ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇವರು ಕೊಟ್ಟ ಪ್ರತಿಭೆಯನ್ನು ಆತ ವ್ಯರ್ಥಗೊಳಿಸ್ತಿದ್ದಾನೆ: ಗವಾಸ್ಕರ್ ಹೀಗಂದಿದ್ದು ಯಾರ ಬಗ್ಗೆ!

Sunil Gavaskar expresses disappointment on Sanju Samson said Wasting God Given Talent

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಯುವ ಆಟಗಾರರ ಬಗ್ಗೆ ಅವರ ಪ್ರತಿಭೆಗಳ ಬಗ್ಗೆ ಗವಾಸ್ಕರ್ ಸಾಕಷ್ಟು ಸಂದರ್ಭದಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯದ ಆರಂಭದಲ್ಲಿಯೇ ಸುನಿಲ್ ಭಾರತದ ಓರ್ವ ಯುವ ಪ್ರತಿಭಾನ್ವಿತ ಆಟಗಾರನ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಗವಾಸ್ಕರ್ ಈ ರೀತಿಯ ಮಾತುಗಳನ್ನಾಡಲು ಕಾರಣವೂ ಇದೆ.

ಭಾರತೀದ ಯುವ ಕ್ರಿಕೆಟಿಗನನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಗವಾಸ್ಕರ್ ಈ ಆಟಗಾರನಲ್ಲಿ ಅತ್ಯುತ್ತಮವಾದ ಪ್ರತಿಭೆಯಿದೆ. ಆದರೆ ಪ್ರತೀ ಬಾರಿಯೂ ಮಾಡಿದ ತಪ್ಪನ್ನು ಈತ ಮುಂದುವರಿಸುತ್ತಾನೆ. ಶಾಟ್ ಸೆಲೆಕ್ಷನ್‌ನಲ್ಲಿ ಪದೇ ಪದೆ ಎಡವುತ್ತಿರುವುದು ಈ ಆಟಗಾರನ ಹಿನ್ನಡೆಗೆ ಕಾರಣ ಎಂದಿದ್ದಾರೆ ಸುನಿಲ್ ಗವಾಸ್ಕರ್

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

ಸುನಿಲ್ ಗವಾಸ್ಕರ್ ಹೀಗೆ ಮಾತನಾಡಿದ್ದು ಭಾರತದ ಯುವ ಆಟಗಾರ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬಗ್ಗೆ. ಸದಾ ಅಸ್ಥಿರ ಪ್ರದರ್ಶನವನ್ನೇ ನೀಡುವ ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಾರೆ. ಸಂಜು ಸ್ಯಾಮ್ಸನ್ ಇಷ್ಟು ಅಸ್ಥಿರವಾಗಿ ಪ್ರದರ್ಶನ ನೀಡಲು ಕಾರಣವೇನು ಎಂಬುದರ ಬಗ್ಗೆಯೂ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಸಂಜು ಸ್ಯಾಮ್ಸನ್ ಮಾಡುತ್ತಿರುವ ಎಡವಟ್ಟುಗಳ ಬಗ್ಗೆ ಹಿರಿಯ ಆಟಗಾರ ವಿಶ್ಲೆಷಣೆ ಮಾಡಿದ್ದಾರೆ.

ಸಂಜು ಸ್ಯಾಮ್ಸನ್ ಹೀಗೆ ಅಸ್ಥಿರ ಪ್ರದರ್ಶನ ನೀಡಲು ಅವರ ಹೊಡೆತಗಳ ಆಯ್ಕೆಯಲ್ಲಿನ ತಪ್ಪುಗಳೇ ಕಾರಣ ಎಂದು ನುಸಿನಿಲ್ ಗವಾಸ್ಕರ್ ವಿವರಿಸಿದ್ದಾರೆ. ಸಂಜು ಸಂತಾರಾಷ್ಟ್ರೀಯ ಪಮದ್ಯಗಳಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ. ಆದರೆ ಆರ ಆರಂಭದಿಂದಲೇ ಚೆಂಡನ್ನು ಮೈದಾನದಿಂದ ಆಚೆಗೆ ಅಟ್ಟಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಿಲ್ಲ. ನಿಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಬಹುಶಃ ಅದು ಅಸಾಧ್ಯ, ಆರಂಭದಲ್ಲಿ ಪಾದದ ಚಲನೆಯ ಮೇಲೆ ಗಮನ ನೀಡಿ ಬಳಿಕ ದೊಡ್ಡ ಹೊಡೆತಗಳಿಗೆ ಕೈ ಹಾಕಬಹುದು ಎಂದು ಸಂಜು ಸ್ಯಾಮ್ಸನ್‌ಗೆ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'

ಸಂಜು ಸ್ಯಾಮ್ಸನ್ ಈ ಬಾರಿಯ ಆವೃತ್ತಿಯ ಮೊದಲ ಚರಣದಲ್ಲಿ ಒಂದು ಶತಕವನ್ನು ಕೂಡ ಸಿಡಿಸಿದ್ದಾರೆ. ಆದರೆ ಈ ಫಾರ್ಮ್‌ಅನ್ನು ಮುಮದುವರಿಸಲು ಸಂಜು ವಿಫಲವಾಗುತ್ತಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿಯೂ ಸಂಜು ಬ್ಯಾಟಿಂಗ್‌ನಲ್ಲಿ ವಿಫಲವಾದರು. ಕೇವಲ 4 ರನ್‌ಗಳಿಗೆ ಔಟಾಗಿದ್ದರು. ಶಾಟ್ ಸೆಲೆಕೆಕ್ಷನ್‌ನ ಮೇಲೆ ಸಂಜು ಗಮನಹರಿಸಿದರೆ ಆತನ ಆಟದ ಶೈಲಿಯಲ್ಲಿ ಬದಲಾವನೆ ಆಗಲು ಸಾಧ್ಯವಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.

ಈ ವಿಚಾರಗಳ ಮೇಲೆ ಸಂಜು ಸ್ಯಾಮ್ಸನ್ ಗಮನಹರಿಸಬೇಕಿದೆ. ಇಲ್ಲವಾದರೆ ಆತನಿಗೆ ದೇವರು ಕೊಟ್ಟ ಪ್ರತಿಭೆಯನ್ನು ಆತ ವ್ಯರ್ಥಮಾಡಿಕೊಂಡಂತೆ. ನಾನು ತುಂಬಾ ಸಲ ಹೇಳಿದ್ದೇನೆ ಶಾಟ್ ಸೆಲೆಕ್ಷನ್‌ನಲ್ಲಿ ತಪ್ಪಗುವ ಮೂಲಕ ಆಟದ ಲಯವನ್ನು ಕಳೆದುಕೊಳ್ಳುತ್ತಾರೆ. ಇದುವೇ ಆಟಗಾರನನ್ನು ಪ್ರಬುದ್ಧರನ್ನಾಗಿ ಮಾಡುತ್ತದೆ. ಭಾರತ ತಂಡದ ಖಾಯಂ ಸದಸ್ಯನಾಗಬೇಕಾದರೆ ಆತನ ಶಾಟ್ ಸೆಲೆಕ್ಷನ್ ತುಂಬಾ ಉತ್ತಮವಾಗಿರಬೇಕು" ಎಂದಿದ್ದಾರೆ ಸುನಿಲ್ ಸವಾಸ್ಕರ್.

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

KKR ತಂಡ MI ವಿರುದ್ಧ ಗೆಲುವು ಸಾಧಿಸಿದ್ದು ಹೇಗೆ | Oneindia Kannada

ಶಾಟ್ ಆಯ್ಕೆಯೇ ಅವನನ್ನು ಕೆಳಗಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಅವರು ಅಲ್ಲಿ ಬ್ಯಾಟಿಂಗ್ ಅನ್ನು ತೆರೆಯುವುದಿಲ್ಲ. ಆತ ಎರಡನೇ ಅಥವಾ ಮೂರನೇ ವಿಕೆಟ್ ಕೆಳಗೆ. ಮತ್ತು ಅವನು ನೆಲದಿಂದ ಮೊದಲ ಚೆಂಡನ್ನು ಹೊಡೆಯಲು ನೋಡುತ್ತಾನೆ. ಅದು ಅಸಾಧ್ಯ. ನೀವು ಅತ್ಯಂತ ಶ್ರೀಮಂತ ರೂಪದಲ್ಲಿದ್ದರೂ ಅದು ಸಂಪೂರ್ಣವಾಗಿ ಅಸಾಧ್ಯ. ಬಹುಶಃ ನೀವು ಅದನ್ನು ಎರಡು ಮತ್ತು ಮೂರು ಬಾರಿ ಹೊಡೆದು ಕಾಲುಗಳನ್ನು ಚಲಿಸುವಂತೆ ಮಾಡಿ ನಂತರ ಆಟವಾಡಲು ನೋಡಿ "ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

Story first published: Friday, September 24, 2021, 10:01 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X