ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾ

Hashim Amla retires 2019

ಕೇಪ್‌ಟೌನ್‌, ಆಗಸ್ಟ್‌ 08: ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್‌ ಹಶೀಮ್‌ ಆಮ್ಲಾ, ತಮ್ಮ 15 ವರ್ಷಗಳ ಸುದೀರ್ಘಾವಧಿಯ ವೃತ್ತಿಬದುಕಿಗೆ ಗುರುವಾರ ಹಠಾತ್ತನೆ ತೆರೆ ಎಳೆದಿದ್ದು, ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

36 ವರ್ಷದ ಅನುಭವಿ ಬಲಗೈ ಬ್ಯಾಟ್ಸ್‌ಮನ್‌ ಆಮ್ಲಾ, ದಕ್ಷಿಣ ಆಫ್ರಿಕಾ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 349 ಪಂದ್ಯಗಳನ್ನಾಡಿದ್ದು 18672 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 55 ಶತಕಗಳು ಮತ್ತು 88 ಅರ್ಧಶತಕಗಳು ಸೇರಿವೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಹರಿಣ ಪಡೆಯ ಪರ ತ್ರಿಶತಕ ದಾಖಲಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಅವರದ್ದು.

ಇಂಡಿಯಾ vs ವಿಂಡೀಸ್‌, 1ನೇ ಏಕದಿನ Live: ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌

"ಮೊದಲಿಗೆ ದಕ್ಷಿಣ ಆಫ್ರಿಕಾ ತಂಡದ ಜೊತೆಗೆ ಇಂಥದ್ದೊಂದು ಅದ್ಭುತ ಪಯಣದಲ್ಲಿ ಸಾಗಿಬರಲು ನೆರವಾದ ದೇವರಿಗೆ ಧನ್ಯವಾದಗಳು. ಈ ಪಯಣದಲ್ಲಿ ಹಲವು ಅದ್ಭುತ ಪಾಠಗಳನ್ನು ಕಲಿತಿದ್ದೇನೆ. ಹಲವು ಸ್ನೇಹಿತರನ್ನು ಸಂಪಾದಿಸಿದ್ದೇನೆ. ಪ್ರೊಟೀಯಾಸ್‌ ತಂಡದ ಬಾಂಧವ್ಯ ಅನುಭವಿಸಿದ್ದೇನೆ," ಎಂದು ಆಮ್ಲಾ ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಹಲವು ದಾಖಲೆಗಳನ್ನು ಬರೆದಿರುವ ಆಮ್ಲಾ, 2000, 3000, 4000, 5000, 6000 ಮತ್ತು 7000 ಏಕದಿನ ಕ್ರಿಕೆಟ್‌ ರನ್‌ಗಳನ್ನು ಅತ್ಯಂತ ವೇಗವಾಗಿ ಪೂರೈಸಿದ ವಿಶ್ವ ದಾಖಲೆ ಹೊಂದಿದ್ದಾರೆ.

"ನನ್ನ ಪೋಷಕರ ಪ್ರರ್ಥನೆ, ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಹೇಳಬಯಸುತ್ತೇನೆ. ಅವರ ನೆರಳಿನಿಂದಲೇ ನಾನು ದಕ್ಷಿಣ ಆಫ್ರಿಕಾ ತಂಡದ ಪರ ಇಷ್ಟು ವರ್ಷ ಆಡಲು ಸಾಧ್ಯವಾಯಿತು. ನನ್ನ ಕುಟುಂಬ, ನನ್ನ ಸ್ನೇಹಿತರು, ನನ್ನ ಏಜೆಂಟ್‌, ನನ್ನ ತಂಡದ ಸಹ ಆಟಗಾರರು ಎಲ್ಲರಿಗೂ ಧನ್ಯವಾದ. ಈ ಪಯಣದಲ್ಲಿ ಇವರೆಲ್ಲರ ಪಾತ್ರ ಅದ್ಭುತವಾದದ್ದು. ಅದರಲ್ಲೂ ನನ್ನೆಲ್ಲಾ ಯಶಸ್ಸಿನ ಹಿಂದೆ ನಿಂತು ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ಸಿಯಾಬೊಂಗಾ ಸೌತ್‌ ಆಫ್ರಿಕಾ," ಎಂದು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

"ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೂ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ. ವಿಶೇಷವಾಗಿ ಸಿಇಒ ಮಿ. ಥಬಾಂಗ್‌ ಮೊರೊಯ್‌ ಮತ್ತು ಅವರ ಆಡಳಿತ ತಂಡಕ್ಕೆ. ನನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಪ್ರಸಂಶಿಸುತ್ತೇನೆ," ಎಂದು ಆಮ್ಲಾ ಹೇಳಿದ್ದಾರೆ.

ಗ್ಲೋಬಲ್‌ ಟಿ20ಯಲ್ಲಿ ಯುವರಾಜ್‌ ಸಿಂಗ್‌ರ ಪಂದ್ಯ ತಡವಾಗಿ ಶುರುವಾಗಿದ್ದೇಕೆ?

ಸರಳತೆ ಹಾಗೂ ಸ್ಥಿರ ಪ್ರದರ್ಶನದಿಂದಲೇ ಹೆಸರುವಾಸಿಯಾದ ಹಶೀಮ್‌ ಆಮ್ಲಾ, ತಮ್ಮ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಮದ್ಯ ಮತ್ತು ಧೂಮಪಾನದ ಬ್ರ್ಯಾಂಡ್‌ಗಳನ್ನು ಪ್ರೋತ್ಸಾಹಿಸಿದವರಲ್ಲ. ತಮ್ಮ ಕ್ರಿಕೆಟ್‌ ಜರ್ಸಿಯಲ್ಲೂ ಈ ರೀತಿಯ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಆಮ್ಲಾ ಅನುವು ಮಾಡುತ್ತಿರಲಿಲ್ಲ.

ಟೆಸ್ಟ್‌ ಕ್ರಿಕೆಟ್‌ ಸಾಧನೆ

ಟೆಸ್ಟ್‌ ಕ್ರಿಕೆಟ್‌ ಸಾಧನೆ

124 ಪಂದ್ಯ

9282 ರನ್‌

311* ಗರಿಷ್ಠ

46.64 ಸರಾಸರಿ

49.97 ಸ್ಟ್ರೈಕ್‌ರೇಟ್‌

28 ಶತಕ

41 ಅರ್ಧಶತಕ

ಏಕದಿನ ಕ್ರಿಕೆಟ್‌ ಸಾಧನೆ

ಏಕದಿನ ಕ್ರಿಕೆಟ್‌ ಸಾಧನೆ

181 ಪಂದ್ಯ

8113 ರನ್‌

159 ಗರಿಷ್ಠ

49.46 ಸರಾಸರಿ

88.39 ಸ್ಟ್ರೈಕ್‌ರೇಟ್‌

27 ಶತಕ

39 ಅರ್ಧಶತಕ

ಅಂತಾರಾಷ್ಟ್ರೀಯ ಟಿ20

ಅಂತಾರಾಷ್ಟ್ರೀಯ ಟಿ20

44 ಪಂದ್ಯ

1277 ರನ್‌

97* ಗರಿಷ್ಠ

33.60 ಸರಾಸರಿ

132.05 ಸ್ಟ್ರೈಕ್‌ ರೇಟ್‌

08 ಅರ್ಧಶತಕ

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌

237 ಪಂದ್ಯ

17765 ರನ್‌

311* ಗರಿಷ್ಠ

48.67 ಸರಾಸರಿ

52 ಶತಕ

88 ಅರ್ಧಶತಕ

185 ಕ್ಯಾಚ್‌ಗಳು

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, August 8, 2019, 21:53 [IST]
Other articles published on Aug 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more