ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ಕದನಕ್ಕೂ ಮುನ್ನ ಬೀಚ್ ವಾಲಿಬಾಲ್ ಆಡಿ ರಿಲ್ಯಾಕ್ಸ್ ಆದ ಟೀಮ್ ಇಂಡಿಯಾ ಆಟಗಾರರು: ವಿಡಿಯೋ

Team India in fun beach volleyball session ahead of T20 Worldcup match against New Zealand

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಆಟಗಾರರು ಸಜ್ಜಾಗುತ್ತಿದ್ದಾರೆ. ಈ ಪಂದ್ಯಕ್ಕೆ ಎರಡು ದಿನಗಳ ಮುನ್ನ ಟೀಮ್ ಇಂಡಿಯಾದ ಆಟಗಾರರು ಬೀಚ್‌ನಲ್ಲಿ ವಾಲಿಬಾಲ್ ಆಡುತ್ತಾ ರಿಲ್ಯಾಕ್ಸ್ ಆಗಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಈ ನಿರ್ಣಾಯಕ ಪಂದ್ಯ ಭಾನುವಾರ ಸಂಜೆ ನಡೆಯಲಿದೆ.

ಭಾರತದ ಆಟಗಾರರು ಬೀಚ್ ವಾಲಿಬಾಲ್‌ನಲ್ಲಿ ಆಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ತಂಡದ ಆಟಗಾರರ ಜೊತೆಗೆ ಮೆಂಟರ್ ಎಂಎಸ್ ಧೋನಿ ಕೂಡ ಈ ವಾಲಿಬಾಲ್‌ನಲ್ಲಿ ಭಾಗವಹಿಸಿದ್ದರು. ವಿರಾಮದ ದಿನದಲ್ಲಿ ಟೀಮ್ ಇಂಡಿಯಾ ಆಟಗಾರರು ಈ ರೀತಿಯಾಗಿ ಉತ್ತಮ ಸಮಯ ಕಳೆದಿದ್ದಾರೆ.

ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!

ಟೀಮ್ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಆರಂಬಿಸಿತು. ಆದರೆ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಅಂತರದಿಂದ ಆಘಾತಕಾರಿಯಾಗಿ ಸೋಲು ಕಂಡಿದೆ. ಹೀಗಾಗಿ ಭಾರತ ಈಗ ಗೆಲುವಿನ ಹಾದಿಗೆ ಮರಳಲು ಹವಣಿಸುತ್ತಿದ್ದು ಭಾನುವಾರ ನಡೆಯುವ ಪಂದ್ಯ ಭಾರತದ ಪಾಲಿಗೆ ಬಹಳ ನಿರ್ಣಾಯಕವಾಗಿದೆ. ಅತ್ತ ನ್ಯೂಜಿಲೆಂಡ್ ಕೂಡ ತನ್ನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣದಿಂದಾಗಿ ಕೇನ್ ವಿಲಿಯಮ್ಸನ್ ಪಡೆ ಕೂಡ ಭಾರತ ಅನುಭವಿಸುತ್ತಿರುವ ಸ್ಥಿತಿಯನ್ನೇ ಎದುರಿಸುತ್ತಿದೆ. ಎರಡು ತಂಡಗಳಿಗೂ ಭಾನುವಾರದ ಪಂದ್ಯ ಬಹಳ ನಿರ್ಣಾಯಕವಾಗಿದೆ.

ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನದ ವಿರುದ್ಧವೇ ಸೋಲು ಕಂಡಿದೆ. ಕಳೆದ ಮಂಗಳವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಅಂತರದಿಮದ ಮಣಿದಿತ್ತು. ಈಗ ಈ ಎರಡು ತಂಡಗಳು ಕೂಡ ಟೂರ್ನಿಯಲ್ಲಿ ಮೊದಲ ಗೆಲುವು ಕಾಣಲು ಜಿದ್ದಾಜಿದ್ದಿನ ಹೋರಾಟವನ್ನು ನಡೆಸಲಿದೆ.

ಇನ್ನು ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿಗಳ ದಾಳಿಯನ್ನು ಎದುರಿವಸುವಲ್ಲಿ ವಿಫಲವಾಗಿತ್ತು. ನ್ಯೂಜಿಲೆಂಡ್ ತಂಡದಲ್ಲಿಯೂ ಅಪಾಯಕಾರಿ ವೇಗಿಗಳು ಇರುವ ಕಾರಣದಿಂದಾಗಿ ಭಾರತ ಈ ವಿಚಾರವಾಗಿ ಬಹಳಷ್ಟು ಎಚ್ಚರಿಕೆ ವಹಿಸುವ ಅನಿವಾರ್ಯತೆಯಿದೆ. ಇನ್ನು ಬೌಲಿಂಗ್‌ ಪಡೆ ಪಾಕಿಸ್ತಾನದ ವಿರುದ್ಧ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಭಾರತದ ವೇಗಿಗಳು ಹಾಘೂ ಸ್ಪಿನ್ನರ್‌ಗಳು ಕಿವೀಸ್ ಪಡೆಯ ವಿರುದ್ಧ ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ, ಹಾಗಿದ್ದರೆ ಮಾತ್ರವೇ ಭಾರತ ಕಿವೀಸ್ ಪಡೆಯ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲ್ಲಲು ಸಾಧ್ಯವಿದೆ.

ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ: ಕಂಬನಿ ಮಿಡಿದ ಕ್ರೀಡಾ ಜಗತ್ತುನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ: ಕಂಬನಿ ಮಿಡಿದ ಕ್ರೀಡಾ ಜಗತ್ತು

ಭಾರತದ ಸಂಪೂರ್ಣ ಸ್ಕ್ವಾಡ್ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್,

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಆ್ಯಡಮ್ ಮಿಲ್ನೆ., ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್)

Story first published: Friday, October 29, 2021, 21:22 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X