ಪ್ರೊ ಪ್ಲೇಯರ್ಸ್‌ನಂತೆ ಬ್ಯಾಟ್‌ ಬೀಸ್ತಾಳೆ ಈ ಪೋರಿ: ವೈರಲ್ ವಿಡಿಯೋ

ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಓಡಾಡುತ್ತಿದೆ. ಕೇರಳದವಳು ಎನ್ನಲಾದ ಪುಟಾಣಿ ಪೋರಿಯೊಬ್ಬಳು ಅನುಭವಿ, ದಿಟ್ಟ ಬ್ಯಾಟ್ಸ್‌ಮನ್‌ಗಳಂತೆ ಬ್ಯಾಟ್ ಬೀಸುತ್ತಿರುವ ಈ ವಿಡಿಯೋ ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ (ಟ್ವಿಟರ್ ವಿಡಿಯೋ: ಹಿಂದುಸ್ತಾನ್ ಟೈಮ್ಸ್).

ವಿಶ್ವಕಪ್‌ನಲ್ಲಿ ಗಂಗೂಲಿ-ದ್ರಾವಿಡ್ ಸ್ಫೋಟಕ ಶತಕ ಬಾರಿಸಿದ್ದು ಇದೇ ದಿನ!

ಈಕೆಯ ಹೆಸರು ಮೆಹೆಕ್ ಎನ್ನಲಾಗುತ್ತಿದೆ. ಸ್ಟಂಪ್ಸ್ ಮುಂದೆ ಹೆಲ್ಮೆಟ್ ಧರಿಸಿ, ಗ್ಲೌಸ್ ಹಾಕಿ, ಬ್ಯಾಟ್ ಬೀಸುತ್ತಿರುವ ಈ ಹುಡುಗಿ ಥೇಟ್ ದೊಡ್ಡ ಆಟಗಾರರಂತೆಯೇ ಕ್ರಿಕೆಟ್ ಕೌಶಲಗಳನ್ನು ಪ್ರದರ್ಶಿಸಿದ್ದಾಳೆ. ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರರು ತೋರಿಕೊಳ್ಳುವ ಅಪರೂಪದ ಶಾಟ್‌ಗಳನ್ನು ಹುಡುಗಿ ತೋರಿಸಿಕೊಟ್ಟಿದ್ದಾಳೆ.

ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!

ಇನ್‌ಸ್ಟಾಗ್ರಾಮ್‌ನಲ್ಲಿ ಟ್ವಿಟರ್‌ನಲ್ಲಿ ಮತ್ತು ಫೇಸ್ಬುಕ್‌ ಎಲ್ಲದರಲ್ಲೂ ಈ ಹುಡುಗಿಯ ಬ್ಯಾಟಿಂಗ್‌ ವಿಡಿಯೋ ಹೆಚ್ಚು ವೀಕ್ಷಿಸಲ್ಪಡುತ್ತಿದೆ. ಅನೇಕ ಅಭಿಮಾನಿಗಳು ಈ ಹುಡುಗಿಯ ವಿಡಿಯೋಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಮೊದಲಾದವರ ಟ್ಯಾಗ್ ಹಾಕಿ ಪೋಸ್ಟ್‌ ಮಾಡಿಕೊಳ್ಳುತ್ತಿದ್ದಾರೆ.

ಉತ್ತಮ ತರಬೇತಿ ದೊರೆತರೆ ಈ ಹುಡುಗಿ ನಾಳೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಲೂಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, May 26, 2021, 21:38 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X