ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಲೋಕದ 'ಜಂಟಲ್ ಮನ್' ಎಬಿಡಿ ಬದುಕಿನ ಬಿಡಿ ಚಿತ್ರಗಳಿವು..

South Africas AB de Villiers announces retirement from international cricket

ನವದೆಹಲಿ, ಮೇ 23: ನಾನೀಗ ದಣಿದಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿಯಲು ಇದು ಸಕಾಲ ಅಂತ ಇದ್ದಕ್ಕಿದ್ದಂತೆ ವಿದಾಯ ಘೋಷಿಸಿ ಹೊರಟುಬಿಟ್ಟರಲ್ಲ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್? ನಿಜಕ್ಕೂ ಅವರಿಗೆ ದಣಿವಾಗಿತ್ತಾ? ಖಂಡಿತಾ ಇಲ್ಲ. ಖ್ಯಾತ ಆಟಗಾರ ಕೈಗೊಂಡ ನಿರ್ಧಾರಕ್ಕೆ ಬೇರೆಯೇ ಒಳ್ಳೆಯ ಕಾರಣವಿದೆ.

ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ 'ಏಂಜೆಲ್ ಆಫ್ ಕ್ರಿಕೆಟ್'ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ 'ಏಂಜೆಲ್ ಆಫ್ ಕ್ರಿಕೆಟ್'

ಒಟ್ಟು 14 ವರ್ಷಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಕಳೆದಿರುವ ಎಬಿಡಿ ಯಾಕೆ ಇದ್ದಕ್ಕಿದ್ದಂತೆ ವಿದಾಯ ಹೇಳಿರಬಹುದು? ಕಾರಣ ತುಂಬಾ ಸಿಂಪಲ್. ವಿದಾಯದ ಮಹತ್ವವನ್ನು ಎಬಿಡಿ ಚೆನ್ನಾಗಿ ಅರಿತುಕೊಂಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿರುವ ಡಿವಿಲಿಯರ್ಸ್ ವಿದಾಯದ ನಿರ್ಧಾರ ನಿಜಕ್ಕೂ ಅರ್ಥಪೂರ್ಣವಾದುದು.

ಕ್ರೀಡಾಪಟುವೊಬ್ಬನ ಪ್ರತಿಭೆ ಎಷ್ಟರವರೆಗೆ ಎಂದು ಹೇಳಲಾಗೋಲ್ಲ. ಅಂದರೆ ಇಂದು ಮುಂಚೂಣಿಯಲ್ಲಿರುವ ಆಟಗಾರ ನಾಳೆ ತನ್ನ ಪ್ರಖರತೆಯನ್ನು ಕಳೆದುಕೊಂಡು ಮೂಲೆಗುಂಪಾಗಲೂಬಹುದು. ಅದೂ ಕ್ರೀಡಾ ಜಗತ್ತಿನಲ್ಲಿ ಹೊಸಮುಖಗಳು ಪಾರಮ್ಯ ಮೆರೆಯುತ್ತಿರುವ ಈ ದಿನಗಳಲ್ಲಿ ಡಿವಿಲಿಯರ್ಸ್ ನಿವೃತ್ತಿ ನಿಜಕ್ಕೂ ಸಮಂಜಸ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯ

ಡಿವಿಲಿಯರ್ಸ್ ಬೀಳ್ಕೊಡುವ ಮುನ್ನ ಈ ಮಹಾನ್ ಸಾಧಕನ ಒಂದಿಷ್ಟೇ ಇಷ್ಟು ಅಪರೂಪದ ಸಾಧನೆಗಳತ್ತವೊಂದು ಸುತ್ತು ಹಾಕೋಣ..

ಅಪರೂಪದ ವ್ಯಕ್ತಿಗಳಲ್ಲೊಬ್ಬ

ಅಪರೂಪದ ವ್ಯಕ್ತಿಗಳಲ್ಲೊಬ್ಬ

ಅನುಭವಿ ಆಟಗಾರನೊಬ್ಬ ತಾನು ಡಲ್ ಅನ್ನಿಸಿಕೊಂಡು ಅಪಹಾಸ್ಯಕ್ಕೀಡಾಗುವ ಮೊದಲೇ ತಾನಾಗೆ ಮುಂದುವರೆದು ವಿದಾಯ ಹೇಳುವುದು ಜಾಣತನ. ಎಬಿಡಿ ಮಾಡಿದ್ದೂ ಅದನ್ನೇ. ಕ್ರಿಕೆಟ್ ದಿಗ್ಗಜ ಸಚಿನ್ ಅವರೂ ಫಾರ್ಮ್ ಕಳೆದುಕೊಂಡಿದ್ದಾಗ ಕ್ರಿಕೆಟ್ ಅಭಿಮಾನಿಗಳಿಂದ ಅಪಹಾಸ್ಯಕ್ಕೀಡಾಗಿದ್ದರು. ಫಾರ್ಮ್ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕುತ್ತಲೇ ವಿದಾಯ ಹೇಳಿದ ಒಂದಿಷ್ಟು ಮಂದಿಯ ಸಾಲಿನಲ್ಲಿ ಎಬಿಡಿಯೂ ಸೇರಿಕೊಂಡಿದ್ದಾರೆ.

ಸ್ನೇಹ ಜೀವಿ

ಸ್ನೇಹ ಜೀವಿ

17 ಡಿಸೆಂಬರ್ 2004ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಎಬಿಡಿ ಸ್ನೇಹಜೀವಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದರು. ಅದರಲ್ಲೂ ಭಾರತದಲ್ಲಿ ಕೊಹ್ಲಿ ಜೊತೆ ಹೆಚ್ಚು ಅಚ್ಚುಮೆಚ್ಚಾಗಿದ್ದವರು ಎಬಿಡಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವಾಗ ಕೊಹ್ಲಿ-ಡಿವಿಲಿಯರ್ಸ್ ಆತ್ಮೀಯರಾಗಿ ಇದ್ದು ಹೆಚ್ಚು ಗುರುತಿಸಿಕೊಂಡಿದ್ದರು. ಕೊಹ್ಲಿ ಅವರು ಎಬಿಡಿ ಅವರನ್ನು 'ಅಸಾಮಾನ್ಯ ವ್ಯಕ್ತಿ' ಎಂದೂ ಬಣ್ಣಿಸಿದ್ದರು. ಉಳಿದ ಆಟಗಾರರಿಗೆ ಹೋಲಿಸಿದರೆ ಎಬಿಡಿ ಕೊಂಚ ಶಾಂತ ಸ್ವಭಾವದವರೇ. ಎಬಿಡಿ ಸಿಟ್ಟನ್ನು ಬ್ಯಾಟ್ ಮೂಲಕ ಮಾತ್ರ ತೋರಿಸಿಕೊಳ್ಳುತ್ತಿದ್ದರು.

ಬೀಸುಗೈ ದಾಂಡಿಗ

ಬೀಸುಗೈ ದಾಂಡಿಗ

ಸ್ಫೋಟಕ ಬ್ಯಾಟಿಂಗ್ ಗೆ ಎಬಿಡಿ ಹೆಚ್ಚು ಫೇಮಸ್ಸು. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯಾಟದಲ್ಲಿ 59 ಎಸೆತಗಳಿಗೆ 149 ರನ್ ಸಿಡಿಸಿದ ಹೆಗ್ಗಳಿಕೆ ಡಿವಿಲಿಯರ್ಸ್ ಅವರದ್ದು. ಈ ಪಂದ್ಯದ ವೇಳೆ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 439 ಭರ್ಜರಿ ರನ್ ಪೇರಿಸಿತ್ತು. ಅಲ್ಲದೆ ವಿಂಡೀಸ್ 148 ರನ್ ಸೋಲನ್ನೂ ಅನುಭವಿಸಿತ್ತು. ಡಿವಿಲಿಯರ್ಸ್ ಇಂತಹ ಸ್ಫೋಟಕ ಬ್ಯಾಟಿಂಗ್ ಗೆ ಅನೇಕ ನಿದರ್ಶನಗಳಿವೆ.

ಅಪರೂಪದ ದಾಖಲೆಗಳು

ಅಪರೂಪದ ದಾಖಲೆಗಳು

ದಾಖಲೆಗಳ ವಿಚಾರದಲ್ಲೂ ಎಬಿಡಿ ಎತ್ತಿದ ಕೈ. ಏಕದಿನ ಕ್ರಿಕೆಟ್ ನಲ್ಲಿ 16 ಎಸೆತಗಳಿಗೆ 50 ರನ್, 31 ಎಸೆತಗಳಿಗೆ 100 ರನ್, 64 ಎಸೆತಗಳಿಗೆ 150 ರನ್ ಸಿಡಿಸಿದ ಖ್ಯಾತಿಯೂ ಎಬಿ ಡಿವಿಲಿಯರ್ಸ್ ಅವರದ್ದು. ಐಪಿಎಲ್ ನಲ್ಲಿ ಎಬಿಡಿ 2015ರಲ್ಲಿ ಅಜೇಯ 133 ರನ್ ಪೇರಿಸಿದ ದಾಖಲೆಯಿದೆ.

'ತಂಡದ ಬೆಂಬಲಕ್ಕಿರಲಿದ್ದೇನೆ'

'ತಂಡದ ಬೆಂಬಲಕ್ಕಿರಲಿದ್ದೇನೆ'

34ರ ಹರೆಯದ ಎಬಿಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ. 'ಅಂತಾರಾಷ್ಟ್ರೀಯ ಪಂದ್ಯಗಳನ್ನು ಇನ್ನು ಆಡುವ ಯೋಚನೆಯಿಲ್ಲ. ಆದರೆ ಸೌತಾಫ್ರಿಕಾದ ಖ್ಯಾತ ಕ್ರಿಕೆಟ್ ಫ್ರಾಂಚೈಸಿ 'ಟೈಟಾನ್ಸ್' ನಡೆಸುವ ಪಂದ್ಯಗಳಿಗೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ನೆಚ್ಚಿನ ಸ್ನೇಹಿತ ಫಾ ಡುಪ್ಲೆಸಿಸ್ ಮತ್ತು ನನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಯಾವತ್ತೂ ಬೆಂಬಲವಾಗಿ ಇರಲಿದ್ದೇನೆ' ಎಂದು ಎಬಿಡಿ ವಿದಾಯ ಸಂದರ್ಭ ಹೇಳಿದ್ದರು.

Story first published: Wednesday, May 23, 2018, 21:48 [IST]
Other articles published on May 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X