ಇಂಗ್ಲೆಂಡ್ ವಿರುದ್ಧ ರೋಹಿತ್ ಮಿಂಚಲಿದ್ದಾರೆ: ಸುನಿಲ್ ಗವಾಸ್ಕರ್ ವಿಶ್ವಾಸಕ್ಕೆ ಇಲ್ಲಿದೆ ಬಲವಾದ ಕಾರಣ!

ಮುಂಬೈ, ಜುಲೈ 8: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿದೆ. ಸದ್ಯ ವಿರಾಮದಲ್ಲಿರುವ ಭಾರತೀಯ ಆಟಗಾರರ ತಂಡ ಮುಂದಿನ ವಾರ ಮತ್ತೆ ಒಟ್ಟಾಗಲಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಅನುಭವಿ ಆಟಗಾರನ ಬಗ್ಗೆ ವಿಶೇಷ ಭರವಸೆಯನ್ನು ವ್ಯಕ್ತಡಿಸಿದ್ದಾರೆ.

ಸುನಿಲ್ ಗವಾಸ್ಕರ್ ಹೀಗೆ ವಿಶ್ವಾಸವನ್ನು ವ್ಯಕ್ತಪಡಿಸಿದ ಆಟಗಾರ ಯಾರೂ ಅಲ್ಲ. ಭಾರತೀಯ ತಂಡದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ದಾಖಲೆಯ ಪ್ರದರ್ಶನವನ್ನು ನೀಡಿದ್ದರು. ಐದು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದ ಅವರು ತಂಡ ಸೆಮಿಫೈನಲ್‌ವರೆಗೆ ತಲುಪಲು ಕಾರಣವಾಗಿದ್ದರು.

ಭಾರತ vs ಶ್ರೀಲಂಕಾ: ಋತುರಾಜ್ ಗಾಯಕ್ವಾಡ್‌ಗೆ ಕನ್ನಡ ಮೇಷ್ಟ್ರಾದ ಕೆ ಗೌತಮ್ಭಾರತ vs ಶ್ರೀಲಂಕಾ: ಋತುರಾಜ್ ಗಾಯಕ್ವಾಡ್‌ಗೆ ಕನ್ನಡ ಮೇಷ್ಟ್ರಾದ ಕೆ ಗೌತಮ್

ವಿಶ್ವಕಪ್‌ನ ಪ್ರದರ್ಶನ ಮರುಕಳಿಸಿದರೆ ಅಚ್ಚರಿಯಿಲ್ಲ

ವಿಶ್ವಕಪ್‌ನ ಪ್ರದರ್ಶನ ಮರುಕಳಿಸಿದರೆ ಅಚ್ಚರಿಯಿಲ್ಲ

ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆ ವಿಶ್ವಕಪ್‌ನಲ್ಲಿ ಪ್ರದರ್ಶಿಸಿದ ಆಟವನ್ನು ಮರುಕಳಿಸಿದರೆ ಅಚ್ಚರಿಯಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ರೋಹಿತ್ ಶರ್ಮಾ ಅಂದು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಪ್ರದರ್ಶಿಸಿದ ಆಟವನ್ನು ರೆಡ್ ಬಾಲ್ ಮಾದರಿಯಲ್ಲಿ ಪ್ರದರ್ಶಿಸದೆ ಇರಲು ಯಾವುದೇ ಕಾರಣಗಳು ಇಲ್ಲ ಎಂದಿದ್ದಾರೆ.

ಈಗ ಮತ್ತಷ್ಟು ಅನುಭವಿಯಾಗಿದ್ದಾರೆ ರೋಹಿತ್

ಈಗ ಮತ್ತಷ್ಟು ಅನುಭವಿಯಾಗಿದ್ದಾರೆ ರೋಹಿತ್

"ಕಳೆದ ಎರಡು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಸಿಡಿಸಿದ ಅದ್ಭುತ ಐದು ಶತಕಗಳನ್ನು ನಾವು ನೋಡಿದ್ದೇವೆ. ದಕ್ಷಿಣ ಆಫ್ರಿಕಾ ವಿರುದ್ಧ ಅಂದು ಸಿಡಿಸಿದ ಶತಕ ಕಠಿಣ ಪಿಚ್ ಹಾಗೂ ಚಳಿಯ ವಾತಾವರಣದಲ್ಲಿ ಮೂಡಿ ಬಂದಿತ್ತು. ಅವರು ಅಂದು ಅದ್ಭುತವಾಗಿ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಎರಡು ವರ್ಷಗಳ ನಂತರ ಈಗ ಅವರು ಮತ್ತಷ್ಟು ಅನುಭವಿಯಾಗಿದ್ದರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದು ಮರುಕಳಿಸಿದರೆ ಅಚ್ಚರಿಯಿಲ್ಲ" ಎಂದು ಸುನಿಲ್ ಗವಾಸ್ಕರ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭರವಸೆಯ ಪ್ರದರ್ಶನ ನೀಡಿದರಾದರೂ ದೊಡ್ಡ ಮೊತ್ತವನ್ನು ಗಳಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಆದರೆ ಅವರು ಪ್ರದರ್ಶಿಸಿದ ತಾಂತ್ರಿಕ ಸಾಮರ್ಥ್ಯ ಅಭಿಮಾನಿಗಳಲ್ಲಿ ಭರವಸೆಯನ್ನು ಮೂಡಿಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದ್ದಾರೆ.

ಶ್ರೀಲಂಕಾ ಆಟಗಾರರಿಗೆ ಕಾಡುತಿದೆ ಕೋವಿಡ್ ಚಿಂತೆ | Oneindia Kannada
ಗಾಯಗೊಂಡಿರುವ ಶುಬ್ಮನ್ ಗಿಲ್

ಗಾಯಗೊಂಡಿರುವ ಶುಬ್ಮನ್ ಗಿಲ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೂ ಮುನ್ನ ಮತ್ತೋರ್ವ ಯುವ ಆರಂಭಿಕ ಆಟಗಾರ ಗಾಯಗೊಂಡಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಅಥವಾ ಕೆಎಲ್ ರಾಹುಲ್ ಆಡುವ ಸಾಧ್ಯತೆಗಳು ಇದೆ. ಬಂಗಾಳದ ಯುವ ಆಟಗಾರ ಅಭಿಮನ್ಯು ಈಶ್ವರನ್ ಮೀಸಲು ಆಟಗಾರನಾಗಿ ತಂಡದ ಜೊತೆಯಿದ್ದು ಅಗತ್ಯಬಿದ್ದರೆ ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶವಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, July 8, 2021, 12:50 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X