ಸ್ಪಿನ್ ದಿಗ್ಗಜ ಶೇನ್‌ ವಾರ್ನ್ 'ಬ್ಯಾಗಿ ಗ್ರೀನ್‌ ಕ್ಯಾಪ್‌' ದಾಖಲೆ ಬೆಲೆಗೆ ಹರಾಜು!

ಸಿಡ್ನಿ, ಜನವರಿ 10: ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ, ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಬ್ಯಾಗಿ ಗ್ರೀನ್‌ ಕ್ಯಾಪ್‌ ಭರ್ಜರಿ ಮೊತ್ತಕ್ಕೆ ಹರಾಜಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರ್ನ್ ತನ್ನ ಕ್ಯಾಪ್‌ನ್ನು ಹರಾಜಿಗಿಟ್ಟು ಹಣ ಸಂಗ್ರಹಿಸಲು ನೆರವಾಗಿದ್ದಾರೆ.

ಲಕ್ಷ್ಮಣ್ ಆಯ್ಕೆಯ ಟಿ20 ವಿಶ್ವಕಪ್ ತಂಡದಲ್ಲಿ ಧೋನಿ, ಧವನ್ ಇಲ್ಲವೇಕೆ?

ಶುಕ್ರವಾರ (ಜನವರಿ 10) ಬೆಳಗ್ಗೆ ಬಿಡ್ಡಿಂಗ್ ಕೊನೆಗೊಳ್ಳುವ ಹೊತ್ತಿಗೆ 50ರ ಹರೆಯದ ಶೇನ್ ವಾರ್ನ್ ಅವರ ಜನಪ್ರಿಯ ಬ್ಯಾಗಿ ಗ್ರೀನ್‌ ಕ್ಯಾಪ್‌ $1,007,500 (7,15,97,483 ರೂ.)ಗೆ ಹರಾಜಾಗಿ ದಾಖಲೆ ನಿರ್ಮಿಸಿದೆ. 'M.C. from Sydney'ಗೆ ವಾರ್ನ್ ಕ್ಯಾಪ್‌ ಮಾರಾಟವಾಗಿದೆ.

ದಾಖಲೆ ನಿರ್ಮಿಸಲು ಜಸ್‌ಪ್ರೀತ್‌ ಬೂಮ್ರಾಗೆ ಬರೀ 1 ವಿಕೆಟ್‌ ಬೇಕು!

ವಾರ್ನ್ ಫೇಮಸ್ ಕ್ಯಾಪ್ ಖರೀದಿಸಿದ ಈ 'ಎಂಸಿ' ಅಂದರೆ ಯಾರೆಂದು ಇನ್ನಷ್ಟೇ ಗೊತ್ತಾಗಬೇಕಿದೆ. ಹರಾಜಿನ ವೇಳೆ M.C. from Sydney ಮತ್ತು W.C. from Gordon ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಎಂಸಿ ಬಿಡ್‌ ಗೆದ್ದರು. ಹರಾಜಿನಿಂದ ಬರುವ ಹಣ ಆಸ್ಟ್ರೇಲಿಯಾದ ರೆಡ್‌ಕ್ರಾಸ್ ಬುಷ್‌ಫೈರ್ ಪರಿಹಾರ ನಿಧಿಗೆ ಹೋಗಲಿದೆ.

ಆಸ್ಟ್ರೇಲಿಯಾ ಪರ 273 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿರುವ ಶೇನ್ ವಾರ್ನ್ 708 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 191 ಏಕದಿನದಲ್ಲಿ ಇನ್ನಿಂಗ್ಸ್‌ಗಳಲ್ಲಿ 293 ವಿಕೆಟ್‌, 54 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 57 ವಿಕೆಟ್‌ಗಳ ದಾಖಲೆ ವಾರ್ನ್ ಹೆಸರಿನಲ್ಲಿದೆ. 2005ರಲ್ಲಿ ಕಡೇಯ ಏಕದಿನ ಪಂದ್ಯವನ್ನಾಡಿದ್ದ ವಾರ್ನ್ ಸಾರ್ವಕಾಲಿಕ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡವರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 10, 2020, 16:10 [IST]
Other articles published on Jan 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X