ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ದಿನ ಅಂದು 1999: ಲಂಕಾ ವಿರುದ್ಧ ಗಂಗೂಲಿ, ದ್ರಾವಿಡ್ 312 ರನ್‌ಗಳ ವಿಶ್ವದಾಖಲೆಯ ಜೊತೆಯಾಟ

Sourav, Rahul Stitched Record 318-run Stand In Odis

ಅದು 1999ರ ವಿಶ್ವಕಪ್‌ನ ಸಂದರ್ಭ. ಇಂದಿಗೆ ಸರಿಯಾಗಿ 21 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಇಬ್ಬರು ಆಟಗಾರರು ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದರು. ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಎರಡನೇ ವಿಕೆಟ್‌ಗೆ ಹಿಂದೆಂದೂ ದಾಖಲಾಗದ ಮೊತ್ತವನ್ನು ರಾಶಿ ಹಾಕಿದ್ದರು.

ಶ್ರೀಲಂಕಾ ವಿರುದ್ಧ ನಡೆದ ಪಂದ್ಯವದು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತವನ್ನು ಅನುಭವಿಸಿತು. ಭಾರತ ಕೇವಲ 6 ರನ್ ಗಳಿಸಿದ್ದ ಸಂದರ್ಭದಲ್ಲಿ ಆರಂಭಕ ಆಟಗಾರ ಎಸ್. ರಮೇಶ್ ಚಾಮಿಂಡ ವಾಸ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆದರೆ ಅದಾದ ಬಳಿಕ ಲಂಕಾದ ಬೌಲರ್‌ಗಳಿಗೆ ಎದುರಾಗಿದ್ದು ಅಕ್ಷರಶಃ ಆಘಾತ.

ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್

ಆರಂಭಿಕ ಆಟಗಾರ ಸೌರವ್ ಗಂಗೂಲಿಯನ್ನು ರಾಹುಲ್ ದ್ರಾವಿಡ್ ಸೇರಿಕೊಂಡರು. ಇಬ್ಬರೂ ಯುವ ಆಟಗಾರರು ಲಂಕಾ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದರು. ಸತತ 46ನೇ ಓವರ್‌ ತನಕ ಬ್ಯಾಟ್ ಬೀಸಿದ ಈ ಇಬ್ಬರು ದಾಂಡಿಗರು 318 ರನ್‌ಗಳ ಜೊತೆಯಾಟವನ್ನು ನೀಡಿದ್ದರು.

ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ ಸೌರವ್ ಗಂಗೂಲಿ ತನ್ನ ಕ್ರಿಕೆಟ್ ಕೆರಿಯರ್‌ನ ಸರ್ವಾಧಿಕ 183ರನ್ ಗಳಿಸಿದರು. ಗಂಗೂಲಿಯ ಈ ಅದ್ಬುತ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್ ಸಿಡಿದಿತ್ತು. ಕನ್ನಡಿಗ ರಾಹುಲ್ ದ್ರಾವಿಡ್ 145 ರನ್ ಗಳಿಸಿ ರನ್‌ಔಟ್ ಆಗುವ ಮುನ್ನ 17 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು.

ODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾನುಘಟಿಗಳದ್ದೇ ಸಿಂಹಪಾಲುODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾನುಘಟಿಗಳದ್ದೇ ಸಿಂಹಪಾಲು

ಈ ವಿಶ್ವದಾಖಲೆಯನ್ನು ಕೆಲವೇ ತಿಂಗಳ ಅಂತರದಲ್ಲಿ ಭಾರತೀಯ ಜೋಡಿಯೇ ಮುರಿದಿತ್ತು. ಅದರಲ್ಲೂ ಕನ್ನಡಿಗ ರಾಹುಲ್ ದ್ರಾವಿಡ್ ಇದ್ದರು ಎಂಬುದು ಮತ್ತೊಂದು ವಿಶೇಷ. ಸಚಿನ್ ತೆಂಡೂಲ್ಕರ್(186*) ಜೊತೆ ಸೇರಿ ರಾಹುಲ್ ದ್ರಾವಿಡ್(153) ಎರಡನೇ ವಿಕೆಟ್‌ಗೆ 331 ರನ್‌ಗಳನ್ನು ಒಟ್ಟು ಸೇರಿಸಿದ್ದರು. ಈ ದಾಖಲೆ ಮಾತ್ರ ಸುಮಾರು 14 ವರ್ಷಗಳ ಕಾಲ ಮುರಿಯದೆ ಉಳಿದಿತ್ತು.

Story first published: Tuesday, May 26, 2020, 13:50 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X