ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಗ ಅನಾರೋಗ್ಯ ಪೀಡಿತನಾಗಿದ್ದಾನೆ ಎಂದು ವಿರಾಟ್ ಕೊಹ್ಲಿ ತಾಯಿಗೆ ಅನ್ನಿಸಿದ್ದೇಕೆ?

Virat Kohlis Mom Wasnt Very Happy When He Started His Fitness Regime

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್‌ಗೆ ಫಿಟ್‌ನೆಸ್ ಮೂಲಕ ಹೊಸದೊಂದು ದೃಷ್ಟಿಕೋನವನ್ನು ನೀಡಲು ಆರಂಭಿಸಿದವರು. ಅತ್ಯಂತ ಫಿಟ್ ಆಗಿದ್ದು ಇತರ ಅಟಗಾರರಿಗೂ ವಿರಾಟ್ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಜಿಮ್‌ನಲ್ಲಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದಾರೆ.

ಆದರೆ ವಿರಾಟ್ ಕೊಹ್ಲಿ ಆರಂಭದ ದಿನಗಳಲ್ಲಿ ಫಿಟ್‌ನೆಸ್‌ ಫಲಿತಾಂಶ ಪಡೆಯುತ್ತಿದ್ದಾಗ ವಿರಾಟ್ ಕೊಹ್ಲಿಯ ತಾಯಿ ಸಾಕಷ್ಟು ಆತಂಕಕ್ಕೊಳಗಾಗಿದ್ದರಂತೆ. ಇದನ್ನು ಸ್ವತಃ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಜೊತೆಗೆ ಸಂದರ್ಶನದಲ್ಲಿ ಪಾಲ್ಗೊಂಡಿರುವ ಪುಟ್ಟ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು ಇದರಲ್ಲಿ ಈ ವಿಚಾರವನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.

ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!

ಮಯಾಂಕ್ ಅಗರ್ವಾಲ್ ವಿರಾಟ್ ಕೊಹ್ಲಿಗೆ ಫಿಟ್‌ನೆಸ್ ಆರಂಭಿಸಿದ ದಿನಗಳಲ್ಲಿ ತಾಯಿಯ ಅಥವಾ ಕುಟುಂಬಸ್ಥರ ಕುತೂಹಲಕಾರಿ ಸಂಭಾಷಣೆಗಳು ನೆನಪಿದೆಯಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ವಿರಾಟ್ ತಾಯಿ ನನ್ನನ್ನು ಅನಾರೋಗ್ಯಪೀಡಿತನಾಗಿದ್ದೇನೆ ಎಂದುಕೊಂಡಿದ್ದರು ಎಂದು ಹೇಳಿದ್ದಾರೆ.

ನೀನು ತುಂಬಾ ವೀಕ್ ಅಗಿದ್ದೀಯಾ, ನೀನು ಏನನ್ನೂ ತಿನ್ನುವುದಿಲ್ಲ ಹೇಳುತ್ತಿದ್ದರು. ಎಲ್ಲಾ ತಾಯಂದಿರೂ ಕೂಡ ಹೀಗೆಯೇ ಇರುತ್ತಾರೆ. ಗುಂಡಗಿದ್ದರೆ ಮಾತ್ರವೇ ಆರೋಗ್ಯವಂತರು ಎಂದು ಭಾವಿಸಿರುತ್ತಾರೆ ಎಂದು ಮಯಾಂಕ್ ಅಗರ್ವಾಲ್‌ಗೆ ವಿರಾಟ್ ಕೊಹ್ಲಿ ಹೇಳಿದರು.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ಕುತೂಹಲ ಮೂಡಿಸಿದೆ ಅಂತಿಮ ಕದನಇಂಗ್ಲೆಂಡ್ vs ವೆಸ್ಟ್ ಇಂಡೀಸ್: ಕುತೂಹಲ ಮೂಡಿಸಿದೆ ಅಂತಿಮ ಕದನ

ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನನ್ನ ಅಮ್ಮ ನನ್ನನ್ನು ಪದೇ ಪದೇ ನೀನು ಅನಾರೋಗ್ಯಕ್ಕೊಳಗಾಗಿರುವಂತೆ ಕಾಣಿಸುತ್ತಿದ್ದೀಯ ಎಂದು ಹೇಳಲು ಆರಂಭಿಸಿದ್ದರು. ಇದು ಸಾಕಷ್ಟು ತಮಾಷೆಯಾಗಿದ್ದು ಮಾತ್ರವಲ್ಲ ಕಿರಿಕಿರಿಯನ್ನೂ ಉಂಟು ಮಾಡುತ್ತಿತ್ತು ಎಂದು ಹೇಳಿದ್ದಾರೆ.

Story first published: Friday, July 24, 2020, 15:18 [IST]
Other articles published on Jul 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X