ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೈತ ಹೋರಾಟಕ್ಕೆ ಅಂತರಾಷ್ಟ್ರೀಯ ಮಟ್ಟದ ಬೆಂಬಲಕ್ಕೆ ಸಚಿನ್ ಸಹಿತ ಹಲವು ಕ್ರಿಕೆಟಿಗರ ವಿರೋಧ

star cricketers Bats Against Rihanna & Greta, Other Celebs Follow

ಕಳೆದ ಎರಡು ತಿಂಗಳಿನಿಂದ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಂತಾರಾಷ್ಟ್ರೀಯ ಪಾಪ್ ಗಾಯಕಿ, ನಟಿ ರಿಹನ್ನಾ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಳಿಕ ಅಂತಾರಾಷ್ಟ್ರೀಯ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾಥನ್‌ಬರ್ಗ್ ನೀಲಿಚಿತ್ರ ತಾರೆ ಮಿಯಾ ಖಲೀಫಾ ಸೇರಿದಂತೆ ಸಾಕಷ್ಟು ಅಂತಾರಾಷ್ಟ್ರಿಯ ಸೆಲೆಬ್ರಿಟಿಗಳು ರೈತರ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ವಿದೇಶಿ ಸೆಲೆಬ್ರಿಟಿಗಳು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿರುವಂತೆಯೇ ಭಾರತದ ಕ್ರಿಕೆಟ್ ತಾರೆಗಳು ಹಾಗೂ ಸಿನಿಮಾ ತಾರೆಗಳು ಈ ಬೆಂಬಲಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ ಸಹಿತ ಹಲವರು ಟ್ವೀಟ್ ಮೂಲಕ ವಿರೋಧಿಸಿದ್ದಾರೆ.

'ಹಿಂದಿನ ಸೀಟಿನಲ್ಲಿ ಕೂತು ಕೊಹ್ಲಿಗೆ ಸಹಾಯ ಮಾಡೋದು ನನ್ನ ಕೆಲಸ''ಹಿಂದಿನ ಸೀಟಿನಲ್ಲಿ ಕೂತು ಕೊಹ್ಲಿಗೆ ಸಹಾಯ ಮಾಡೋದು ನನ್ನ ಕೆಲಸ'

ಮೊದಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರ ಪ್ರತಿಭಟನೆಗೆ ವಿದೇಶಿ ಸೆಲೆಬ್ರಿಟಿಗಳು ಬೆಂಬಲವನ್ನು ನೀಡುತ್ತಿರುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಅಸಮಾಧಾನವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ 'ಇಂಡಿಯಾ ಟುಗೇದರ್' ಹಾಗೂ 'ಇಂಡಿಯಾ ಅಗೈನ್ಸ್ಟ್ ಪ್ರೊಪಗಾಂಡಾ' ಹ್ಯಾಶ್‌ಟ್ಯಾಗ್ ಬಳಸಿತ್ತು.

ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದ ಬಳಿಕ ಮೊದಲಿಗೆ ಸಚಿನ್ ತೆಂಡೂಲರ್ "ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳುವುದಿಲ್ಲ. ಹೊರಗಿನ ಶಕ್ತಿಗಳು ಗಮನಿಸಬಹುದು ಆದರೆ ಪಾಲ್ಗೊಳ್ಳಲು ಸಾಧ್ಯವಿಲ್ಲ. ಭಾರತೀಯರಿಗೆ ಭಾರತದ ಬಗ್ಗೆ ತಿಳಿದಿದೆ ಮತ್ತು ಭಾರತೀಯರೇ ನಿರ್ಧರಿಸುತ್ತಾರೆ. ರಾಷ್ಟ್ರಕ್ಕಾಗಿ ಒಗ್ಗಟ್ಟಿನಿಂದ ಮುಂದುವರಿಯೋಣ" ಎಂದು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ವಿದೇಶಾಂಗ ಇಲಾಖೆ ಬಳಸಿದ್ದ 'ಇಂಡಿಯಾ ಟುಗೇದರ್' ಹಾಗೂ 'ಇಂಡಿಯಾ ಅಗೈನ್ಸ್ಟ್ ಪ್ರೊಪಗಾಂಡಾ' ಹ್ಯಾಶ್‌ಟ್ಯಾಗ್ ಬಳಸಿದ್ದರು.

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!

ಟೀಮ್ ಇಮಡಿಯಾ ನಾಯಕ ವಿರಾಟ್ ಕೊಹ್ಲಿ "ಭಿನ್ನಾಭಿಪ್ರಾಯಗಳ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರೋಣ. ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಶಾಂತಿಯನ್ನು ತರಲು ಮತ್ತು ಒಟ್ಟಾಗಿ ಮುಂದುವರಿಯಲು ಎಲ್ಲಾ ಪಕ್ಷಗಳ ಕಡೆಯಿಂದ ಸೌಹಾರ್ದಯುತ ಪರಿಹಾರ ಸಿಗುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಟ್ವೀಟ್ ಮಾಡಿದ್ದಾರೆ.

Story first published: Thursday, February 4, 2021, 13:29 [IST]
Other articles published on Feb 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X