ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

Top 3 Batsmen With Individual Maximum Runs For India in T20 Cricket

ಭಾನುವಾರ, ಫೆಬ್ರವರಿ 1ರಂದು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಗೆಲ್ಲುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿದೆ.

ಮೊದಲ ಪಂದ್ಯವನ್ನು 21 ರನ್‌ಗಳಿಂದ ಗೆದ್ದಿದ್ದ ಕಿವೀಸ್ ತಂಡ, ಎರಡನೇ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ 6 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿತು. ಹೀಗಾಗಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಭಾರತ ತಂಡ 168 ರನ್‌ಗಳ ದಾಖಲೆಯ ಗೆಲುವು ಪಡೆದರು.

ICC Women's T20 World Cup: ಭಾರತ vs ಪಾಕಿಸ್ತಾನ ಪಂದ್ಯ, ಪೂರ್ಣ ತಂಡಗಳು, ಲೈವ್ ಸ್ಟ್ರೀಮಿಂಗ್ICC Women's T20 World Cup: ಭಾರತ vs ಪಾಕಿಸ್ತಾನ ಪಂದ್ಯ, ಪೂರ್ಣ ತಂಡಗಳು, ಲೈವ್ ಸ್ಟ್ರೀಮಿಂಗ್

ಇದೇ ವೇಳೆ ಸುರೇಶ್ ರೈನಾ, ಕೆಎಲ್ ರಾಹುಲ್, ರೋಹಿತ್ ಶರ್ಮಾ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ನಂತರ ಶುಭ್ಮನ್ ಗಿಲ್ ಟಿ20 ಶತಕ ಗಳಿಸಿದ 7ನೇ ಭಾರತೀಯ ಬ್ಯಾಟರ್ ಎನಿಸಿದರು.

ಟಿ20 ಕ್ರಿಕೆಟ್‌ನಲ್ಲಿ ಅಗ್ರ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ವಿಶ್ವದ ನಂ.1 ಟಿ20 ತಂಡವಗಿದೆ. ಇದೀಗ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್‌ಗಳ ಟಾಪ್ 3 ವೈಯಕ್ತಿಕ ಸ್ಕೋರ್‌ಗಳನ್ನು ನೋಡಬಹುದು.

ಶುಭಮನ್ ಗಿಲ್ - ಅಜೇಯ 126 ರನ್ vs ನ್ಯೂಜಿಲೆಂಡ್ (2023)

ಶುಭಮನ್ ಗಿಲ್ - ಅಜೇಯ 126 ರನ್ vs ನ್ಯೂಜಿಲೆಂಡ್ (2023)

ಈ ವರ್ಷದ ಮೊದಲ 6 ಏಕದಿನ ಪಂದ್ಯಗಳಲ್ಲಿ ಒಂದು ದ್ವಿಶತಕ ಸೇರಿದಂತೆ 3 ಶತಕಗಳನ್ನು ಬಾರಿಸಿದ ನಂತರ ಶುಭ್ಮನ್ ಗಿಲ್ ಬೆಳಕಿಗೆ ಬಂದರು. ಆದಾರೆ, ಗಿಲ್ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಆರಂಭಿಕ ಸ್ಥಾನಕ್ಕಾಗಿ ಕಠಿಣ ಪೈಪೋಟಿಯ ಸ್ಥಿರ ದರ್ಶನ ನೀಡುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್, ನಿಧಾನವಾಗಿ ರನ್ ಗಳಿಸಿದರು. ಕಿಶನ್ ಔಟಾದ ನಂತರ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಶುಭ್ಮನ್ ಗಿಲ್ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಮುಂದಿನ 50 ರನ್‌ಗಳು 18 ಎಸೆತಗಳಲ್ಲಿ ಬಂದವು.

ಅಂತಿಮವಾಗಿ ಶುಭ್ಮನ್ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು.

ವಿರಾಟ್ ಕೊಹ್ಲಿ - ಅಪ್ಘಾನಿಸ್ತಾನ ವಿರುದ್ಧ ಅಜೇಯ 122 ರನ್(2022)

ವಿರಾಟ್ ಕೊಹ್ಲಿ - ಅಪ್ಘಾನಿಸ್ತಾನ ವಿರುದ್ಧ ಅಜೇಯ 122 ರನ್(2022)

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಈ ಶತಕವು ಅವರ 1021 ದಿನಗಳ ಶತಕದ ಬರವನ್ನು ಕೊನೆಗೊಳಿಸಿತು ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯ ಒಟ್ಟಾರೆ 71ನೇ ಹಾಗೂ ಟಿ20 ಸ್ವರೂಪದ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ ಸಂತೋಷಪಟ್ಟರು.

ಏಷ್ಯಾಕಪ್‌ನಿಂದ ಭಾರತ ಹೊರ ಬಿದ್ದಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯವೂ ಪ್ರಮುಖವಾಗಿದ್ದರಿಂದ ಈ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದರು.

ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಅಂತಿಮವಾಗಿ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿ ಭಾರತದ ಪರ ಇದೀಗ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ - ಶ್ರೀಲಂಕಾ ವಿರುದ್ಧ 118 ರನ್ (2017)

ರೋಹಿತ್ ಶರ್ಮಾ - ಶ್ರೀಲಂಕಾ ವಿರುದ್ಧ 118 ರನ್ (2017)

ಕ್ರಿಕೆಟ್‌ನ ಚುಟುಕು ಸ್ವರೂಪದಲ್ಲಿ ಶತಕ ಬಾರಿಸುವುದು ಒಂದು ದೊಡ್ಡ ಸಾಧನೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸಿರುವ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿಯೂ ಶತಕ ಬಾರಿಸಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 118 ರನ್ ಬಾರಿಸಿದರು.

ತಮ್ಮ ಎರಡನೇ ಅಂತಾರಾಷ್ಟ್ರೀಯ ಟಿ20 ಶತಕ ಗಳಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, 43 ಎಸೆತಗಳಲ್ಲಿ 118 ರನ್ ಬಾರಿಸಿ ಭಾರತದ ಪರ ಇದೀಗ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Story first published: Friday, February 3, 2023, 15:38 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X