ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ದಂಡ ಹಾಕಬೇಕು, ಇಲ್ಲವೇ ಅಮಾನತು ಮಾಡಬೇಕು : ಮೈಕಲ್ ವಾನ್

virat kohli

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳ ಜಯ ಸಾಧಿಸಿ ಸರಣಿಯನ್ನ ಗೆದ್ದು ಬೀಗಿದೆ. ಆದ್ರೂ ಮೂರನೇ ದಿನದಲ್ಲಾದ ವಿವಾದವನ್ನ ಹೊರಗಿಟ್ಟು ಮಾತನಾಡಲು ಸಾಧ್ಯವಿಲ್ಲ. ಅದ್ರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ದಕ್ಷಿಣ ಆಫ್ರಿಕಾ ಭಾರತ ನೀಡಿರುವ 212 ರನ್‌ಗಳ ಗುರಿ ಬೆನ್ನಟ್ಟುತ್ತಿರುವಾಗ, ಮೂರನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದ ಡೀನ್ ಎಲ್ಗರ್‌ ಔಟ್ ಎಂದು ಆನ್‌ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ತೀರ್ಪು ನೀಡಿದ್ರು. ಆದ್ರೆ ಡೀನ್ ಎಲ್ಗರ್‌ ಅದನ್ನ ರಿವೀವ್ ತೆಗೆದುಕೊಂಡ್ರು.

ಡಿಆರ್‌ಎಸ್ LBW ನಾಟೌಟ್ ವಿವಾದ: ಜಗತ್ತೇ ನೋಡಿದೆ, ತೀರ್ಪು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದ ಬೌಲಿಂಗ್ ಕೋಚ್ಡಿಆರ್‌ಎಸ್ LBW ನಾಟೌಟ್ ವಿವಾದ: ಜಗತ್ತೇ ನೋಡಿದೆ, ತೀರ್ಪು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದ ಬೌಲಿಂಗ್ ಕೋಚ್

ಡಿಆರ್‌ಎಸ್ ರಿವೀವ್‌ನಲ್ಲಿ ಚೆಂಡು ಅತ್ಯಂತ ಸ್ಪಷ್ಟವಾಗಿ ಇನ್‌ಲೈನ್‌ನಲ್ಲಿ ಬೀಳುತ್ತಿದ್ದು, ಇಂಪ್ಯಾಕ್ಟ್‌ ಇನ್‌ ಲೈನ್‌ನಲ್ಲಿ ಸಾಗಿದ್ರೂ ಸಹ ವಿಕೆಟ್‌ನಿಂದ ಮೇಲ್ಬಾಗದಲ್ಲಿ ಸಾಗುತ್ತಿರುವುದನ್ನ ತೋರಿಸಿ ನಾಟೌಟ್‌ ನೀಡಲಾಯಿತು. ಇದನ್ನು ಕಂಡ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಷ್ಟೇ ಅಲ್ಲದೆ, ಸ್ವತಃ ಆನ್‌ಫೀಲ್ಡ್‌ನಲ್ಲಿ ಔಟ್ ಎಂದು ತೀರ್ಪು ನೀಡಿದ್ದ ಅಂಪೈರ್ ಮರೈಸ್ ಎರಾಸ್ಮಸ್ ಅಚ್ಚರಿಗೊಳಗಾಗಿದ್ದಾರೆ.

ಡಿಆರ್‌ಎಸ್ ತೀರ್ಪಿನಿಂದ ರೊಚ್ಚಿಗೆದ್ದ ವಿರಾಟ್ ಕೊಹ್ಲಿ ಮತ್ತು ಟೀಂ ಡಿಆರ್‌ಎಸ್‌ ವಿರುದ್ಧ ಕಿಡಿ ಕಾರಿದ್ರು. ಸ್ಟಂಪ್ ಮೈಕ್ ಬಳಿ ತೆರಳಿ ವಿರಾಟ್ ತಮ್ಮ ಅಸಮಾಧಾನ ಹೊರಹಾಕಿದ್ರು. ಪಂದ್ಯ ಪ್ರಸಾರಕರು ಇದರ ಕಡೆಗೂ ಹೆಚ್ಚು ಗಮನಹರಿಸುವಂತೆ ಟೀಕಿಸಿದ್ರು.

"ನಿಮ್ಮ ತಂಡವು ಚೆಂಡನ್ನು ಹೊಳೆಸುವಾಗ ಅವರ ಮೇಲೂ ಗಮನವನ್ನ ಕೇಂದ್ರೀಕರಿಸಿ. ಎದುರಾಳಿ ತಂಡವನ್ನ ಮಾತ್ರವಲ್ಲ. ಯಾವಾಗಲೂ ಜನರನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿರುವಿರಿ "ಎಂದು ಕೊಹ್ಲಿ ಸ್ಟಂಪ್ ಮೈಕ್‌ಗೆ ಹೇಳಿದರು.

ಆದ್ರೆ ಕೊಹ್ಲಿಯ ಮಾತುಗಳಿಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫಾಕ್ಸ್ ಕ್ರಿಕೆಟ್‌ನೊಂದಿಗಿನ ಸಂವಾದದ ಸಂದರ್ಭದಲ್ಲಿ , ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ನಡೆಯಬಾರದು, ಐಸಿಸಿ ಕೂಡ ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ಐಸಿಸಿ ಈ ಕುರಿತಾಗಿ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದ್ದಾರೆ.

ಈ ಕುರಿತಾಗಿ ಮಾತು ಮುಂದುವರಿಸಿದ ವಾನ್ ''ನೀವು ಹತಾಶರಾಗಿದ್ದರೂ ಅಥವಾ ಇಲ್ಲದಿದ್ದರೂ ನೀವು ಹಾಗೆ ವರ್ತಿಸಲು ಸಾಧ್ಯವಿಲ್ಲ. ಸಹಜವಾಗಿ, ನಿಮ್ಮ ವಿರುದ್ಧ ಏನಾದರೂ ನಡೆಯುತ್ತಿದೆ ಎಂದು ನೀವು ಭಾವಿಸಿದಾಗ ಪಿಚ್‌ನಲ್ಲಿ ನಾವು ಅಂತಹ ಕ್ಷಣಗಳನ್ನು ಹೊಂದಿದ್ದೇವೆ ಮತ್ತು ಹತಾಶೆ ಅನುಭವಿಸುವುದು ಸಂಪೂರ್ಣವಾಗಿ ಸರಿ. ಆದರೆ, ನೀವು ತಂಡದ ನಾಯಕರಾಗಿ ಆ ರೀತಿ ವರ್ತಿಸಿದಾಗ, ಐಸಿಸಿ ಮಧ್ಯಪ್ರವೇಶಿಸಬೇಕು ಮತ್ತು ಅಂತಹದನ್ನು ಸಂಭವಿಸಲು ಅನುಮತಿಸುವುದಿಲ್ಲ ಎಂದು ವಾನ್'' ಫಾಕ್ಸ್ ಕ್ರಿಕೆಟ್‌ನಲ್ಲಿ ಹೇಳಿದರು.

ಜೊತೆಗೆ ಅಂತರಾಷ್ಟ್ರೀಯ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಆ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ. ಅವರಿಗೆ ದಂಡ ವಿಧಿಸಬೇಕು ಅಥವಾ ಅಮಾನತುಗೊಳಿಸಬೇಕು ಎಂದು ಮೈಕಲ್ ವಾನ್ ಹೇಳಿದ್ದಾರೆ.

ಟೀಂ ಇಂಡಿಯಾ ನೀಡಿದ 212 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ದಿನ, ಒಂದು ಸೆಷನ್ ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ಪರ ಕೀಗನ್ ಪೀಟರ್ಸನ್ 82, ರಾಸ್ಸಿ ವ್ಯಾನ್ ಡರ್ ಡುಸ್ಸೆನ್ ಅಜೇಯ 41, ಟೆಂಬಾ ಬವುಮಾ ಅಜೇಯ 32 ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Rahane ಮತ್ತು Pujara ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫುಲ್ ಗರಂ ಆಗಿ Virat Kohli ಹೇಳಿದ್ದೇನು? |Oneindia Kannada

ದಕ್ಷಿಣ ಆಫ್ರಿಕಾ ಪಂದ್ಯ ಗೆಲ್ಲಲು ಮತ್ತು ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೀಗನ್ ಪೀಟರ್ಸನ್ ಪಂದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Story first published: Saturday, January 15, 2022, 10:13 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X