಧಾರಾಳ ಅವಕಾಶ ದೊರೆತರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪಂತ್ ಯಶಸ್ವಿಯಾಗಲಿಲ್ಲ. ಮತ್ತೊಂದೆಡೆ ಸಿಕ್ಕ ಕೆಲವೇ ಅವಕಾಶದಲ್ಲಿ ಸಂಜು ಮಿಂಚಲು ವಿಫಲರಾದರು. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಈ ಬಾರಿಯ ಐಪಿಎಲ್ ಮತ್ತೊಂದು ಅವಕಾಶದಂತಿದೆ.

ಸೆ. 1ಕ್ಕೆ ಸಿಎಸ್‌ಕೆ ಸೇರಿಕೊಳ್ಳಲಿದ್ದಾರೆ ಫಾ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿಸೆ. 1ಕ್ಕೆ ಸಿಎಸ್‌ಕೆ ಸೇರಿಕೊಳ್ಳಲಿದ್ದಾರೆ ಫಾ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿ

ಇಬ್ಬರಿಗೂ ಮತ್ತೊಂದು ಅವಕಾಶ

ಇಬ್ಬರಿಗೂ ಮತ್ತೊಂದು ಅವಕಾಶ

ಸಂಜಯ್ ಮಂಜ್ರೇಕರ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು ಮುಂದಿನ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಇಬ್ಬರೂ ಯುವ ಕ್ರಿಕೆಟಿಗರು ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡುವ ಮೂಲಕ ಈ ವಿಶ್ವಕಪ್‌ಗೆ ಸ್ಥಾನವನ್ನು ಪಡೆಯುವ ಅವಕಾಶ ಮುಂದಿದೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಅದ್ಘುತ ಆಟಗಾರರು

ಅದ್ಘುತ ಆಟಗಾರರು

ರಿಷಭ್ ಪಂತ್ ಆಟದಲ್ಲಿ ಖಂಡಿತವಾಗಿಯೂ ಅದ್ಭುತವಾದ ಶಕ್ತಿಯಿದೆ. ಕಳೆದೇ ಹೋಗಬಹುದಾದ ಪಂದ್ಯವನ್ನು ಹತ್ತೇ ನಿಮಿಷದಲ್ಲಿ ಮರಳಿ ಗಳಿಸುವ ಶಕ್ತಿ ಅವರಲ್ಲಿದೆ. ಸಂಜು ಸ್ಯಾಮ್ಸನ್ ಕೂಡ ಹಾಗೆಯೇ ಉತ್ತಮ ಲಯದಲ್ಲಿದ್ದಾಗ ಬ್ಯಾಟಿಂಗ್‌ ಮೂಲಕ ನಿಮ್ಮ ಉಸಿರನ್ನೇ ನಿಲ್ಲಿಸಿಬಿಡುವಷ್ಟು ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಇಬ್ಬರೂ ಯುವ ಕ್ರಿಕೆಟಿಗರನ್ನು ಸಂಜಯ್ ಮಂಜ್ರೇಕರ್ ಪ್ರಶಂಸಿಸಿದ್ದಾರೆ.

ಪಂತ್ ವೈಫಲ್ಯತೆ

ಪಂತ್ ವೈಫಲ್ಯತೆ

ಸೀಮಿತ ಓವರ್‌ಗಳಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾದ ನಂತರ ಪಂತ್ ಮತ್ತೆ ತಂಡದಲ್ಲಿ ಅವಕಾಶವನ್ನು ಗಳಿಸಲು ಸಫಲರಾಗಲಿಲ್ಲ. ಟೆಸ್ಟ್ ತಂಡದಲ್ಲಿ ಅವಕಾಶ ಪಡೆದರೂ ಅಲ್ಲೂ ತಂಡಕ್ಕೆ ಉಪಯೋಗವಾಗುವ ಪ್ರದರ್ಶನ ನೀಡಲಿಲ್ಲ.

ಸಂಜುಗೆ ನಿರಾಸೆ

ಸಂಜುಗೆ ನಿರಾಸೆ

ಮತ್ತೊಂದೆಡೆ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ಕೇವಲ 6 ರನ್ ಗಳಿಸಿ ನಿರಾಸೆ ಅನುಭವಿಸಿದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಮತ್ತೆ ಅವಕಾಶ ಪಡೆದ ಸಂಜು 8 ಹಾಗೂ 2 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು.

Story first published: Tuesday, August 11, 2020, 17:52 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X