
90 ರನ್‌ಗಳ ಗುರಿ ನೀಡಿದ ಮೇಘಾಲಯ
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮೇಘಾಲಯ ತಂಡ ಕೇವಲ 89 ರನ್‌ಗಳನ್ನು ಗಳಿಸಲು ಮಾತ್ರವೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಆಟಗಾರರಾದ ಲಾರಿ ಸಂಗ್ಮಾ ಹಾಗೂ ಯೋಗೇಶ್ ತಿವಾರಿ ಅರ್ಧ ಶತಕದ ಜೊತೆಯಾಟ ನೀಡಿದ ಕಾರಣ ಈ ಮೊತ್ತವನ್ನು ತಲುಪಲು ಮೇಘಾಲಯ ಸಾಧ್ಯವಾಯಿತು. ಮೂವರು ಆಟಗಾರರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ದಾಂಡಿಗರು ಒಂದಂಕಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಕರ್ನಾಟಕದ ಬರವಾಗಿ ಬೌಲಿಂಗ್‌ನಲ್ಲಿ ವಿಜಯ್‌ಕುಮಾರ್ ವೈಶಾಕ್ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ.

ಮಯಾಂಕ್ ಮನೀಶ್ ಭರ್ಜರಿ ಆಟ
ಇನ್ನು ಮೇಘಾಲಯ ನೀಡಿದ ಸುಲಭ ಸವಾಲನ್ನು ಬೆನ್ನಟ್ಟಿದ ಕರ್ನಾಟಕ ಮೊದಲ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ಆದರೆ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 10 ಓವರ್‌ಗಳಲ್ಲಿ ತಂಡದ ಗೆಲುವಿಗೆ ಕಾರಣವಾದರು. ಮಯಾಂಕ್ ಅಗರ್ವಾಲ್ 29 ಎಸೆತಗಳಲ್ಲಿ 47 ರನ್‌ಗಳಿಸಿದರೆ ಮನೀಶ್ ಪಾಂಡೆ 28 ಎಸೆತಗಳಲ್ಲಿ 42 ರನ್ ಸಿಡಿಸಿದರು. ಈ ಮೂಲಕ ಕರ್ನಾಟಕ ಈ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಇತ್ತಂಡಗಳ ಆಡುವ ಬಳಗ
ಕರ್ನಾಟಕ: ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ಮನೋಜ್ ಭಾಂಡಗೆ, ವಿಜಯಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ, ಮುರಳೀಧರ ವೆಂಕಟೇಶ್
ಬೆಂಚ್: ಎಲ್ ಆರ್ ಚೇತನ್, ಶ್ರೇಯಸ್ ಗೋಪಾಲ್, ಶರತ್ ಬಿಆರ್
ಮೇಘಾಲಯ: ರಾಜ್ ಬಿಸ್ವಾ, ಕಿಶನ್ ಲಿಂಗ್ಡೋಹ್, ಚಿರಾಗ್ ಖುರಾನಾ, ಪುನಿತ್ ಬಿಶ್ತ್ (ನಾಯಕ & ವಿಕೆಟ್ ಕೀಪರ್), ಲ್ಯಾರಿ ಸಂಗ್ಮಾ, ರಾಜೇಶ್ ಬಿಷ್ಣೋಯ್ ಜೂನಿಯರ್, ಯೋಗೇಶ್ ತಿವಾರಿ, ಅನೀಶ್ ಚರಕ್, ಸ್ವರಜೀತ್ ದಾಸ್, ಅಭಿಷೇಕ್ ಕುಮಾರ್, ಚೆಂಗಮ್ ಸಂಗ್ಮಾ, ಕಿಲ್ಕೊ ಮರಕ್
ಬೆಂಚ್: ದಿಪ್ಪು ಸಂಗ್ಮಾ, ಆಕಾಶ್ ಚೌಧರಿ, ರೋಹಿತ್ ಶಾ


Click it and Unblock the Notifications












