ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬಹುದಾದ ತಂಡಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿತ್ತು. ಆದರೆ ಅಕ್ಟೋಬರ್ 24ರ ಭಾನುವಾರದಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶ ಹಾಗೂ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಪಂದ್ಯದ ಫಲಿತಾಂಶ ಇದೀಗ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುವಂತೆ ಮಾಡಿಬಿಟ್ಟಿವೆ.

ಭಾರತ vs ಪಾಕ್: ಭಾರತಕ್ಕೆ ಹೆಚ್ಚು ರನ್ ಬರಬೇಕೆಂದರೆ ಆತನನ್ನು ತಂಡದಿಂದ ಹೊರಗಿಡಿ: ಆಕಾಶ್ ಚೋಪ್ರಾಭಾರತ vs ಪಾಕ್: ಭಾರತಕ್ಕೆ ಹೆಚ್ಚು ರನ್ ಬರಬೇಕೆಂದರೆ ಆತನನ್ನು ತಂಡದಿಂದ ಹೊರಗಿಡಿ: ಆಕಾಶ್ ಚೋಪ್ರಾ

ಹೌದು, ಪಾಕಿಸ್ತಾನ ತಂಡ ಯಾರೂ ಸಹ ಊಹಿಸಿರದ ರೀತಿ ಬಲಿಷ್ಠ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಪಂದ್ಯಗಳನ್ನು ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದರ ಮೂಲಕ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಈ 2 ಬಲಿಷ್ಠ ತಂಡಗಳ ವಿರುದ್ಧ ಗೆದ್ದಿರುವ ಪಾಕಿಸ್ತಾನಕ್ಕೆ ಗ್ರೂಪ್‌ 2ನಲ್ಲಿ ಇನ್ನುಳಿದ ಅಫ್ಘಾನಿಸ್ತಾನ, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸುವುದು ಕಷ್ಟದ ಕೆಲಸವೇನಲ್ಲ. ಹೀಗಾಗಿ ಸೆಮಿಫೈನಲ್ ಹಂತಕ್ಕೆ ಗ್ರೂಪ್ 2ರಿಂದ ಪಾಕಿಸ್ತಾನ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಲಿರುವ ಎರಡನೇ ತಂಡ ನ್ಯೂಜಿಲೆಂಡ್ ಆಗುತ್ತಾ ಅಥವಾ ಭಾರತ ಆಗುತ್ತಾ ಎಂಬ ಅನುಮಾನ ಇದೀಗ ಹುಟ್ಟುಕೊಂಡಿದೆ.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಹೀಗಾಗಿ ಅಕ್ಟೋಬರ್ 31ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಯಾವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ ಹಾಗೂ ಯಾವ ತಂಡ ಟೂರ್ನಿಯಿಂದ ಹೊರಬೀಳಲಿದೆ ಎಂಬುದನ್ನು ಬಹುತೇಕ ನಿರ್ಧರಿಸಲಿವೆ. ಈ ಕಾರಣದಿಂದಾಗಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಬೇಕಾದರೆ ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಟಗಾರರನ್ನೇ ಬಳಸಿಕೊಂಡರೆ ಗೆಲುವು ಕಷ್ಟಕರ ಎಂದಿರುವ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಂಡದಲ್ಲಿ ಆಗಬೇಕಿರುವ 2 ಪ್ರಮುಖ ಬದಲಾವಣೆಗಳನ್ನು ಈ ಕೆಳಕಂಡಂತೆ ಹೆಸರಿಸಿದ್ದಾರೆ.

ಭುವನೇಶ್ವರ್ ಕುಮಾರ್ ಆಟದಲ್ಲಿ ಈ ಹಿಂದೆ ಇದ್ದ ಪರಿಣಾಮವಿಲ್ಲ

ಭುವನೇಶ್ವರ್ ಕುಮಾರ್ ಆಟದಲ್ಲಿ ಈ ಹಿಂದೆ ಇದ್ದ ಪರಿಣಾಮವಿಲ್ಲ

ಭಾರತದ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್ ವಿಭಾಗ ಸಮಸ್ಯೆಗಳಿಂದ ಕೂಡಿದೆ ಎಂದು ಹೇಳಿರುವ ಆಕಾಶ್ ಚೋಪ್ರಾ ಭುವನೇಶ್ವರ್ ಕುಮಾರ್ ಬೌಲಿಂಗ್ ಈ ಹಿಂದೆ ಇದ್ದಷ್ಟು ಪರಿಣಾಮಕಾರಿಯಾಗಿಲ್ಲ ಎಂದಿದ್ದಾರೆ. ಈ ಹಿಂದೆ ಗಾಯದ ಸಮಸ್ಯೆಗೊಳಗಾಗಿ ಪುನಃ ತಂಡದಲ್ಲಿ ಸ್ಥಾನ ಪಡೆದುಕೊಂಡ ಭುವನೇಶ್ವರ್ ಕುಮಾರ್ ಈ ವರ್ಷ ಆಡಿರುವ ಶ್ರೀಲಂಕಾ ವಿರುದ್ಧದ ಸರಣಿ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮತ್ತು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಈ ಹಿಂದೆ ನೀಡುತ್ತಿದ್ದಂತೆ ಪ್ರದರ್ಶನವನ್ನು ನೀಡಿಲ್ಲ ಎಂದು ಭುವನೇಶ್ವರ್ ಕುಮಾರ್ ಸರಿಯಾದ ಆಯ್ಕೆಯಲ್ಲ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮೊಹಮ್ಮದ್ ಶಮಿ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಟಿ ಟ್ವೆಂಟಿ ಪಂದ್ಯಗಳಲ್ಲಿ ನೀಡಬಲ್ಲ ಆಟಗಾರನಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಜಡೇಜಾ ಆಯ್ಕೆಯನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ

ಜಡೇಜಾ ಆಯ್ಕೆಯನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ

"ರವೀಂದ್ರ ಜಡೇಜಾ ಟಿ ಟ್ವೆಂಟಿ ಪಂದ್ಯವೊಂದರಲ್ಲಿ 4 ಓವರ್ ಬೌಲಿಂಗ್ ಮಾಡಬಲ್ಲ ಬೌಲರ್ ಆದರೆ, ವಿಕೆಟ್ ಪಡೆಯಬಲ್ಲ ಬೌಲರ್ ಅಲ್ಲ. ಹಾಗೂ ರವೀಂದ್ರ ಜಡೇಜಾ ರಾಹುಲ್ ಚಹರ್, ಯುಜುವೇಂದ್ರ ಚಾಹಲ್ ಅಥವಾ ರಶೀದ್ ಖಾನ್ ರೀತಿಯ ಬೌಲರ್ ಅಲ್ಲ" ಎಂದು ಆಕಾಶ್ ಚೋಪ್ರಾ ರವೀಂದ್ರ ಜಡೇಜಾ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಈ ಬದಲಾವಣೆಗಳನ್ನು ತರಬೇಕಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದು 5 ಬೌಲರ್‌ಗಳ ಕಾಂಬಿನೇಶನ್ ಹೆಚ್ಚು ಪರಿಣಾಮ ಬೀರದೆ ಇರುವ ಕಾರಣ ಮತ್ತೋರ್ವ ಬೌಲರ್ ಅಗತ್ಯತೆ ತಂಡಕ್ಕಿದೆ ಎಂದಿದ್ದಾರೆ.

ಫೈನಲ್ ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸುತ್ತೆ ಎಂದ ಪಾಕ್ ನ ಸನಾ ಮಿರ್ | Oneindia Kannada
ಭಾರತ vs ನ್ಯೂಜಿಲೆಂಡ್ ಪಂದ್ಯ ಯಾವಾಗ ಮತ್ತು ಎಲ್ಲಿ?

ಭಾರತ vs ನ್ಯೂಜಿಲೆಂಡ್ ಪಂದ್ಯ ಯಾವಾಗ ಮತ್ತು ಎಲ್ಲಿ?

ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 28ನೇ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿದ್ದು ಈ ಪಂದ್ಯ ಅಕ್ಟೋಬರ್ 31ರ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 27, 2021, 10:40 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X