ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI ranking: ಅಗ್ರಸ್ಥಾನದಲ್ಲಿ 2019 ವರ್ಷ ಮುಗಿಸಿದ ಕೊಹ್ಲಿ, ರೋಹಿತ್

Virat Kohli, Rohit Sharma end 2019 at top of ICC ODI rankings

ನವದೆಹಲಿ, ಡಿಸೆಂಬರ್ 24: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2019ರ ವರ್ಷವನ್ನು ಐಸಿಸಿ ಅಗ್ರಸ್ಥಾನದೊಂದಿಗೆ ಮುಗಿಸಿದ್ದಾರೆ. ಸದ್ಯದ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ವಿರಾಟ್ ನಂ.1 ಸ್ಥಾನದಲ್ಲಿದ್ದರೆ, ರೋಹಿತ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಮುಖ್ಯವಾಗಿ ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದು ಇಬ್ಬರಿಗೂ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಗಟ್ಟಿಯಾಗಲು ನೆರವು ನೀಡಿದೆ.

ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!

ನೂತನ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರರು ತಂಡಗಳ ಮಾಹಿತಿ ಕೆಳಗಿದೆ.

ನಂ. 10ರೊಳಗೆ ಇಬ್ಬರು ಭಾರತೀಯರು

ನಂ. 10ರೊಳಗೆ ಇಬ್ಬರು ಭಾರತೀಯರು

ಏಕದಿನ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ (887 ರೇಟಿಂಗ್ ಪಾಯಿಂಟ್), ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ (873) ಇದ್ದಾರೆ. ಪಾಕಿಸ್ತಾನದ ಬಾಬರ್ ಅಝಮ್ (834), ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್, ನ್ಯೂಜಿಲೆಂಡ್‌ನ ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಜೋ ರೂಟ್, ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟರ್ ಡಿ ಕಾಕ್ ಅನಂತರದ ಸ್ಥಾನಗಳಲ್ಲಿದ್ದಾರೆ.

ಜಸ್‌ಪ್ರೀತ್‌ ಬೂಮ್ರಾ ಕಿಂಗ್

ಜಸ್‌ಪ್ರೀತ್‌ ಬೂಮ್ರಾ ಕಿಂಗ್

ಗಾಯಾಳಾಗಿ ಕೊಂಚ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ಏಕದಿನ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ನಂ.1 ಸ್ಥಾನದಲ್ಲೇ ವರ್ಷವನ್ನು ಕೊನೆಗೊಳಿಸಿದ್ದಾರೆ. 2ರಿಂದ 5ರಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಇದ್ದಾರೆ.

ರೋಹಿತ್ ಶರ್ಮಾ ಮೊದಲಿಗ

ರೋಹಿತ್ ಶರ್ಮಾ ಮೊದಲಿಗ

2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರರಲ್ಲಿ ಭಾರತ ರೋಹಿತ್ ಶರ್ಮಾ 1490 ರನ್‌ನೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈ ಸಾಲಿನಲ್ಲಿ ವಿರಾಟ್ ಕೊಹ್ಲಿ (1377 ರನ್), ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ (1345), ಆಸ್ಟ್ರೇಲಿಯಾದ ಆ್ಯರನ್ ಫಿಂಚ್ (1141), ಪಾಕಿಸ್ತಾನದ ಬಾಬರ್ ಅಝಮ್ (1092) ಅನಂತರದ ಸ್ಥಾನಗಳಲ್ಲಿದ್ದಾರೆ.

ಬೆನ್ ಸ್ಟೋಕ್ಸ್ ಟಾಪರ್

ಬೆನ್ ಸ್ಟೋಕ್ಸ್ ಟಾಪರ್

ಏಕದಿನ ಕ್ರಿಕೆಟ್‌ನಲ್ಲಿ ಆಲ್ ರೌಂಡರ್‌ಗಳ ಸಾಲಿನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ಪಾಕಿಸ್ತಾನದ ಇಮಾದ್ ವಾಸಿಮ್, ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್, ಅಫ್ಘಾನ್‌ನ ರಶೀದ್ ಖಾನ್ ಮೊದಲ 10ನೇ ಶ್ರೇಯಾಂಕದಲ್ಲಿದ್ದಾರೆ. ಇನ್ನು ತಂಡಗಳಲ್ಲಿ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಆಸ್ಟ್ರೇಲಿಯಾ 5ರಲ್ಲಿ ಸ್ಥಾನ ಪಡೆದಿವೆ.

Story first published: Tuesday, December 24, 2019, 22:15 [IST]
Other articles published on Dec 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X