ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್: ಒಂದೇ ದಿನದಲ್ಲಿ ಎರಡೆರಡು ದಾಖಲೆ

two world records in women cricket t20

ಟಾಂಟನ್, ಜೂನ್ 21: ನ್ಯೂಜಿಲೆಂಡ್‌ನ ವನಿತೆಯರು ನಿರ್ಮಿಸಿದ್ದ ವಿಶ್ವದಾಖಲೆಯನ್ನು ಕೆಲವೇ ಗಂಟೆಗಳಲ್ಲಿ ಮುರಿಯುವ ಮೂಲಕ ಇಂಗ್ಲೆಂಡ್ ವನಿತೆಯರು ಹೊಸ ದಾಖಲೆ ಬರೆದಿದ್ದಾರೆ.

ಮಹಿಳಾ ಟಿ 20 ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ಓವರ್‌ಗಳಲ್ಲಿ 250 ರನ್‌ ಬೃಹತ್ ಮೊತ್ತ ಪೇರಿಸುವ ಮೂಲಕ ಇಂಗ್ಲೆಂಡ್ ವನಿತೆಯರು ಗಮನ ಸೆಳೆದಿದ್ದಾರೆ.

ಇದಕ್ಕೂ ಕೆಲವು ಗಂಟೆಗಳ ಮುಂಚೆಯಷ್ಟೇ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 20 ಓವರ್‌ಗಳಲ್ಲಿ 216 ರನ್ ಚಚ್ಚಿ ದಾಖಲೆ ನಿರ್ಮಿಸಿತ್ತು.

ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪಾರಮ್ಯ ಅಧ್ಯಾಯ ಮುಗಿಯಿತೇ?ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪಾರಮ್ಯ ಅಧ್ಯಾಯ ಮುಗಿಯಿತೇ?

ಆದರೆ, ಅದೇ ದಕ್ಷಿಣ ಆಫ್ರಿಕಾದ ವನಿತೆಯರು ಒಂದೇ ದಿನದಲ್ಲಿ (ಎರಡು ಪಂದ್ಯಗಳಲ್ಲಿ) 40 ಓವರ್‌ಗಳಲ್ಲಿ 466 ರನ್ ನೀಡುವ ಮೂಲಕ ದಾಖಲೆಯ ರನ್ ನೀಡಿದ ಕುಖ್ಯಾತಿ ಗಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 50 ಓವರ್‌ಗಳಲ್ಲಿ 481 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಪುರುಷರ ತಂಡ ವಿಶ್ವದಾಖಲೆ ನಿರ್ಮಿಸಿದ ಬೆನ್ನಲ್ಲೇ ಇಂಗ್ಲೆಂಡ್ ವನಿತೆಯರು ಕೂಡ ಪುರುಷರ ತಂಡಕ್ಕೆ ತಾವೇನೂ ಕಮ್ಮಿ ಇಲ್ಲ ಎಂಬಂತೆ ಭರ್ಜರಿ ಆಟವಾಡಿದ್ದಾರೆ.

ಮಂಗಳವಾರ (ಜೂನ್ 20) ಆರಂಭವಾದ ಮೂರು ದೇಶಗಳ ಮಹಿಳಾ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು 20 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 216 ರನ್ ಗಳಿಸುವ ಮೂಲಕ ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಕೀರ್ತಿಗೆ ಪಾತ್ರರಾದರು.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಭಾರತಕ್ಕೆ ವಿಂಡೀಸ್ ಮೊದಲ ಎದುರಾಳಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಭಾರತಕ್ಕೆ ವಿಂಡೀಸ್ ಮೊದಲ ಎದುರಾಳಿ

ಇದೇ ವರ್ಷ ಆಸ್ಟ್ರೇಲಿಯಾದ ವನಿತೆಯರು ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ 209/4 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಜೊತೆಯಾಟದ ಹೊಸ ದಾಖಲೆ

ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡರಲ್ಲಿಯೂ ಟಿ 20 ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಜೊತೆಯಾಟ ನೀಡಿದ ವಿಶ್ವದಾಖಲೆಯೂ ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ನಿರ್ಮಾಣವಾಯಿತು.

ಸುಜೀ ಬೇಟ್ಸ್ ಮತ್ತು ಸೋಫಿ ಡಿವೈನ್ ಮೊದಲ ವಿಕೆಟ್‌ಗೆ 182 ರನ್ ಕಲೆ ಹಾಕಿದರು. ತಮ್ಮದೇ ದೇಶದ ಪುರುಷರ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು.

ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ಪಾಕಿಸ್ತಾನದ ವಿರುದ್ಧ 2016ರಲ್ಲಿ ಅಜೇಯ 171 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು.

ದಾಖಲೆಯ ರನ್ ಗಳಿಕೆ

ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ್ತಿ ಸುಜೀ ಬೇಟ್ಸ್ 66 ಎಸೆತಗಳಲ್ಲಿ 124 ರನ್ ಬಾರಿಸಿದರು. ಇದಕ್ಕೆ ಉತ್ತರವಾಗಿ ಆಡಿದ ದಕ್ಷಿಣ ಆಫ್ರಿಕಾ ವನಿತೆಯರು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಗಳಿಸುವಷ್ಟರಲ್ಲಿ ಹೈರಾಣಾದರು.

ಆದರೆ, ದಕ್ಷಿಣ ಆಫ್ರಿಕಾ ವನಿತೆಯರ ಗೋಳು ಇಷ್ಟಕ್ಕೇ ನಿಲ್ಲಲಿಲ್ಲ. ಕೆಲವು ಗಂಟೆಗಳ ವಿರಾಮದ ಬಳಿ ಹಗಲು ರಾತ್ರಿ ಪಂದ್ಯದಲ್ಲಿ ಮತ್ತೆ ಇಂಗ್ಲೆಂಡ್ ತಂಡವನ್ನು ಎದುರಿಸಬೇಕಿತ್ತು.

ಗಾಯದ ಮೇಲೆ ಉಪ್ಪು ಸವರಿದಂತೆ ಮೊದಲೇ ಸುಸ್ತಾಗಿದ್ದ ದಕ್ಷಿಣ ಆಫ್ರಿಕಾ ಬೌಲರ್‌ಗಳ ಮೇಲೆ ಇಂಗ್ಲೆಂಡ್ ಬ್ಯಾಟ್ಸ್‌ವುಮೆನ್‌ಗಳು ಇನ್ನೂ ದೊಡ್ಡ ಪ್ರಹಾರ ನಡೆಸಿದರು.

ಎರಡನೆಯ ಅತಿ ವೇಗದ ಶತಕ

ಎರಡನೆಯ ಅತಿ ವೇಗದ ಶತಕ

ನ್ಯೂಜಿಲೆಂಡ್ ಮಹಿಳೆಯರು ನಿರ್ಮಿಸಿದ ದಾಖಲೆಯನ್ನು ಪುಡಿಗಟ್ಟಿದ ಇಂಗ್ಲೆಂಡ್ ವನಿತೆಯರು 250 ರನ್ ಚಚ್ಚಿದರು.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಆರಂಭಿಕ ಆಟಗಾರ್ತಿ ಟಾಮ್ಮಿ ಬೀಮಾಂಟ್ ಮಹಿಳಾ ಟಿ 20ಯಲ್ಲಿ ಎರಡನೆಯ ಅತಿವೇಗದ ಶತಕವನ್ನು ದಾಖಲಿಸಿದರು. ಬೀಮಾಂಟ್, ಕೇವಲ 47 ಎಸೆತಗಳಲ್ಲಿ ಶತಕ ಬಾರಿದರು.

ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 129 ರನ್ ಮಾತ್ರ ಗಳಿಸಿದರು.

ಒಂದೇ ದಿನದಲ್ಲಿ 40 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಿತ್ತು 466 ಕೊಟ್ಟ ದಕ್ಷಿಣ ಆಫ್ರಿಕಾ ವನಿತೆಯರು, 40 ಓವರ್‌ಗಳ ಬ್ಯಾಟಿಂಗ್‌ನಲ್ಲಿ 12 ವಿಕೆಟ್ ಕಳೆದುಕೊಂಡು ಬಾರಿಸಿದ್ದು 279 ರನ್‌ಗಳನ್ನು ಮಾತ್ರ.

ನ್ಯೂಜಿಲೆಂಡ್ ವನಿತೆಯರ ಅಬ್ಬರ

ನ್ಯೂಜಿಲೆಂಡ್ ವನಿತೆಯರ ಅಬ್ಬರ

ಪುರುಷರ ತಂಡಗಳಿಗೆ ತಾವೇನೂ ಕಮ್ಮಿ ಇಲ್ಲ ಎಂಬಂತೆ ಮಹಿಳಾ ಕ್ರಿಕೆಟಿಗರೂ ಸಾಲು ಸಾಲು ದಾಖಲೆಗಳನ್ನು ಬರೆಯುತ್ತಿದ್ದಾರೆ. ಮಾತ್ರವಲ್ಲ, ಮಹಿಳಾ ಕ್ರಿಕೆಟ್ ಎಂದರೆ ನಿಧಾನಗತಿಯ ಆಟ ಎಂಬ ಅಪವಾದವನ್ನು ತೊಡೆದುಹಾಕುತ್ತಿದ್ದಾರೆ.

ಅದಕ್ಕೆ ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ನಿರ್ಮಿಸಲಾದ ದಾಖಲೆಗಳೇ ಸಾಕ್ಷಿ. ಟಿ 20ರಲ್ಲಿ ವಿಶ್ವದಾಖಲೆ ನಿರ್ಮಿಸುವ ಕೆಲವು ದಿನಗಳ ಮುಂಚೆಯಷ್ಟೇ ನ್ಯೂಜಿಲೆಂಡ್ ವನಿತೆಯರು ಐರ್ಲೆಂಡ್ ವಿರುದ್ಧ 50 ಓವರ್‌ಗಳ ಪಂದ್ಯದಲ್ಲಿ 490 ರನ್ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದರು. ಅಲ್ಲದೆ, ಈ ಸರಣಿಯ ಮೂರೂ ಪಂದ್ಯಗಳಲ್ಲಿ ನಾನೂರರ ಗಡಿ ದಾಟಿದ್ದು ವಿಶೇಷ.

Story first published: Thursday, June 21, 2018, 17:05 [IST]
Other articles published on Jun 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X