ಟಿ20 ವಿಶ್ವಕಪ್: ಒಂದೇ ಗುಂಪಿನಲ್ಲಿ ಭಾರತ-ಪಾಕ್, ಗ್ರೂಪ್ ಹಾಗೂ ತಂಡಗಳ ಮಾಹಿತಿ

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ತಂಡಗಳ ಗ್ರೂಫ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಯಾವ ಗ್ರೂಪ್‌ನಲ್ಲಿ ಯಾವ ತಂಡಗಳು ಕಾದಾಟವನ್ನು ನಡೆಸಲಿದೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದೆ.
ಗ್ರೂಪ್ 1 ಹಾಗೂ 2ರಲ್ಲಿ ಸದ್ಯ ತಲಾ ನಾಲ್ಕು ತಂಡಗಳಿವೆ. ಈ ಎರಡು ಗುಂಪುಗಳಿಗೂ ಅರ್ಹತಾ ಸುತ್ತಿನಲ್ಲಿ ಸ್ಥಾನವನ್ನು ಸಂಪಾದಿಸಿ ತಲಾ ಎರಡು ತಂಡಗಲೂ ಸೇರ್ಪಡೆಗೊಳ್ಳಲಿದೆ. ಹೀಗಾಗಿ ಎರಡು ಗುಂಪುಗಳಲ್ಲಿ ತಲಾ ಆರು ತಂಡಗಳು ಇರಲಿವೆ.

ಯಾವ ಗುಂಪಿನಲ್ಲಿ ಯಾವ ತಂಡ?
ಗ್ರೂಫ್ ಒಂದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್ ತಂಡಗಳು ಇದ್ದರೆ ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಪ್ಘಾನಿಸ್ತಾನ ತಂಡಗಳು ಇವೆ. ಐಸಿಸಿ ಈ ಗುಂಪುಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದು ಟೂರ್ನಿಯ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಸಾಂಪ್ರದಾಯಿಕ ತಂಡಗಳ ಮುಖಾಮುಖಿ
ಈ ಗುಂಪುಗಳಲ್ಲಿ ಎರಡು ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಜೋಡಿ ಒಂದೊಂದು ಗುಂಪುಗಳಲ್ಲಿ ಸ್ಥಾನವನ್ನು ಪಡೆದಿರುವುದನ್ನು ಗಮನಿಸಬಹುದು. ಮೊದಲ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಇದ್ದರೆ ಮತ್ತೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿ ಇದೆ. ಹೀಗಾಗಿ ಈ ಪರಸ್ಪರ ತಂಡಗಳು ಟಿ20 ವಿಶ್ವಕಪ್‌ನ ಲೀಗ್‌ಹಂತದಲ್ಲಿಯೇ ಮುಖಾಮುಖಿಯಾಗಲಿದೆ.

ಅರ್ಹತಾ ಸುತ್ತು
ಇನ್ನು ಐಸಿಸಿ ಅರ್ಹತಾ ಸುತ್ತಿನ ಗುಂಪುಗಳನ್ನು ಕೂಡ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ. ಇದರಲ್ಲಿ 8 ತಂಡಗಳ ಮಧ್ಯೆ ಸೆಣೆಸಾಟ ನಡೆಯಲಿದೆ. ಇದು ವಿಶ್ವಕಪ್‌ನ ಪ್ರಮುಖ ಸುತ್ತಿಗೆ 8 ತಂಡಗಳ ಪೈಕಿ ನಾಲ್ಕು ತಂಡಗಳ ಅರ್ಹತೆಯನ್ನು ನಿರ್ಧರಿಸುತ್ತದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಕೂಡ ಈ ಸುತ್ತಿನಲ್ಲಿ ಗೆದ್ದು ಅರ್ಹತೆಯನ್ನು ಸಂಪಾದಿಸಬೇಕಿದೆ.

ಅಕ್ಟೋಬರ್‌ನಲ್ಲಿ ವಿಶ್ವಕಪ್ ಆರಂಭ
ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜನೆಯಾಗಬೇಕಿತ್ತು. ಆದರೆ ಕೊರೊನಾವೈರಸ್‌ನ ಭೀತಿಯ ಕಾರಣದಿಂದಾಗಿ ಟೂರ್ನಿಯನ್ನು ಒಮಾನ್ ಹಾಗೂ ಯುಎಇಗೆ ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications