ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!

Test Rankings: Ashes hero Ben Stokes moves to career-best batting ranking

ಲಂಡನ್, ಆಗಸ್ಟ್ 27: ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 3ನೇ ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಪವಾಡ ರೀತಿಯಲ್ಲಿ ಗೆಲ್ಲಿಸಿದ್ದ ಆಲ್ ರೌಂಡರ್ ಬೆನ್ ಸ್ಟೋಕ್ಸ್, ಮಂಗಳವಾರ (ಆಗಸ್ಟ್ 27) ಪ್ರಕಟಿತ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ ತೋರಿದ್ದಾರೆ.

ಮತ್ತೊಮ್ಮೆ ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾಮತ್ತೊಮ್ಮೆ ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾ

3ನೇ ಆ್ಯಷಸ್ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ 1 ವಿಕೆಟ್ ರೋಚಕ ಗೆಲುವನ್ನಾಚರಿಸಿತ್ತು. ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ಟೋಕ್ಸ್‌ ಬಾರಿಸಿದ ಅಜೇಯ 135 ರನ್, ಸೋಲಿನಂಚಿನಲ್ಲಿದ್ದ ಇಂಗ್ಲೆಂಡ್‌ ತಂಡವನ್ನು ಗೆಲ್ಲಿಸಿತ್ತು. ಈ ವೇಳೆ ಸ್ಟೋಕ್ಸ್ ಆಟ ವಿಶ್ವದ ಗಮನ ಸೆಳೆದಿತ್ತು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಆವತ್ತು ಮೈಮೇಲೆ ಬಂದವರಂತೆ ಆಟವಾಡಿದ್ದ ಸ್ಟೋಕ್ಸ್, ಈಗ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಬರೋಬ್ಬರಿ 13 ಸ್ಥಾನಗಳನ್ನು ಜಿಗಿದಿದ್ದಾರೆ.

ಜೀವನ ಶ್ರೇಷ್ಠ ಸಾಧನೆ

ಜೀವನ ಶ್ರೇಷ್ಠ ಸಾಧನೆ

ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಬೆನ್ ಸ್ಟೋಕ್ಸ್ 693 ಪಾಯಿಂಟ್ಸ್‌ಗಳೊಂದಿಗೆ ಸದ್ಯ 13ನೇ ಸ್ಥಾನದಲ್ಲಿದ್ದಾರೆ. ಅಂದರೆ ಆ್ಯಷಸ್ 3ನೇ ಟೆಸ್ಟ್ ಬಳಿಕ ಸ್ಟೋಕ್ಸ್ 13 ಸ್ಥಾನ ಜಿಗಿತ ಕಾಣುವ ಮೂಲಕ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ ತೋರಿದ್ದಾರೆ.

ಇಂಗ್ಲೆಂಡ್‌ಗೆ ಅಚ್ಚರಿಯ ಗೆಲುವು!

ಇಂಗ್ಲೆಂಡ್‌ಗೆ ಅಚ್ಚರಿಯ ಗೆಲುವು!

ಡೆಡ್ಡಿಂಗ್ಲಿಯಲ್ಲಿ ಆಗಸ್ಟ್ 26ರಂದು ಮುಕ್ತಾಯಗೊಂಡ 3ನೇ ಆ್ಯಷಸ್ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೆಲಿಯಾ 179 ರನ್ ಗಳಿಸಿತ್ತು. ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ನಲ್ಲಿ 67 ರನ್ನಿಗೆ ಆಲ್ ಔಟ್ ಆಗಿ ಹಿನ್ನಡೆಯೊಂದಿಗೆ ಮುಖಭಂಗ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ 246 ರನ್ ಮಾಡಿದ್ದರಿಂದ ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 358 ರನ್‌ಗಳ ಬೃಹತ್ ಗುರಿಯಿತ್ತು. ಸ್ಟೋಕ್ಸ್‌ ಸ್ಫೋಟಕ ಬ್ಯಾಟಿಂಗ್‌ಗನಿಂದ ಇಂಗ್ಲೆಂಡ್, 9 ವಿಕೆಟ್ ಕಳೆದು 362 ರನ್‌ ಪೇರಿಸಿ ರೋಚಕ ಗೆಲುವನ್ನಾಚರಿಸಿತ್ತು.

ಕೊಹ್ಲಿಗೆ ಮೊದಲ ಸ್ಥಾನ

ಕೊಹ್ಲಿಗೆ ಮೊದಲ ಸ್ಥಾನ

ಸದ್ಯದ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ 910 ರೇಟಿಂಗ್ ಪಾಯಿಂಟ್‌ನೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಆ್ಯಷಸ್ ಟೆಸ್ಟ್‌ನಲ್ಲಿ ಎರಡು ಶತಕಗಳನ್ನು ದಾಖಲಿಸಿದ್ದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ 2ನೇ (904 ಪಾಯಿಂಟ್ಸ್), ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 3ನೇ (878), ಭಾರತದ ಚೇತೇಶ್ವರ್ ಪೂಜಾರ 4ನೇ (856), ಕಿವೀಸ್‌ನ ಹೆನ್ರಿ ನಿಕೋಲ್ಸ್ 5ನೇ (749) ಸ್ಥಾನ ಪಡೆದುಕೊಂಡಿದ್ದಾರೆ.

ಟೆಸ್ಟ್‌ ಬೌಲಿಂಗ್ ರ್ಯಾಂಕ್

ಟೆಸ್ಟ್‌ ಬೌಲಿಂಗ್ ರ್ಯಾಂಕ್

ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 1, ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡ 2, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 3ನೇ ಸ್ಥಾನದಲ್ಲಿದ್ದರೆ, ಆಲ್ ರೌಂಡರ್‌ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ 1, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ 2, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 3ನೇ ಸ್ಥಾನದಲ್ಲಿದ್ದಾರೆ.

Story first published: Tuesday, August 27, 2019, 17:04 [IST]
Other articles published on Aug 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X