ಟಿ20 ವಿಶ್ವಕಪ್: ಒಮನ್ vs ಬಾಂಗ್ಲಾದೇಶ ಪಂದ್ಯದ ಟಾಸ್ ವರದಿ, ಆಡುವ ಬಳಗ ಮತ್ತು ಲೈವ್‌ ಸ್ಕೋರ್

ಕಳೆದ ಭಾನುವಾರದಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗುವುದರ ಮೂಲಕ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಚಾಲನೆ ಪಡೆದುಕೊಂಡಿದೆ. ಈ ಅರ್ಹತಾ ಸುತ್ತಿನ ಆರನೇ ಪಂದ್ಯ ಇಂದು ( ಅಕ್ಟೋಬರ್ 19 ) ಬಾಂಗ್ಲಾದೇಶ ಮತ್ತು ಒಮನ್ ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ಪಂದ್ಯ ಒಮನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಆಡುವ ಬಳಗಗಳು

ಒಮನ್ ಆಡುವ ಬಳಗ: ಜತೀಂದರ್ ಸಿಂಗ್, ಅಕಿಬ್ ಇಲ್ಯಾಸ್, ಕಶ್ಯಪ್ ಪ್ರಜಾಪತಿ, ಜೀಶನ್ ಮಕ್ಸೂದ್ (ನಾಯಕ), ಮೊಹಮ್ಮದ್ ನದೀಮ್, ಅಯಾನ್ ಖಾನ್, ಸಂದೀಪ್ ಗೌಡ್, ನಸೀಮ್ ಖುಷಿ (ವಿಕೆಟ್ ಕೀಪರ್), ಕಲೀಮುಲ್ಲಾ, ಫಯಾಜ್ ಬಟ್, ಬಿಲಾಲ್ ಖಾನ್

ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್, ಮೊಹಮ್ಮದ್ ನೈಮ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹೊಸೇನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್

ಬಾಂಗ್ಲಾದೇಶ vs ಒಮನ್ ಲೈವ್ ಸ್ಕೋರ್:

1
51669

ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಒಮನ್ ತಂಡ ಪಪುವಾ ನ್ಯೂ ಗಿನಿಯಾ ತಂಡದ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿ ಒಮನ್ ತಂಡ ಎದುರಾಳಿ ಪಪುವಾ ನ್ಯೂ ಗಿನಿಯಾ ವಿರುದ್ಧ 10 ವಿಕೆಟ್‍ಗಳ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಪುವಾ ನ್ಯೂ ಗಿನಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಎದುರಾಳಿ ಒಮನ್ ತಂಡಕ್ಕೆ 130 ರನ್‌ಗಳ ಗುರಿಯನ್ನು ನೀಡಿತ್ತು. ಪಪುವಾ ನ್ಯೂ ಗಿನಿಯಾ ನೀಡಿದ ಈ ಮೊತ್ತವನ್ನು ಬೆನ್ನತ್ತಿದ ಒಮನ್ 13.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 131 ರನ್ ಗಳಿಸುವ ಮೂಲಕ 10 ವಿಕೆಟ್‍ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಇನ್ನು ಅದೇ ದಿನದಂದು ನಡೆದಿದ್ದ ಅರ್ಹತಾ ಸುತ್ತಿನ ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಸ್ಕಾಟ್ಲೆಂಡ್ ಸೋಲಿನ ರುಚಿ ತೋರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 141 ರನ್‌ಗಳ ಗುರಿಯನ್ನು ನೀಡಿತ್ತು. ಸ್ಕಾಟ್ಲೆಂಡ್ ತಂಡ ನೀಡಿದ ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸ್ಕಾಟ್ಲೆಂಡ್ 6 ರನ್‌ಗಳ ಗೆಲುವನ್ನು ಸಾಧಿಸಿದರೆ, ಸಾಕಷ್ಟು ಕ್ರಿಕೆಟ್ ಅನುಭವವನ್ನು ಹೊಂದಿರುವ ಬಾಂಗ್ಲಾದೇಶ ತಂಡ ಸ್ಕಾಟ್ಲೆಂಡ್ ವಿರುದ್ಧ ಸೋತು ಮುಖಭಂಗಕ್ಕೆ ಒಳಗಾಯಿತು.

ಪಾಕ್ ಕ್ರಿಕೆಟಿಗರಿಗೆ ಮಣ್ಣು ಮುಕ್ಕಿಸಲು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾದ ಟೀಂ ಇಂಡಿಯಾ | Oneindia Kannada

ಇನ್ನು ಅರ್ಹತಾ ಸುತ್ತಿನ ತನ್ನ ಮೊದಲನೇ ಪಂದ್ಯದಲ್ಲಿಯೇ ಸೋಲನ್ನು ಕಂಡಿರುವ ಬಾಂಗ್ಲಾದೇಶ ತಂಡ ಸೂಪರ್ 12 ಹಂತವನ್ನು ಪ್ರವೇಶಿಸುವ ತನ್ನ ಕನಸನ್ನು ಉಳಿಸಿಕೊಳ್ಳಬೇಕೆಂದರೆ ಇಂದು ಒಮನ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅತ್ತ ಒಮನ್ ತಂಡ ಕೂಡ ತನ್ನ ಮೊದಲನೇ ಪಂದ್ಯದಲ್ಲಿಯೇ 10 ವಿಕೆಟ್‍ಗಳ ಜಯವನ್ನು ಸಾಧಿಸಿದ್ದು ಬಾಂಗ್ಲಾದೇಶ ತಂಡಕ್ಕೆ ಕಠಿಣ ಪೈಪೋಟಿ ನೀಡುವುದಂತೂ ನಿಜ. ಹೀಗಾಗಿ ಈ ಪಂದ್ಯದಲ್ಲಿ ಒಮನ್ ವಿರುದ್ಧ ಗೆದ್ದು ಬಾಂಗ್ಲಾದೇಶ ತನ್ನ ಸೂಪರ್ 12 ಹಂತದ ಪ್ರವೇಶದ ಕನಸನ್ನು ಉಳಿಸಿಕೊಳ್ಳುತ್ತಾ ಅಥವಾ ಟೂರ್ನಿಯಿಂದ ಹೊರಬೀಳುವತ್ತ ಮುಖ ಮಾಡುತ್ತಾ ಎಂಬುದನ್ನು ಕಾದು ನೋಡಬೇಕು.

For Quick Alerts
ALLOW NOTIFICATIONS
For Daily Alerts
Story first published: Tuesday, October 19, 2021, 19:32 [IST]
Other articles published on Oct 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X