ಕೆಎಲ್, ಪಂತ್ ಜೊತೆಗೆ ಸ್ಪರ್ಧೆಗಿಳಿದರೆ ದೇಶವನ್ನು ಅಗೌರವಿಸಿದಂತೆ: ವೈರಲ್ ಆಯ್ತು ಸಂಜು ಸ್ಯಾಮ್ಸನ್ ಹೇಳಿಕೆ

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಂತೆ ಭಾರತ ತಂಡ ಈ ಟೂರ್ನಿಗೆ ತನ್ನ ಆಟಗಾರರನ್ನು ಆಯ್ಕೆ ಮಾಡಿದೆ. ಕಳೆದ ಸೋಮವಾರ ಭಾರತದ ಸ್ಕ್ವಾಡ್ ಪ್ರಕಟವಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಟೂರ್ನಿಗೆ 15 ಆಟಗಾರರು ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ತಂಡದಲ್ಲಿ ಭಾರತ ಸ್ಥಾನವನ್ನು ಪಡೆಯಲು ವಿಫಲವಾಗಿರುವ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಹೆಸರು ಪ್ರಮುಖವಾದ್ದು. ಕೇರಳ ಮೂಲದ ಈ ಆಟಗಾರ ಮೀಸಲು ಆಟಗಾರರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿಲ್ಲ.

ಸಂಜು ಸ್ಯಾಮ್ಸನ್ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ ಎಂಬುದು ಅಧಿಕೃತವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದೆ. ಸಂಜು ಸ್ಯಾಮ್ಸನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಅಭಿಮಾನಿಗಳು ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನಿಡಬೇಕು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ವಿಉಚಾರವಾಗಿ ಸ್ವತಃ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದು ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಸ್ಥಾನದಲ್ಲಿ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳಿಗೆ ವಿರೋಧವನ್ನು ವ್ಯಕ್ತೊಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂಜು ಆಡಿರುವ ಸ್ಪಷ್ಟ ಮಾತುಗಳು ಸಾಕಷ್ಟು ವೈರಲ್ ಆಗಿದೆ.

ಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದ ಎರಡು ಅತಿ ದೊಡ್ಡ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದ ಎರಡು ಅತಿ ದೊಡ್ಡ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಅವರಿಬ್ಬರು ನನ್ನ ತಂಡದ ಆಟಗಾರರು

ಅವರಿಬ್ಬರು ನನ್ನ ತಂಡದ ಆಟಗಾರರು

ಟ್ವೀಟ್ಟರ್‌ನಲ್ಲಿ ಸಂಜು ಸ್ಯಾಮ್ಸನ್ ಆಡಿರುವ ಮಾತುಗಳು ವೈರಲ್ ಆಗಿದೆ. ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವ ವಿಚಾರವಾಗಿ ತನ್ನ ಆಲೋಚನೆ ಅತ್ಯಂತ ಸ್ಪಷ್ಟವಾಗಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಈ ಇಬ್ಬರು ಆಟಗಾರರು ಕೂಡ ನನ್ನದೇ ತಂಡದ ಆಟಗಾರರಾಗಿದ್ದಾರೆ. ಅವರ ವಿರುದ್ಧ ನಾನು ಸ್ಪರ್ಧಿಸಿದರೆ ಅದು ತನ್ನ ದೇಶ ಹಾಗೂ ತಂಡವನ್ನು ಅಗೌರವಿಸಿದಂತೆ ಆಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ತಂಡಕ್ಕೆ ಮರಳಲು ಸಾಧ್ಯವಾಗಿದ್ದು ನನ್ನ ಅದೃಷ್ಟ

ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಐದು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ "ಐದು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ಐದು ವರ್ಷಗಳ ಹಿಂದೆ ಭಾರತ ತಂಡ ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡವಾಗಿತ್ತು. ಇಂದಿಗೂ ಭಾರತ ಅಗ್ರ ತಂಡವಾಗಿದೆ. ನಮ್ಮ ತಂಡದಲ್ಲಿ ಎಷ್ಟು ಗುಣಮಟ್ಟವಿದೆ ಎಂದರೆ ನಂಬರ್ ಒನ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ. ಆದರೆ ಇಂಥಾ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಯೋಚಿಸುತ್ತೀರಿ. ನಿಮಗೆ ಯಾವಾಗ ಅವಕಾಶ ಸಿಗುತ್ತದೆ ಅಥವಾ ಎಷ್ಟು ಅವಕಾಶ ಸಿಗುತ್ತದೆ ಎಂಬ ಬಗ್ಗೆ ಚಿಂತಿಸುತ್ತೀರಿ. ಆದರೆ ಇಂಥಾ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಮತ್ತು ಧನಾತ್ಮಕವಾಗಿ ಆಲೋಚನೆ ಮಾಡುವುದು ಬಹಳ ಮುಖ್ಯ" ಎಂದಿದ್ದಾರೆ ಸಂಜು ಸ್ಯಾಮ್ಸನ್.

ನನ್ನ ಆಲೋಚನೆ ಸ್ಪಷ್ಟವಾಗಿದೆ

ನನ್ನ ಆಲೋಚನೆ ಸ್ಪಷ್ಟವಾಗಿದೆ

ಇನ್ನು ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಬದಲಿಗೆ ಅವಕಾಶ ನೀಡಬೇಕು ಎಂಬ ವಿಚಾರವಾಗಿ ಮಾತನಾಡಿದ ಸಂಜು ಸ್ಯಾಮ್ಸನ್" ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಜು ಸ್ಯಾಮ್ಸನ್ ಬದಲಿ ಆಟಗಾರನಾಗಿ ಅವಕಾಶ ಪಡೆಯಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ಅಂದರೆ ನಾನು ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಬದಲಿಗೆ ಅವಕಶ ಪಡೆಯಬೇಕಾ. ಈ ವಿಉಚಾರವಾಗಿ ನನ್ನ ಆಲೋಚನೆ ಬಹಳ ಸ್ಪಷ್ಟವಾಗಿದೆ. ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಇಬ್ಬರೂ ನನ್ನ ತಂಡಕ್ಕೆ ಆಡುತ್ತಿದ್ದಾರೆ. ನಾನೇನಾದರೂ ನನ್ನ ತಂಡದ ಆಟಗಾರರ ಜೊತೆಗೇ ಸ್ಪರ್ಧಿಸಿದರೆ ನಾನು ನನ್ನ ದೇಶವನ್ನು, ನನ್ನ ತಂಡವನ್ನು ಅಗೌರವಿಸಿದಂತಾಗುತ್ತದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

ಟಿ20 ವಿಶ್ವಕಪ್: ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವನ್ನು ಬೊಟ್ಟು ಮಾಡಿದ ಆಸಿಸ್ ಸ್ಟಾರ್!

ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತದ ಸ್ಕ್ವಾಡ್ ಹೀಗಿದೆ

ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತದ ಸ್ಕ್ವಾಡ್ ಹೀಗಿದೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 17, 2022, 17:02 [IST]
Other articles published on Sep 17, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X