ಟಿ20 ವಿಶ್ವಕಪ್: ಅಭ್ಯಾಸ ಪಂದ್ಯದಲ್ಲಿ ಇಂದು ಭಾರತಕ್ಕೆ ಇಂಗ್ಲೆಂಡ್ ಎದುರಾಳಿ; ಪಂದ್ಯ ವೀಕ್ಷಿಸುವುದು ಹೇಗೆ?

ಟಿ20 ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗುವ ಮೂಲಕ ಪ್ರತಿಷ್ಠಿತ ಟೂರ್ನಿ ಈಗಾಗಲೇ ಚಾಲನೆ ಪಡೆದುಕೊಂಡಿದೆ. ಆದರೆ ಪ್ರಧಾನ ಸುತ್ತು ಸೂಪರ್ 12 ಹಂತದ ಪಂದ್ಯಗಳು ಆಗಸ್ಟ್ 23ರಿಂದ ಆರಂಭವಾಗಲಿದೆ. ಅದರಲ್ಲೂ ಭಾರತದ ಮೊದಲ ಪಂದ್ಯ ಮುಂದಿನ ಭಾನುವಾರ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಎರಡು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ. ಅದರಲ್ಲಿ ಒಂದು ಪಂದ್ಯ ಇಂದು (ಅಕ್ಟೋಬರ್ 18) ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಎದುರಾಳಿಯಾಗಿರಲಿದೆ. ಮತ್ತೊಂದು ಅಭ್ಯಾಸ ಪಂದ್ಯ ಬುಧವಾರ ನಡೆಯಲಿದ್ದು ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣೆಸಾಡಲಿದೆ.

ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ಈ ಹಿಂದಿನ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆತಿಥೇಯ ಭಾರತ ತಂಡ ಅಂದು ನಂತರ ಚಾಂಪಿಯನ್ ಪಟ್ಟಕ್ಕೇರಿದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೆಮಿ ಫೈನಲ್‌ನಲ್ಲಿ ಸೋಲು ಕಂಡಿದ್ದರೆ ಇಂಗ್ಲೆಂಡ್ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದು ವೆಸ್ಟ್ ಇಂಡೀಸ್ ತಮಡದ ವಿರುದ್ಧ ಅಂತಿಮ ಓವರ್‌ನಲ್ಲಿ ರೋಚಕವಾಗಿ ಸೋಲು ಕಂಡಿತ್ತು. ಈ ಮೂಲಕ ರನ್ನರ್‌ಅಪ್ ತಂಡವಾಗಿದೆ. ಇದೀಗ ಈ ಎರಡು ತಂಡಗಳು ಕೂಡ ಈ ಬಾರಿಯ ಟಿ20 ವಿಶ್ವಕಪ್‌ ಗೆಲ್ಲುವ ಸಾಧ್ಯತೆಯಿರುವ ಪ್ರಮುಖ ಸ್ಪರ್ಧಿಗಳಾಗಿವೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವುಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವು

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ 'ಬಿ' ಗುಂಪಿನಲ್ಲಿದ್ದು ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಹಾಗೂ ಅರ್ಹತಾ ಸುತ್ತಿನಿಂದ ತೇರ್ಗಡೆಯಾಗ ಇತರ ಎರಡು ತಂಡಗಳ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಎರಡು ಅರ್ಹತಾ ಸುತ್ತಿನಿಂದ ತೇರ್ಗಡೆಯಾದ ತಂಡಗಳ ವಿರುದ್ಧ ಸೆಣೆಸಾಡಲಿದೆ.

ಈ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಎಲ್ಲಾ ತಂಡಗಳು ಕೂಡ ಆಡಲಿದೆ. ಈ ಮೂಲಕ ಟೂರ್ನಿಗೆ ಸಿದ್ಧತೆಯನ್ನು ನಡೆಸಲಾಗುತ್ತದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯದ ಮಾಹಿತಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಅಕ್ಟೋಬರ್ 18, ಸೋಮವಾರದಂದು ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆ

ಯಾವ ಚಾನೆಲ್‌ನಲ್ಲಿ ಇರಲಿದೆ ನೇರಪ್ರಸಾರ: ಈ ಅಭ್ಯಾಸ ಪಂದ್ಯದ ನೇರಪ್ರಸಾರವನ್ನು ಕೂಡ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಮಾಡಲಿದೆ. ಸ್ಟಾರ್‌ಸ್ಪೋರ್ಟ್ಸ್ 1, ಸ್ಟಾರ್‌ ಸ್ಪೋರ್ಟ್ಸ್ ಕನ್ನಡ, ಸ್ಟಾರ್‌ಸ್ಪೋರ್ಟ್ಸ್ ತೆಲುಗು, ಸ್ಟಾರ್ ಸ್ಪೋರ್ಟ್ಸ್ ತಮಿಳು ಹಾಗೂ ಹಿಂದಿಯಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಅಭ್ಯಾಸ ಪಂದ್ಯಕ್ಕೆ ಲಭ್ಯವಿರುವ ಆಟಗಾರರು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಇವ್ರೆ ನೋಡಿ ಐಪಿಎಲ್ ಸ್ಟಾರ್ ಆಟಗಾರರು | Oneindia Kannada

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಜೇಸನ್ ರಾಯ್, ಮೊಯೀನ್ ಅಲಿ, ಟಾಮ್ ಕರನ್, ಡೇವಿಡ್ ವಿಲ್ಲೆ, ಕ್ರಿಸ್ ವೋಕ್ಸ್, ಜಾನಿ ಬೈರ್‌ಸ್ಟೊವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಮಾರ್ಕ್ ವುಡ್

For Quick Alerts
ALLOW NOTIFICATIONS
For Daily Alerts
Story first published: Monday, October 18, 2021, 13:06 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X