ಟಿ20 ವಿಶ್ವಕಪ್: ರಾಹುಲ್ ಬದಲು ಇಶಾನ್ ಕಿಶನ್; ಟೀಮ್ ಇಂಡಿಯಾದಲ್ಲಿ ಮಾಡಬಹುದಾದ 3 ಪ್ರಯೋಗಗಳು

ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡಿದ್ದು ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯತ್ತ ನೆಟ್ಟಿದೆ. ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು ಟೂರ್ನಿಗೆ ಚಾಲನೆ ದೊರೆತಿದೆ.

ಕೋಚ್ ಅವಧಿ ಅಂತ್ಯ: ಆರ್‌ಸಿಬಿ ಕೋಚ್ ಸಹಿತ ರವಿ ಶಾಸ್ತ್ರಿ ಮುಂದಿದೆ ಪ್ರಮುಖ ಆಯ್ಕೆಗಳು!ಕೋಚ್ ಅವಧಿ ಅಂತ್ಯ: ಆರ್‌ಸಿಬಿ ಕೋಚ್ ಸಹಿತ ರವಿ ಶಾಸ್ತ್ರಿ ಮುಂದಿದೆ ಪ್ರಮುಖ ಆಯ್ಕೆಗಳು!

ಆದರೆ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭಗೊಳ್ಳಲಿದ್ದು ಇದಕ್ಕೂ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಅಭ್ಯಾಸ ಪಂದ್ಯಗಳ ಪೈಕಿ ಮೊದಲನೇ ಪಂದ್ಯವು ಇಂದು ( ಅಕ್ಟೋಬರ್ 18 ) ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಈ ಪಂದ್ಯ ಆರಂಭಗೊಳ್ಳಲಿದೆ. ಹಾಗೂ ಭಾರತದ ಪಾಲಿನ ಎರಡನೇ ಅಭ್ಯಾಸ ಪಂದ್ಯವು ಅಕ್ಟೋಬರ್ 20, ಬುಧವಾರದಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ತಂಡವು ಎದುರಾಳಿಯಾಗಲಿದೆ.

ಟಿ20 ವಿಶ್ವಕಪ್: ಬೂಮ್ರಾ, ಜಡೇಜಾ ಅಲ್ಲ: ಭಾರತದ ಪ್ರಮುಖ ಬೌಲಿಂಗ್ ಅಸ್ತ್ರ ಈತನೇ ಎಂದ ರೈನಾ!ಟಿ20 ವಿಶ್ವಕಪ್: ಬೂಮ್ರಾ, ಜಡೇಜಾ ಅಲ್ಲ: ಭಾರತದ ಪ್ರಮುಖ ಬೌಲಿಂಗ್ ಅಸ್ತ್ರ ಈತನೇ ಎಂದ ರೈನಾ!

ಇನ್ನು ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದವು. ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯವೊಂದರಲ್ಲಿ ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಮತ್ತು ಇಂಗ್ಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋಲುಂಡಿತ್ತು. ಹೀಗೆ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಹಂತದವರೆಗೂ ತಲುಪಿ ಟೂರ್ನಿಯಿಂದ ಹೊರಬಿದ್ದಿದ್ದ ಈ ಎರಡೂ ತಂಡಗಳು ಸಹ ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಭರವಸೆಯನ್ನು ಹುಟ್ಟು ಹಾಕಿರುವ ತಂಡಗಳು ಎನಿಸಿಕೊಂಡಿವೆ. ಹೀಗಾಗಿ ಈ ಎರಡೂ ಬಲಿಷ್ಠ ತಂಡಗಳ ನಡುವೆ ಇಂದು ನಡೆಯಲಿರುವ ಅಭ್ಯಾಸ ಪಂದ್ಯ ಕೂಡ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಷ್ಟೆ ಅಲ್ಲದೇ ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಆಟಗಾರರ ಕುರಿತಾಗಿ ಕೆಲವೊಂದಷ್ಟು ಮಹತ್ವದ ಪ್ರಯೋಗಗಳನ್ನು ಮಾಡುವ ಅಗತ್ಯತೆಗಳಿವೆ. ಟೂರ್ನಿಗೆ ಪ್ರಕಟವಾಗಿರುವ ತಂಡದಲ್ಲಿರುವ ಭಾರತದ ಎಲ್ಲ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರಾಗಿದ್ದಾರೆ. ಹೀಗಾಗಿ ಟೂರ್ನಿ ಆರಂಭವಾಗುವ ಮುನ್ನ ನಡೆಯಲಿರುವ ಈ 2 ಅಭ್ಯಾಸ ಪಂದ್ಯಗಳಲ್ಲಿ ಈ ಕೆಳಕಂಡ 3 ಪ್ರಯೋಗಗಳನ್ನು ಕೈಗೊಳ್ಳುವುದು ಸೂಪರ್ 12 ಹಂತದ ಪಂದ್ಯಗಳಿಗೆ ಸಹಕಾರಿಯಾಗಲಿದೆ.

ಕೆಎಲ್ ರಾಹುಲ್ ಬದಲು ಇಶಾನ್ ಕಿಶನ್‌ಗೆ ಆರಂಭಿಕ ಆಟಗಾರನ ಸ್ಥಾನ

ಕೆಎಲ್ ರಾಹುಲ್ ಬದಲು ಇಶಾನ್ ಕಿಶನ್‌ಗೆ ಆರಂಭಿಕ ಆಟಗಾರನ ಸ್ಥಾನ

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಕಳೆದ ಹಲವಾರು ಪಂದ್ಯಗಳಿಂದ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬರುತ್ತಿರುವ ಕೆ ಎಲ್ ರಾಹುಲ್ ಅವರಿಗೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಆಟಗಾರನ ಸ್ಥಾನವನ್ನು ನೀಡುವುದರ ಬದಲಾಗಿ ಇಶಾನ್ ಕಿಶನ್ ಅವರಿಗೆ ಆರಂಭಿಕ ಆಟಗಾರನ ಸ್ಥಾನವನ್ನು ನೀಡುವುದು ಒಂದೊಳ್ಳೆ ಆಯ್ಕೆ ಎಂದರೆ ತಪ್ಪಾಗಲಾರದು. ಹೀಗೆ ಮಾಡುವುದರಿಂದ ಇಶಾನ್ ಕಿಶನ್ ಟೂರ್ನಿಯಲ್ಲಿ ಮುಂಬರುವ ಪಂದ್ಯಗಳಲ್ಲಿ ಅಗತ್ಯ ಬಿದ್ದಾಗ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಸಹಕಾರಿಯಾಗಲಿದೆ.

ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್

ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್

ಇತ್ತೀಚೆಗಷ್ಟೇ ಪರಿಷ್ಕೃತವಾದ ಭಾರತ ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದುಕೊಂಡ ಶಾರ್ದೂಲ್ ಠಾಕೂರ್ ಅವರಿಗೆ ಅಭ್ಯಾಸ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ನೀಡುವುದು ಉತ್ತಮ ಆಯ್ಕೆ. ಈಗಾಗಲೇ ತಂಡದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ತಂಡದ ಮತ್ತೋರ್ವ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ಅಭ್ಯಾಸ ಪಂದ್ಯಗಳಲ್ಲಿ ಅವಕಾಶ ನೀಡಿ ಮುಂದಿನ ಪಂದ್ಯಗಳಿಗೆ ಸಿದ್ಧರಾಗುವಂತೆ ಮಾಡುವುದು ಉತ್ತಮ.

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada
ರವಿಚಂದ್ರನ್ ಅಶ್ವಿನ್ ಮತ್ತು ವರುಣ್ ಚಕ್ರವರ್ತಿಗೆ ಅವಕಾಶ

ರವಿಚಂದ್ರನ್ ಅಶ್ವಿನ್ ಮತ್ತು ವರುಣ್ ಚಕ್ರವರ್ತಿಗೆ ಅವಕಾಶ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನುರಿತ ರವಿಚಂದ್ರನ್ ಅಶ್ವಿನ್ ಉಪಸ್ಥಿತಿ ಇರುವ ಕಾರಣ ರಾಹುಲ್ ಚಹರ್ ದೊಡ್ಡ ಮಟ್ಟದ ಅವಕಾಶಗಳನ್ನು ಪಡೆದುಕೊಳ್ಳದೇ ಇರಬಹುದು. ಇನ್ನು 4 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಪಂದ್ಯದತ್ತ ಮುಖ ಮಾಡಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವ ಅನಿವಾರ್ಯತೆಯಿದೆ. ರವಿಚಂದ್ರನ್ ಅಶ್ವಿನ್ ಜತೆಗೆ ಯುವ ಬೌಲರ್ ವರುಣ್ ಚಕ್ರವರ್ತಿಗೂ ಈ ಅಭ್ಯಾಸ ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, October 18, 2021, 18:19 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X