ಅಂಡರ್‌ 19 ವಿಶ್ವಕಪ್ 2022: ಭಾರತ vs ದ. ಆಪ್ರಿಕಾ, ಸಮಯ, ಸ್ಥಳ, ಸ್ಕ್ವಾಡ್, ನೇರಪ್ರಸಾರ ಮಾಹಿತಿ

ಭಾರತ ಹಾಗೂ ದಕ್ಷಿಣ ಆಪ್ರಿಕಾ ತಂಡಗಳು ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ ಬಳಿಕ ಈ ಎರಡು ದೇಶಗಳ ಅಂಡರ್‌-19 ತಂಡಗಳು ಈಗ ಮುಖಾಮುಖಿಯಾಗುತ್ತಿದೆ. ಐಸಿಸಿ ಅಂಡರ್‌19 ವಿಶ್ವಕಪ್‌ನಲ್ಲಿ ಈ ಎರಡು ತಂ೦ಡಗಳು ಶನಿವಾರ ಮುಖಾಮುಖಿಯಾಗಲಿದ್ದು ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಅಂಡರ್‌19 ವಿಶ್ವಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎನಿಸಿದ್ದು ಕಿರಿಯರ ವಿಶ್ವಕಪ್‌ಅನ್ನು ಭಾರತ ಈವರೆಗೆ ನಾಲ್ಕು ಬಾರಿ ಗೆದ್ದಿದೆ. ಭಾರತ ಅಂಡರ್‌19 ವಿಶ್ವಕಪ್‌‌ನಲ್ಲಿ ಕೊನೆಯ ಬಾರಿಗೆ 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿತ್ತು. ಆದರೆ 2020ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಫೈನಲ್‌ವರೆಗೆ ತಲುಪುದ್ದ ಭಾರತ ಬಾಂಗ್ಲಾದೇಶದ ವಿರುದ್ಧ ಸೋತು ರನ್ನರ್‌ಅಪ್ ಎನಿಸಿಕೊಂಡಿದೆ.

ಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗ

ಈ ಬಾರಿ ಭಾರತೀಯ ತಂಡಕ್ಕೆ ಯಶ್‌ ಧುಲ್ ನಾಯಕತ್ವವಿದ್ದು ಸಾಕಷ್ಟು ಭರವಸೆಯನ್ನು ತಂಡ ಮೂಡಿಸಿದೆ. ವಿಶ್ವಕಪ್‌ ಪಂದ್ಯಕ್ಕೂ ಮುನ್ನ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದೆ. ಆದರೆ ದಕ್ಷಿಣ ಆಫ್ರಿಕಾ ಅಂಡರ್‌19 ತಂಡ ಕೂಡ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.

ತಂಡಗಳು:
ಭಾರತ ಅಂಡರ್‌ 19 ಸ್ಕ್ವಾಡ್: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಆಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಅಂಗದ್ ಬಾವಾ, ಮಾನವ್ ಪರಾಖೆ, ಕೌಶಲ್ ತಂಬ್ , ಆರ್ ಎಸ್ ಹಂಗರ್ಗೇಕರ್, ವಾಸು ವತ್ಸ್, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.
ಮೀಸಲು ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರಾನ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ, ಅಮೃತ್ ರಾಜ್ ಉಪಾಧ್ಯಾಯ.

ಗಿಲ್‌ಕ್ರಿಸ್ಟ್‌ ಬಳಿಕ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ರಿಷಭ್ ಪಂತ್ಗಿಲ್‌ಕ್ರಿಸ್ಟ್‌ ಬಳಿಕ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ರಿಷಭ್ ಪಂತ್

ದಕ್ಷಿಣ ಆಫ್ರಿಕಾ ಅಂಡರ್‌ 19 ಸ್ಕ್ವಾಡ್: ಜಾರ್ಜ್ ವ್ಯಾನ್ ಹೀರ್ಡನ್ (ನಾಯಕ), ಲಿಯಾಮ್ ಆಲ್ಡರ್, ಮ್ಯಾಥ್ಯೂ ಬೋಸ್ಟ್, ಡೆವಾಲ್ಡ್ ಬ್ರೆವಿಸ್, ಮೈಕೆಲ್ ಕೋಪ್ಲ್ಯಾಂಡ್, ಎಥಾನ್ ಕನ್ನಿಂಗ್ಹ್ಯಾಮ್, ವ್ಯಾಲೆಂಟೈನ್ ಕಿಟೈಮ್, ಕ್ವೆನಾ ಮಫಕಾ, ಗೆರ್ಹಾರ್ಡ್ ಮೇರಿ, ಅಫಿವೆ ಮ್ನ್ಯಾಂಡಾ, ಆಂಡಿಲ್ ಸಿಮೆಲೇನ್, ಜೇಡ್ ಸ್ಮಿತ್, ಜೋಸ್ ಸೊಲೊಮನ್ಸ್, ಜೋಸ್ ಸೊಲೊಮನ್ಸ್ ಸ್ಟೀಫನ್ಸನ್, ಅಸಾಖೆ ತ್ಶಾಕಾ.
ಮೀಸಲು ಆಟಗಾರರು: ಹಾರ್ಡಸ್ ಕೋಯೆಟ್ಜರ್, ರೊನಾನ್ ಹರ್ಮನ್, ಕ್ಯಾಲೆಬ್ ಸೆಲೆಕಾ.

AB De Villiers ಭಾರತೀಯರನ್ನು ಖುಷಿ ಪಡಿಸಲು ಹೀಗೆ ಮಾಡಿದ್ರಾ | Oneindia Kannada

ಪಂದ್ಯದ ಮಾಹಿತಿ:
ಪಂದ್ಯದ ದಿನಾಂಕ ಹಾಗೂ ಆರಂಭ: ಭಾರತ ಹಾಗೂ ದಕ್ಷಿಣ ಆಪ್ರಿಕಾ ಅಂಡರ್‌ 19 ತಂಡಗಳ ವಿಶ್ವಕಪ್ ಪಂದ್ಯ ಜನವರಿ 15ರಂದು ಶನುವಾರ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಆರಂಭವಾಗಲಿದೆ.
ನೇರಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್: ಈ ಪಂದ್ಯ ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ವೀಕ್ಷಣೆ ಮಾಡಬಹುದು.

For Quick Alerts
ALLOW NOTIFICATIONS
For Daily Alerts
Story first published: Friday, January 14, 2022, 23:26 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X