ವಿಜಯ್ ಹಜಾರೆ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ!

ಬೆಂಗಳೂರು, ಅಕ್ಟೋಬರ್ 10: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 10) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 10, ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡ 9 ರನ್ ರೋಚಕ ಜಯ ಗಳಿಸಿದೆ. ಕೆಎಲ್ ರಾಹುಲ್, ದೇವದತ್ ಪಡಿಕ್ಕಳ್, ನಾಯಕ ಮನೀಷ್ ಪಾಂಡೆ ಸೊಗಸಾದ ಬ್ಯಾಟಿಂಗ್‌ನಿಂದ ರಾಜ್ಯ ತಂಡಕ್ಕೆ ಗೆಲುವು ಒಲಿದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕದಿಂದ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ 58, ಪಡಿಕ್ಕಳ್ 79, ಪಾಂಡೆ 62, ರೋಹನ್ ಕದಮ್ 32, ಶರತ್ ಬಿಆರ್ 28, ಕೃಷ್ಣಪ್ಪ ಗೌತಮ್ 22, ಅಭಿಮನ್ಯು ಮಿಥುನ್ 14 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 7 ವಿಕೆಟ್ ಕಳೆದು 312 ರನ್ ಬಾರಿಸಿತ್ತು.
ಗುರಿ ಬೆನ್ನತ್ತಿದ ಮುಂಬೈ ಪರ ಶಿವಂ ದೂಬೆಯ ಶತಕದಾಟ ವ್ಯರ್ಥಗೊಂಡಿತು. ಯಶಸ್ವಿ ಜೈಸ್ವಾಲ್ 22, ಆದಿತ್ಯ ತಾರೆ 32, ಸಿದ್ದೇಶ್ ಲಾಡ್ 34, ಸೂರ್ಯ ಕುಮಾರ್ ಯಾದವ್ 26, ಶಿವಂ ದೂಬೆ 118, ಶಾರ್ದೂಲ್ ಠಾಕೂರ್ 26 ರನ್‌ನೊಂದಿಗೆ ಮುಂಬೈ 48.1 ಓವರ್‌ಗೆ ಸರ್ವ ಪತನ ಕಂಡು 303 ರನ್ ಪೇರಿಸಲಷ್ಟೇ ಶಕ್ತವಾಯ್ತು.
ಕರ್ನಾಟಕ ಇನ್ನಿಂಗ್ಸ್‌ನಲ್ಲಿ ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ಧೃಮಿಲ್ ಮಟ್ಕರ್, ಸಿದ್ಧೇಶ್ ಲಾಡ್ ತಲಾ 1 ವಿಕೆಟ್ ಪಡೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮುಥುನ್ 3, ಪ್ರಸಿದ್ಧ್ ಕೃಷ್ಣ 2, ಕೃಷ್ಣಪ್ಪ ಗೌತಮ್ 3, ರೋನಿತ್ ಮೋರೆ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications