
ಟಾಮ್‌ಮೂಡಿಗೆ ಪಾಕ್ ಪತ್ರಕರ್ತನಿಂದ ಪ್ರಶ್ನೆ
ಐಪಿಎಲ್‌ನಲ್ಲಿ ಹೈದರಾಬಾದ್‌ನ ಮಾಜಿ ಕೋಚ್ ಆಗಿದ್ದ ಟಾಮ್ ಮೂಡಿಗೆ ಸಂವಾದದ ಸದರ್ಭದಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದರು. ಟಿ20 ಕ್ರಿಕೆಟ್‌ನ ಆರಂಭಿಕರ ಕುರಿತಾಗಿ ಕೇಳಿದ ಪ್ರಶ್ನೆಗೆ ಟಾಮ್ ಮೂಡಿ ತಕ್ಷಣವೇ ತಮ್ಮ ಉತ್ತರವನ್ನು ಮತ್ತು ಅದರ ಕಾರಣವನ್ನು ಹೇಳಿದ್ದಾರೆ.

ಯಾರು ಅತ್ಯುತ್ತಮ ಆರಂಭಿಕ ಆಟಗಾರರು?
ಟಾಮ್ ಮೂಡಿಗೆ ಕೇಳಲಾದ ಪ್ರಶ್ನೆಯೆಂದರೆ ನಿಮ್ಮ ಪ್ರಕಾರ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭಿಕ ಆಟಗಾರರು ಯಾರು ಎಂಬುದಾಗಿತ್ತು. ಇದಕ್ಕೆ ಟಾಮ್ ಮೂಡಿ ಓರ್ವ ಟೀಮ್ ಇಂಡಿಯಾ ಆಟಗಾರ ಮತ್ತು ಓರ್ವ ಆಸ್ಟ್ರೇಲಿಯಾದ ಆಟಗಾರನನ್ನು ಹೆಸರಿಸಿ ಇವರು ಅತ್ಯಂತ ವಿಧ್ವಂಸಕ ಆರಂಭಿಕ ಆಟಗಾರರು ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದಿಂದ ರೋಹಿತ್ ಶರ್ಮಾ
ಟಾಮ್ ಮೂಡಿ ಆಯ್ದುಕೊಂಡ ಒಂದು ಹೆಸರು ಬೇರೆ ಯಾರೂ ಅಲ್ಲ. ಅದು ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ. ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನ ವಿಧ್ವಂಸಕ ಕ್ರಿಕೆಟಿಗ ಎಂದು ಟಾಮ್ ಮೂಡಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಈ ಮೂಲಕ ಮೂಡಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಆಸಿಸ್ ಆಟಗಾರ ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್ ಆಟಗಾರ ಟಾಮ್ ಮೂಡಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮತ್ತೋರ್ವ ಟಿ20 ಕ್ರಿಕೆಟ್‌ನ ಅದ್ಭುತ ಬ್ಯಾಟ್ಸ್‌ಮನ್ ಎಂದು ತಮ್ಮ ಉತ್ತರವನ್ನು ನೀಡಿದ್ದಾರೆ. ಸನ್ ರೈಸರ್ಸ್ ತಂಡದಲ್ಲಿ ಮೂಡಿ ಕೋಚ್ ಆಗಿ ಮತ್ತು ಆಟಗಾರನಾಗಿ ವಾರ್ನರ್ ಒಂದೇ ತಂಡದದ್ದರು.

ಇಬ್ಬರೂ ಆಕ್ರಮಣಕಾರಿ ಆಟಗಾರರು
ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಇಬ್ಬರೂ ಸ್ಪೋಟಕ ಆಟಗಾರರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ಕಲೆಹೊಂದಿದ್ದಾರೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿದ್ದಾರೆ.

ರೋಹಿತ್ ಸ್ಟ್ರೈಕ್‌ರೇಟ್
ಇಬ್ಬರೂ ಆಟಗಾರರ ಸ್ಟ್ರೈಕ್‌ರೇಟ್ ವಿಚಾರಕ್ಕೆ ಬಂದರೆ ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾಗಿಂತ ಡೇವಿಡ್ ವಾರ್ನರ್ ಮೇಲುಗೈ ಸಾಧಿಸುತ್ತಾರೆ. 188 ಐಪಿಎಲ್ ಪಂದ್ಯಗಳನ್ನು ಪ್ರತಿನಿಧಿಸಿರುವ ಶರ್ಮಾ 31.6 ಸರಾಸರಿಯನ್ನು ಹೊಂದಿದ್ದಾರೆ. 130 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 108 ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ 32.24 ಸರಾಸರಿಯೊಂದಿಗೆ 139 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 224 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಡೇವಿಡ್ ವಾರ್ನರ್ ಸ್ಟ್ರೈಕ್ ರೇಟ್
ಡೇವಿಡ್ ವಾರ್ನರ್ ಸ್ಟ್ರೈಕ್ ರೇಟ್ ವಿಚಾರದಲ್ಲಿ ರೋಹಿತ್ ಶರ್ಮಾಗಿಂತ ಮುಂದಿದ್ದಾರೆ. 126 ಐಪಿಎಲ್ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ 142 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಜೊತೆಗೆ 43.17 ಸರಾಸರಿ ಕಾಪಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ವಾರ್ನರ್ 31.53 ಸರಾಸರಿಯಲ್ಲಿ 140 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 123 ಅಂತಾರಾಷ್ಟ್ರೀಯ ಏಕದಿನದಲ್ಲಿ 123 ಏಕದಿನ ಪಂದ್ಯಗಳಿಂದ ವಾರ್ನರ್ 96ರಷ್ಟು ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿದ್ದಾರೆ.


Click it and Unblock the Notifications
