ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಜಲು ನಿಷೇಧಿಸಲಿ, ಆದರೆ ಬೌಲರ್‌ಗಳಿಗೆ ಸಹಕಾರಿಯಾಗುವ ಪಿಚ್ ನಿರ್ಮಾಣವಾಗಲಿ: ಪಠಾಣ್

Take Out Saliva But Ensure More Bowler-friendly Pitches Are Prepared: Irfan Pathan

ಕೊರೊನಾ ವೈರಸ್ ಕಾರಣದಿಂದಾಗಿ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಲು ಐಸಿಸಿಗೆ ಶಿಫಾರಸ್ಸನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಕ್ರಿಕೆಟಿಗರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇರ್ಫಾನ್ ಪಠಾಣ್ ಎಂಜಲು ನಿಷೇಧ ಮಾಡುವ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಆದರೆ ಬೌಲರ್‌ಗಳಿಗೆ ಸಹಕಾರಿಯಾಗುವ ಪಿಚ್ ನಿರ್ಮಾಣ ಮಾಡುವ ಕಡೆಗೆ ಗಮನ ನೀಡುವಂತೆ ಅವರು ಸಲಹೆಯನ್ನು ನೀಡಿದ್ದಾರೆ. ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಆಟವಾಗಿಯೇ ಉಳಿಯುವ ಬದಲು ಬೌಲರ್‌ಗಳಿಗೂ ಸಹಕಾರಿಯಾಗಲಿ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿ

ಚೆಂಡನ್ನು ಹೊಳಪು ಮಾಡದ ಹೊರತಾಗಿ ಚೆಂಡು ತಿರುವು ಪಡೆಯಲು ಸಾಧ್ಯವಿಲ್ಲ. ಚೆಂಡು ಸ್ವಿಂಗ್ ಆಗದಿದ್ದರೆ ವೇಗದ ಎಸೆತಕ್ಕೆ ಬ್ಯಾಟ್ಸ್‌ಮನ್‌ಗಳು ಬೆದರಲಾರರು. ಹೀಗಾಗಿ ಬೌಲರ್‌ಗಳಿಗೆ ಸಹಕಾರಿಯಾಗುವಂತೆ ಪಿಚ್ ನಿರ್ಮಾಣಮಾಡಬೇಕಾಗುತ್ತದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಈ ನಿಷೇಧ ಬೌಲರ್‌ಗಳಿಗೆ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಿನ ಸಮಸ್ಯೆಯನ್ನುಂಟು ಮಾಡುತ್ತದೆ ಎಂದಿದ್ದಾರೆ ಇರ್ಫಾನ್. ಸ್ವಿಂಗ್‌ ಮಾಡಲು ಎಂಜಲಿನ ಸಹಾಯದಿಂದ ಚೆಂಡನ್ನು ಬೌಲರ್‌ಗಳು ಹೊಳಪು ಮಾಡುತ್ತಾರೆ. ಆದರೆ ಅದು ನಿಷೇಧವಾದರೆ ಆಟ ಮತ್ತಷ್ಟು ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಪಿಚ್‌ಗಳನ್ನು ಬೌಲರ್‌ಗಳಿಗೆ ಸಹಕಾರಿಯಾಗುವಂತೆ ಮಾಡಬೇಕು ಎಂದಿದ್ದಾರೆ.

ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಹೆಚ್ಚಾಗಿ ಹುಲ್ಲು ಇಲ್ಲದಿದ್ದರೂ ಅಲ್ಲಿ ತೇವಾಂಶವಿರುತ್ತದೆ. ಇದು ಬೌಲರ್‌ಗಳಿಗೆ ಸಾಕಷ್ಟು ಸಹಕಾರಿಯಾಗುತ್ತದೆ. ಅದೇ ರಿತಿಯ ವಾತಾವರಣ ಸೃಷ್ಟಿಯಾದರೆ ಬೌಲರ್‌ಗಳಿಗೆ ನಿಜಕ್ಕೂ ಸಹಕಾರಿಯಾಗುತ್ತದೆ. ಅದನ್ನು ಬಳಸಿಕೊಂಡು ರಿವರ್ಸ್ ಸ್ವಿಂಗ್‌ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ ಮಾಜಿ ಕ್ರಿಕೆಟಿಗ ಇರ್ಪಾನ್ ಪಠಾಣ್.

Story first published: Monday, May 25, 2020, 12:02 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X