ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನ ಈ 3 ವಿಶ್ವದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ ರಿಷಭ್ ಪಂತ್

These 3 test cricket records can break by Indian Wicket keeper Rishabh Pant

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅನೇಕ ಅದ್ಭುತ ಪ್ರದರ್ಶನಗಳು ಪಂತ್ ಬ್ಯಾಟ್‌ನಿಂದ ಬರುತ್ತಿದೆ. ಹೀಗಾಗಿ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ ರಿಷಭ್ ಪಂತ್.

ದೆಹಲಿ ಮೂಲದ ಈ ಕ್ರಿಕೆಟಿಗ ಭಾರತದ ಪರವಾಗಿ ಉತ್ತಮವಾಗಿ ರನ್ ಗಳಿಸುತ್ತಿದ್ದು ಅನೇಕ ದಾಖಲೆಗಳನ್ನು ಕೂಡ ತಮ್ಮ ಹೆಸರಿಗೆ ಬರೆಯುತ್ತಾ ಮುನ್ನುಗ್ಗುತ್ತಿದ್ದಾರೆ. ರಿಷಬ್ ಪಂತ್ ಸದ್ಯ ಆಡುತ್ತಿರುವ ರೀತಿ ನೋಡಿದರೆ ಮುಂದೆಯೂ ಸಾಕಷ್ಟು ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಯಾವೆಲ್ಲಾ ದಾಖಲೆಗಳು ರಿಷಭ್ ಪಂತ್ ಪಾಲಾಗಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲವಾಗಿದೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಭಾರತದ ಪರವಾಗಿ ಉತ್ತಮ ಪ್ರದರ್ಶನ ನಿಡುತ್ತಿರುವ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಪ್ರಮುಖ ದಾಖಲೆಗಳನ್ನು ಮುರಿಯುವ ಉತ್ತಮ ಅವಕಾಶ ಹೊಂದಿದ್ದಾರೆ. ಯಾವುದು ಆ ಮೂರು ವಿಶ್ವದಾಖಲೆಗಳು? ಮುಂದೆ ಓದಿ..

ವೇಗವಾಗಿ 100 ಸಿಕ್ಸರ್

ವೇಗವಾಗಿ 100 ಸಿಕ್ಸರ್

ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಸ್ಪೋಟಕವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಮ್ಮದೇ ಶಯಲಿಯಲ್ಲಿ ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸಿ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 100 ಸಿಕ್ಸರ್ ಸಿಡಿಸುವ ಅವಕಾಶ ಪಂತ್ ಮುಂದಿದೆ. ಈವರೆಗೆ 31 ಟೆಸ್ಟ್ ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ 48 ಸಿಕ್ಸರ್ ಬಾರಿಸಿದ್ದಾರೆ. ಇದೇ ರೀತಿಯಲ್ಲಿ ಆಡುತ್ತಾ ಸಾಗಿದರೆ ಬೆನ್ ಸ್ಟೋಕ್ಸ್ ಹೆಸರಿನಲ್ಲಿರುವ ಈ ದಾಖಲೆಯನ್ನು ಪಂತ್ ಖಂಡಿತಾ ತಮ್ಮ ಹೆಸರಿನಲ್ಲಿ ಬರೆಯಲಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 100 ಸಿಕ್ಸರ್‌ಗಳನ್ನು 82 ಪಂದ್ಯಗಳನ್ನು ಬಾರಿಸುವ ಮೂಲಕ ತಮ್ಮ ಹೆಸರಿನಲ್ಲಿ ದಾಖಲೆ ಹೊಂದಿದ್ದಾರೆ.

ವೇಗವಾಗಿ ದ್ವಿಶತಕದ ಸಾಧನೆ

ವೇಗವಾಗಿ ದ್ವಿಶತಕದ ಸಾಧನೆ

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಲ್ಲಿದ್ದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನಿಡುತ್ತಾ ಸಾಗಿತ ಪಂತ್ ಭಾರತ ಬೃಜತ್ ಮೊತ್ತ ಗಳಿಸಲು ಕಾರಣವಾದರು. ಈ ಪಂದ್ಯದಲ್ಲಿ 111 ಎಸೆತಗಳಲ್ಲಿ 146 ರನ್‌ ಸಿಡಿಸಿ ಮಿಂಚಿದ್ದಾರೆ ಪಂತ್. ಮೈದಾನದ ಸುತ್ತಲೂ ರನ್ ಬಾರಿಸುವ ಸಾಮರ್ಥ್ಯ ಹೊಂದಿರುವ ಪಂತ್ ವೇಗವಾಗಿ ದ್ವಿಶತಕ ಸಿಡಿಸುವ ದಾಖಲೆ ಹೊಂದುವ ಅವಕಾಶವಿದೆ. ಪ್ರಸ್ತುತ ನ್ಯೂಜಿಲೆಂಡ್‌ನ ನಥನ್ ಆಸ್ಟ್ಲೆ ಹೆಸರಿನಲ್ಲಿ ಈ ದಾಖಲೆಯಿದ್ದು 153 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಪಂತ್ ಈ ದಾಖಲೆಯ ಮೇಲೆಯೂ ಕಣ್ಣಿಡಬಹುದು.

ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್

ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್

ಪಂತ್ ವಿಕೆಟ್ ಕೀಪರ್ ಆಗಿ ಬೆಳವಣಿಗೆ ಸಾಧಿಸುವುದರ ಜೊತೆಗೆ ಬ್ಯಾಟರ್ ಆಗಿಯೂ ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗುತ್ತಿದ್ದಾರೆ. ಈಗಾಗಲೇ ಪಂತ್ ಹೆಸರಿನಲ್ಲಿ ಐದು ಶತಕಗಳಿವೆ ಎಂಬುದು ಗಮನಾರ್ಹ ಅಂಶ. ಇದರಲ್ಲಿ ನಾಲ್ಕು ಶತಕಗಳು ವಿದೇಶದಲ್ಲಿಯೇ ಬಂದಿದೆ ಎಂಬುದು ಗಮನಾರ್ಹ. ಈವರೆಗೆ ರಿಷಬ್ ಪಂತ್ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 2123 ರನ್‌ಗಳಿಸಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್‌ಗಳಿಸುವ ಅವಕಾಶವನ್ನು ಹೊಂದಿದ್ದಾರೆ ಪಂತ್. ಸದ್ಯ ಈ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್ ಆಡಂ ಗಿಲ್‌ಕ್ರಿಸ್ಟ್ ಹೆಸರಿನಲ್ಲಿದೆ. ಆಸಿಸ್ ದಿಗ್ಗಜ 96 ಟೆಸ್ಟ್ ಪಂದ್ಯಗಳನ್ನು ಆಡಿದ್ದು 17 ಶತಕಗಳೊಂದಿಗೆ 5570 ರನ್‌ಗಳನ್ನು ಗಳಿಸಿ ಈ ದಾಖಲೆಯನ್ನು ಹೊಂದಿದ್ದಾರೆ.

Story first published: Wednesday, July 6, 2022, 10:20 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X