ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗುವ ರೇಸ್‌ನಲ್ಲಿರುವ ಮೂವರ ಪಟ್ಟಿ

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯತ್ತ ನೆಟ್ಟಿದೆ. ಈ ಬಾರಿಯ ಐಪಿಎಲ್ ಟೂರ್ನಿ ಅಕ್ಟೋಬರ್ 15ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯವಾಗಲಿದ್ದು, ಇದೇ ಯುಎಇ ಮತ್ತು ಒಮನ್ ನೆಲದಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ.

ಸುಮಾರು 5 ವರ್ಷಗಳ ಬಳಿಕ ಮರಳಿರುವ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳನ್ನು ಹುಟ್ಟುಹಾಕಿದೆ. ಅದರಲ್ಲಿಯೂ ಈ ಟಿ ಟ್ವೆಂಟಿ ವಿಶ್ವಕಪ್ ಕುರಿತಾಗಿ ಟೀಮ್ ಇಂಡಿಯಾ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಸುದ್ದಿಗೀಡಾಗಿದೆ. ಟೂರ್ನಿ ಆರಂಭವಾಗಲು ಇನ್ನೂ ತಿಂಗಳು ಬಾಕಿ ಇರುವಾಗಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು.

ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!

ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದು, ಇದರ ಜತೆಗೆ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿರುವ ರವಿ ಶಾಸ್ತ್ರಿ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿಗಳು ಸಹ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ರವಿಶಾಸ್ತ್ರಿ ಕೆಳಗಿಳಿದ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಬಿಸಿಸಿಐ ಅರ್ಜಿಗಳನ್ನು ಕರೆಯಲಿದ್ದು ಸಂದರ್ಶನ ನಡೆಸುವ ಮೂಲಕ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ.

ಇನ್ನು ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ನಂತರ ಆ ಸ್ಥಾನ ಪಡೆಯಲು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ತರಬೇತುದಾರರು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ತರಬೇತುದಾರರು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವುದು ಹೆಮ್ಮೆಯ ವಿಷಯ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಹೀಗೆ ದೊಡ್ಡ ಮಟ್ಟದ ಗೌರವ ಮತ್ತು ಹೆಸರಿರುವಂತಹ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ನಂತರ ಆಯ್ಕೆಯಾಗಲು ರೇಸ್‌ನಲ್ಲಿರುವ 3 ವಿದೇಶಿ ತರಬೇತುದಾರರ ಪಟ್ಟಿ ಈ ಕೆಳಕಂಡಂತಿದೆ..

1. ಲ್ಯಾನ್ಸ್ ಕ್ಲೂಸ್ನರ್

ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮಾಜಿ ಸೌತ್ ಆಫ್ರಿಕಾ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ರವಿಶಾಸ್ತ್ರಿ ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನದಲ್ಲಿ ಭಾರತ ತಂಡದ ಕೋಚ್ ಆಗುವ ಅವಕಾಶ ಬಂದಾಗ ನೀವು ಸ್ವೀಕರಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗ 'ಅಂತಹ ಅವಕಾಶ ಬಂದರೆ ಯಾವುದೇ ಕಾರಣಕ್ಕೂ ಒಲ್ಲೆ ಎನ್ನಲಾರೆ. ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ನನ್ನ ಸೌಭಾಗ್ಯ' ಎಂದು ಲ್ಯಾನ್ಸ್ ಕ್ಲೂಸ್ನರ್ ಉತ್ತರಿಸಿದರು.

'ಈತ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ'; ಐಪಿಎಲ್ ಕಳಪೆ ನಾಯಕನ ವಿರುದ್ಧ ವ್ಯಂಗ್ಯವಾಡಿದ ಸೆಹ್ವಾಗ್'ಈತ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ'; ಐಪಿಎಲ್ ಕಳಪೆ ನಾಯಕನ ವಿರುದ್ಧ ವ್ಯಂಗ್ಯವಾಡಿದ ಸೆಹ್ವಾಗ್

2. ಟಾಮ್ ಮೂಡಿ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಕೂಡ ರವಿಶಾಸ್ತ್ರೀ ನಂತರ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಾರೆ. ಈಗಾಗಲೇ ಸಾಕಷ್ಟು ಫ್ರಾಂಚೈಸಿ ಕ್ರಿಕೆಟ್ ಲೀಗ್‌ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿರುವ ಟಾಮ್ ಮೂಡಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.

3. ಮೈಕ್ ಹೆಸನ್

ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ತರಬೇತುದಾರನಾಗಿ ನ್ಯೂಜಿಲೆಂಡ್ ತಂಡವನ್ನು ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ತಂಡಗಳಲ್ಲೊಂದಾಗಿ ತಯಾರು ಮಾಡಿದ ಕೀರ್ತಿಯಲ್ಲಿ ಪಾಲನ್ನು ಹೊಂದಿರುವ ಮೈಕ್ ಹೆಸನ್ ಕೂಡ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುವ ಆಶಯವನ್ನು ಹೊಂದಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಆಗಿ ಕೂಡ ಮೈಕ್ ಹೆಸನ್ ಕಾರ್ಯನಿರ್ವಹಿಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 17:35 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X